Romeo And Juliet Laws: ಸಮ್ಮತಿಯ ಲೈಂಗಿಕ ಚಟುವಟಿಕೆಗಳಿಗೆ ಕಾನೂನು ಪರಿಣಾಮಗಳನ್ನು ಎದುರಿಸುತ್ತಿರುವ ಹದಿಹರೆಯದವರು ಮತ್ತು ಯುವ ವಯಸ್ಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಗುರುತಿಸಿ, ವಿವಿಧ ರಾಜ್ಯಗಳು ಅಂತಹ ಸನ್ನಿವೇಶಗಳಲ್ಲಿ ಕಾನೂನು ರಕ್ಷಣೆಯಾಗಿ ರೋಮಿಯೋ ಮತ್ತು ಜೂಲಿಯೆಟ್ ಕಾನೂನುಗಳನ್ನು ಈಗಾಗಲೇ ಪರಿಚಯಿಸಿವೆ.
18 ವರ್ಷದೊಳಗಿನ ಹುಡುಗಿಯರು ಮತ್ತು 18 ಕ್ಕೂ ಹೆಚ್ಚು ವಯಸ್ಸಿನ ಲಕ್ಷಾಂತರ ಹುಡುಗರು ಸಮ್ಮತಿಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಹಾಗೂ, ಹೆಣ್ಣು ಗರ್ಭಿಣಿಯಾದರೆ ಮತ್ತು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದರೆ ಅತ್ಯಾಚಾರ ಅಂತ ಹುಡುಗನನ್ನು ಬಂಧಿಸಲಾಗುತ್ತದೆ.
ಆದರೆ ಹದಿಹರೆಯದ ಪ್ರೇಮಿಗಳ ನಡುವೆ ಒಮ್ಮತದ ಮಿಲನವು ಅಪರಾಧವಾಗಬಾರದು. ಇದಕ್ಕಾಗಿ ಪಾಶ್ಚಿಮಾತ್ಯ ದೇಶಗಳ ಮಾದರಿಯಲ್ಲಿ ಭಾರತದಲ್ಲೂ ರೋಮಿಯೋ ಜೂಲಿಯೆಟ್ ಕಾಯ್ದೆ (Romeo And Juliet Laws( ಜಾರಿಗೆ ತರಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಈ ಅರ್ಜಿಯ ಬಗ್ಗೆ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿದೆ.
ಅದಲ್ಲದೆ ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 10 ರಷ್ಟು ಮಹಿಳೆಯರು 15 ವರ್ಷಕ್ಕಿಂತ ಮೊದಲು ತಮ್ಮ ಮೊದಲ ಲೈಂಗಿಕ ಸಂಭೋಗವನ್ನು ಹೊಂದಿದ್ದರು ಮತ್ತು 39 ಶೇಕಡಾ ಮಹಿಳೆಯರು ತಮ್ಮ ಮೊದಲ ಲೈಂಗಿಕ ಸಂಭೋಗವು 18 ವರ್ಷಕ್ಕಿಂತ ಮೊದಲು ಸಂಭವಿಸಿದೆ ಎಂದು ಸಿಂಘಾಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 ರ ಅಡಿಯಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಒಪ್ಪಿಗೆಯು ಅಪ್ರಸ್ತುತವಾಗಿದೆ ಮತ್ತು ಅಂತಹ ಅಪ್ರಾಪ್ತ ವ್ಯಕ್ತಿಯೊಂದಿಗೆ ಲೈಂಗಿಕ ಚಟುವಟಿಕೆಯನ್ನು ಪ್ರಯತ್ನಿಸುವ ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯಕ್ಕೆ ತಪ್ಪಿತಸ್ಥನಾಗುತ್ತಾನೆ. ಹಾಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 ರ ಅಡಿಯಲ್ಲಿ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗಿನ ಲೈಂಗಿಕತೆ ಅವಳು ಒಪ್ಪಿಗೆ ನೀಡಿದರೂ ಸಹ ಅದು ಅತ್ಯಾಚಾರ ಎನಿಸಿಕೊಳ್ಳುತ್ತದೆ ಎನ್ನಲಾಗಿದೆ.
ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಹುಡುಗರನ್ನು 18 ವಯೋಮಾನದ ಹುಡುಗಿಯರೊಂದಿಗೆ ಸಮ್ಮತಿಯ ಲೈಂಗಿಕತೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ಕಳಂಕಕ್ಕೆ ಗುರಿಯಾಗಿದ್ದಾರೆ ಎಂದು ಸಿಜೆಐ ಡಿ ವೈ. ಚಂದ್ರಚೂಡ್ ನೇತೃತ್ವದ ಪೀಠದ ಎದುರು ಅರ್ಜಿದಾರ-ವಕೀಲ ಹರ್ಷ ವಿಭೋರ್ ಸಿಂಘಾಲ್ ಹೇಳಿದರು. ಈ ಹಿನ್ನೆಲೆ, 16 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು 16-20 ವರ್ಷ ವಯಸ್ಸಿನ ಹುಡುಗರ ನಡುವಿನ ಸಮ್ಮತಿಯ ಲೈಂಗಿಕತೆಯನ್ನು ಅಪರಾಧವಲ್ಲ ಎಂದು ಪರಿಗಣಿಸುವಂತೆ ಅವರು ಮನವಿ ಮಾಡಿದ್ದಾರೆ.
ಇದಕ್ಕಾಗಿ 142 ನೇ ವಿಧಿಯನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಅನ್ವಯಿಸಬೇಕು ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ 164 ರ ಅಡಿಯಲ್ಲಿ ಸಂಭೋಗವು ಒಪ್ಪಿಗೆಯಾಗಿದೆ ಎಂದು ಮ್ಯಾಜಿಸ್ಟ್ರೇಟ್ ಮುಂದೆ ಹುಡುಗಿ ಸಾಕ್ಷಿ ಹೇಳಿದರೆ, ಹುಡುಗನನ್ನು ಕೇಸ್ ಮಾಡಬಾರದು ಎಂದು ಸಿಂಘಾಲ್ ಈ ಅರ್ಜಿಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಸಾಲ ಇನ್ನು ಅತೀ ಸುಲಭದಲ್ಲಿ ದೊರಕುತ್ತೆ! RBI ನಿಂದ ಹೊಸ ಸುದ್ದಿ!
