Viral News: ಯಾವುದೇ ಪ್ರದೇಶದಲ್ಲಿ ವಿದ್ಯುತ್ ಕಡಿತಕ್ಕೆ ಸಾವಿರಾರು ಕಾರಣಗಳು ಇರುತ್ತೆ. ಮುಖ್ಯವಾಗಿ ಮಳೆಗಾಲದಲ್ಲಿ ಮಳೆ ಬಂದಾಗ ವಿದ್ಯುತ್ ತಂತಿ ಮೇಲೆ ಮರ ಬಿದ್ದೋ ಅಥವಾ ಕಂಬವೇ ಮುರಿದುಬಿದ್ದೋ ವಿದ್ಯುತ್ ಕಡಿತವಾಗುವುದು ಸಾಮಾನ್ಯ. ಆದರೆ ಇಲ್ಲೊಂದು ಮೀನು ಇಡೀ ಏರಿಯಾದ ಕರೆಂಟ್ ಅನ್ನು ತೆಗೆದು ಹಾಕಲು ಕಾರಣವಾಗಿದೆಯಂತೆ. ಅದು ಹೇಗೆ ಅಂತೀರಾ ಬನ್ನಿ ನೋಡೋಣ.
ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದ್ದು, ಭಾರೀ ವೈರಲ್ (Viral News) ಆಗಿದೆ. ನೀರಿನಲ್ಲಿರುವ ಮೀನು ಕರೆಂಟನ್ನು ಹೇಗೆ ಕಟ್ ಮಾಡಿತು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅಮೆರಿಕದ ನ್ಯೂಜೆರ್ಸಿಯಲ್ಲಿ ಹಕ್ಕಿ ಒಂದು ತನ್ನ ಹಸಿವು ನೀಗಿಸಲು ನೀರಿನಿಂದ ಮೀನನ್ನು ಬೇಟೆಯಾಡಿ ಎತ್ತುಕೊಂಡು ಹಾರಿದೆ. ಹಾಗೆ ಹಾರುತ್ತಿದ್ದ ಹಕ್ಕಿ ಅಕಸ್ಮಾತ್ ಆಗಿ ಆ ಮೀನನ್ನು ಕೆಳಕ್ಕೆ ಬೀಳಿಸಿದೆ. ದುರಾದೃಷ್ಟ ಅಂದರೆ ಆ ಮೀನು ಸೀದಾ ಹೋಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೆ ಬಿದ್ದಿದೆ. ಮೀನು ಟ್ರಾನ್ಸ್‌ಫಾರ್ಮರ್ ಬಿದ್ದ ಕೂಡಲೇ ಬೆಂಕಿ ಹತ್ತಿಕೊಂಡು ಟ್ರಾನ್ಸ್‌ಫಾರ್ಮರ್ ಡಾಮೇಜ್ ಆಗಿದೆ. ಇದರಿಂದಾಗಿ ಆ ಇಡೀ ಏರಿಯಾಕ್ಕೆ ವಿದ್ಯುತ್ ಕಡಿತಗೊಂಡಿದೆ.
ಸದ್ಯ ಊರಿನವರ ದೂರಿನ ಆಧಾರದಿಂದ, ವಿದ್ಯುತ್ ಕಡಿತವಾಗಲು ಕಾರಣ ಏನು ಎಂದು ಪರಿಶೀಲಿಸಿ ಅದನ್ನು ಸರಿ ಮಾಡಲು ಬಂದ ಸಿಬ್ಬಂದಿಗೆ ಟ್ರಾನ್ಸ್‌ಫಾರ್ಮರ್ ಮೇಲೆ ಮೀನು ಬಿದ್ದಿರುವುದು ಗೊತ್ತಾಗಿದೆ.
ಅಷ್ಟೇ ಅಲ್ಲ ಈ ವಿಚಾರವನ್ನು ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. “ಇಂದು ಆದ ವಿದ್ಯುತ್ ಕಡಿತ ಅನೇಕ ಜನರಿಗೆ ತೊಂದರೆ ಉಂಟು ಮಾಡಿದೆ. ಈ ರೀತಿ ಕೃತ್ಯ ಮಾಡಿರುವ ಆ ಆರೋಪಿಯನ್ನು ಮರೆಯಬಾರದು. ಗಿಲ್ಲಿಯನ್ (ಸತ್ತ ಮೀನು) ಕಷ್ಟಪಟ್ಟು ದುಡಿಯುತ್ತಿದ್ದ ಸಾವಿರಾರು ಮಕ್ಕಳಿಗೆ ಆತ ತಂದೆಯಾಗಿದ್ದ. ಆರೋಪಿಯು ದಕ್ಷಿಣದ ಕಡೆಗೆ ಹೋಗಿರುವುದು ಕಂಡುಬಂದಿದೆ. ಆರೋಪಿ ಬಳಿ ಬಹಳ ಬುದ್ಧಿವಂತನು ಹೌದು, ಅವನು ಕಂಡರೆ ಆತನನ್ನು ಹಿಡಿಯುವುದಕ್ಕೆ ಹೋಗಬೇಡಿ. ಜಾನ್ ಸಿಲ್ವರ್ ಅವರನ್ನು ಸಂಪರ್ಕಿಸಿ. ಅವರೇ ನಮ್ಮ ಎಲ್ಲ ಮೀನುಗಳ ಪ್ರಕರಣವನ್ನು ನಿಭಾಯಿಸುತ್ತಾರೆ” ಎಂದು ಹಾಸ್ಯಮಯ ರೀತಿಯಲ್ಲಿ ವಿಚಾರವನ್ನು ಪೊಲೀಸರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸದ್ಯ ಈ ಪೋಸ್ಟ್ ಗೆ ಸಾವಿರಾರು ಮಂದಿ ಕಮೆಂಟ್‌ಗಳನ್ನು ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಲಾರಂಭಿಸಿದ್ದಾರೆ.
“ಪೊಲೀಸರಿಗೆ ಧನ್ಯವಾದಗಳು. ಇಷ್ಟೊಂದು ವಿಶೇಷವಾಗಿ ವಿಚಾರವನ್ನು ಹಂಚಿಕೊಂಡಿದ್ದಕ್ಕೆ. ಈ ಪೋಸ್ಟ್ ನೋಡಿದ ಮೇಲೆ ಈ ದಿನ ಪೂರ್ತಿ ಸಂತಸವಾಗಿರಬಹುದು”, ಇದೇ ರೀತಿ ಪೋಸ್ಟ್‌ಗಳು ಬರುತ್ತಿರಲಿ”, “ಈ ವಿಚಾರಗಳಿಂದಾಗಿ ನಮ್ಮ ಪೊಲೀಸ್ ಇಲಾಖೆಯೆಂದರೆ ನಮಗೆ ಪ್ರೀತಿ”, “ನಮ್ಮನ್ನು ನಗಿಸಿದ್ದಕ್ಕೆ ಪೊಲೀಸ್ ಇಲಾಖೆಗೆ ಧನ್ಯವಾದಗಳು. ಎಂಬ ಹಲವಾರು ಪೋಸ್ಟ್ ಕಾಣಬಹುದಾಗಿದೆ.
ಇದನ್ನೂ ಓದಿ: Murder Attempt: ಜಮೀನು ಆಸೆಗಾಗಿ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿ ನೀಡಿದ ಪತ್ನಿ! ಪತಿಯ ಸ್ಥಿತಿ ಚಿಂತಾಜನಕ!
