Madikeri:ಮಡಿಕೇರಿಯ (Madikeri)ಜನರಲ್ ತಿಮ್ಮಯ್ಯ ವೃತ್ತಕ್ಕೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಈ ವೇಳೆ ತಿಮ್ಮಯ್ಯ ಪ್ರತಿಮೆ ನೆಲಕ್ಕೆ ಉರುಳಿ ಬಿದ್ದಿದೆ.

ಇಂದು ಬೆಳ್ಳಂಬೆಳ್ಳಗೆ ಕೆ.ಎಸ್.ಆರ್. ಟಿ.ಸಿ. ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ ಡಿಕ್ಕಿ ಆದ ಪರಿಣಾಮ ಜನರಲ್ ತಿಮ್ಮಯ್ಯ ಪ್ರತಿಮೆ ನೆಲಕ್ಕೆ ಉರುಳಿದ ಘಟನೆ ವರದಿಯಾಗಿದೆ.
ಮಡಿಕೇರಿಯಲ್ಲಿ ಹೆಚ್ಚಿನ ಮಂಜು ಆವರಿಸಿದ್ದ ಪರಿಣಾಮ ಈ ಅವಘಡ ಸಂಭವಿಸಿದ್ದು,ಬಸ್ ಚಾಲಕನಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಕೆ.ಎಸ್.ಆರ್. ಟಿ.ಸಿ. ಬಸ್ ಮಂಜು ಮುಸುಕಿದ ರಸ್ತೆಯಲ್ಲಿ ಬಂದು ನೇರವಾಗಿ ವೃತ್ತಕ್ಕೆ ಡಿಕ್ಕಿ ಆದ ಹಿನ್ನಲೆ ಈ ದುರ್ಘಟನೆ ನಡೆದಿದ್ದು, ಇದೇ ಮೊದಲ ಬಾರಿಗೆ ವೀರ ಸೇನಾಧಿಕಾರಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಭಾರಿ ಹಾನಿ ಸಂಭವಿಸಿ ನೆಲಕ್ಕುರುಳಿದ ಘಟನೆ ವರದಿಯಾಗಿದೆ.
