ಇದೀಗ ಸೌಜನ್ಯ ಹೋರಾಟಕ್ಕೆ ಹಿನ್ನಡೆ ಆಗುವಂತಹ ದೊಡ್ಡ ಘಟನೆ ಎಂದು ನಡೆದಿದ್ದು ಗೃಹ ಸಚಿವ ಜಿ ಪರಮೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇವತ್ತು ಧಾರವಾಡದಲ್ಲಿ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ಸೌಜನ್ಯ ಪ್ರಕರಣದ ಕೇಸ್ ಅನ್ನು ಓಪನ್ ಮಾಡಲು ಬರುವುದಿಲ್ಲ ಎಂದಿದ್ದಾರೆ. ಈ ಮೂಲಕ ಸೌಜನ್ಯ ಹತ್ಯ ಪ್ರಕರಣದ ಮರುತನಿಗೆ ಬಾರಿ ಹಿನ್ನಡೆ ಉಂಟಾಗಿದೆ.
ಇವತ್ತು ಧಾರವಾಡದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಈ ಪ್ರಕರಣದಲ್ಲಿ ಸರ್ಕಾರದ ಕೆಲಸ ಏನೂ ಇಲ್ಲ ಪ್ರಕರಣವನ್ನು ಆಗುವುದಿಲ್ಲ. ಇದೀಗ ವಿಷಯ ಪಬ್ಲಿಕ್ ಡೋಮೈನಲ್ಲಿ ಇದೆ. ಸಾರ್ವಜನಿಕವಾಗಿ ಪರ ವಿರೋಧಗಳು ಚರ್ಚೆಗಳು ಹೋರಾಟಗಳು ನಡೆಯುತ್ತಿವೆ. ಆದರೆ ಸರಕಾರ ಏನು ಮಾಡಲು ಬರುವುದಿಲ್ಲ. ಸೌಜನ್ಯ ಅತ್ಯಾಚಾರ ಹತ್ಯ ಪ್ರಕರಣದ ಮರುತನಿಕೆಯ ಮಾತು ಸದ್ಯಕ್ಕೆ ಸರ್ಕಾರದ ಬಳಿ ಇಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ ಗೃಹ ಸಚಿವ ಜಿ ಪರಮೇಶ್ವರ್.
ಗೃಹ ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಸ್ಪಂದಿಸುತ್ತಿರುವ ಮೀಡಿಯಾ !
ಈಗಾಗಲೇ, ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಪೇಟೆ ಪೇಟೆಗಳಲ್ಲೂ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಪಕ್ಷಾತೀತವಾಗಿ ಧರ್ಮಾತೀತವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, ಅದರ ಜೊತೆ ಆಗಿದೆ ಎನ್ನಲಾದ 462 ಅಸಹಜ ಸಾವುಗಳ ತನಿಖೆಗೆ ಕೂಡಾ ಒತ್ತಡ ಹೆಚ್ಚಿದೆ. ಇಡೀ ಕರ್ನಾಟಕದಲ್ಲಿ ಪ್ರತಿಭಟನೆಯ ಜ್ವರ ಏರುತ್ತಿದೆ. ಇಂತಹಾ ಸಂದರ್ಭದಲ್ಲಿ ಗೃಹಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಒಂದು ಕಾಡ್, ಮಾಜಿ ಶಾಸಕ ವಸಂತ ಬಂಗೇರರು ಸರ್ಕಾರ ತನಿಖೆ ನಡೆಸಬೇಕು, ಹೋರಾಟಗಾರರಿಗೆ ರಕ್ಷಣೆ ನೀಡಬೇಕು ಎಂದು ಟೊಂಕ ಕಟ್ಟಿ ಓಡಾಡುತ್ತಿರುವಾಗ ಗೃಹಸಚಿವರು ತೀರಾ ಕ್ಯಾಶುಯಲ್ ಆಗಿ ಹೇಳಿಕೆ ನೀಡಿದ್ದು ಹೋರಾಟಗಾರರು ಮತ್ತು ಪ್ರತಿಭಟನಾ ನಿರತ ಜನರನ್ನು ಚಿಂತೆಗೀಡು ಮಾಡುವಂತೆ ಮಾಡಿದೆ.
ಗೃಹ ಸಚಿವರ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದ್ದು ಸೌಜನ್ಯ ಪರ ಹೋರಾಟಕ್ಕೆ ತೀವ್ರ ಹಿನ್ನಡೆ ಉಂಟಾದಂತಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿಂದೆ ಸಿದ್ದರಾಮಯ್ಯನವರಿಗೆ ಕೂಡಾ ಪ್ರಶ್ನೆಯನ್ನು ಕೇಳಿದ್ದು, ಆಗ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯನವರು ಪೂರಕವಾಗಿ ಸ್ಪಂದಿಸಿದ್ದರು. ನಾನು ಓರ್ವ ನ್ಯಾಯವಾದಿಯಾಗಿ ಕೇಸನ್ನು ಸ್ಟಡಿ ಮಾಡಿ ನಿರ್ಧಾರ ಕೈಗೊಳ್ಳುವೆ ಅಂದಿದ್ದರು. ಆದರೆ ಇವತ್ತು ಗೃಹಮಂತ್ರಿಗಳ ಹೇಳಿಕೆಯೇ ವಿಚಿತ್ರವಾಗಿದೆ. ಘಟನೆಯ ತೀವ್ರತೆ ಮತ್ತು ಜನ ಮಾನಸದ ಬೇಡಿಕೆಗೆ ವಿರುಧ್ಧವಾಗಿ ಜಿ ಪರಮೇಶ್ವರ್ ಅವರು ಮಾತಾಡಿದ್ದಾರೆ. ಇದು ಖಂಡನಾರ್ಹ ಸಂಗತಿ. ಈಗಾಗ್ಗೇ ಸಾಮಾಜಿಕ ತಾಣಗಳು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಲು ತೊಡಗಿವೆ. ಇವತ್ತಿನ ಪರಮೇಶ್ವರ್ ಅವರ ಹೇಳಿಕೆ – ನ್ಯಾಯ ಕೇಳುವ ಜನರ ಬಳಿ ‘ ಮುಂದೇನು ? ‘ ಎನ್ನುವ ಪ್ರಶ್ನೆಯನ್ನು ಇಟ್ಟಿದೆ.
ಮುಂದಿನ ಹೋರಾಟ ಏನು ?
ಸರ್ಕಾರದ ಪಾತ್ರ ಇದರಲ್ಲಿ ಇಲ್ಲ ಎನ್ನುವುದು ಒಂದಷ್ಟು ಮಾತ್ರ ನಿಜ. ಸರ್ಕಾರ ಮನಸ್ಸು ಮಾಡಿದರೆ, ಇನ್ನೂ ವ್ಯಾಪಕ ಅವಕಾಶಗಳು ಇವೆ. ಸಂವಿಧಾನ ಬದ್ಧ ಕೋರ್ಟುಗಳಲ್ಲಿ ಮತ್ತೆ ಮರು ಮನವಿ ಸಲ್ಲಿಸಿ ನಿಜವಾದ ಅಪರಾಧಿಯನ್ನು ಪತ್ತೆ ಹಚ್ಚಲು ಅವಕಾಶಗಳಿವೆ ಎನ್ನಲಾಗಿದೆ. ಸಂವಿಧಾನ ಸುಪ್ರೀಂ ಕೋರ್ಟು ಎಂಬ ದೇವಾಲಯಗಳ ಕಡೆ, ಯಾವುದಕ್ಕೂ ಅಂಜದ, ಸಮಾಜವಾದಿ ಮನಸ್ಸಿನ ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಕಡೆ ಸೌಜನ್ಯಾ ಕುಟುಂಬ ಆಸೆಯಿಂದ ನೋಡುತ್ತಿದ್ದಾರೆ.
