Home » Dress Code: ಉನ್ನತ ಶಿಕ್ಷಣ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಾವಳಿ ಬಿಡುಗಡೆ ಮಾಡಿದ ಸರಕಾರ!

Dress Code: ಉನ್ನತ ಶಿಕ್ಷಣ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಾವಳಿ ಬಿಡುಗಡೆ ಮಾಡಿದ ಸರಕಾರ!

0 comments
Dress Code

Dress Code: ಸರ್ಕಾರ ಉನ್ನತ ಶಿಕ್ಷಣ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಾವಳಿ ಬಿಡುಗಡೆ ಮಾಡಿದೆ. ಹೌದು, ಅಸ್ಸಾಂನ ಶಿಕ್ಷಣ ಸಚಿವಾಲಯ (Ministry of Education, Assam) ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಡ್ರೆಸ್ ಕೋಡ್ (Dress Code) ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ ಕರ್ತವ್ಯ ನಿರ್ವಹಿಸುವಾಗ ಕ್ಯಾಶುಯಲ್ ಉಡುಗೆಗಳಾದ ಟಿ-ಶರ್ಟ್, ಜೀನ್ಸ್ ಮತ್ತು ಲೆಗ್ಗಿಂಗ್ಸ್ ಧರಿಸದಂತೆ ಸೂಚನೆ ನೀಡಿದೆ.

ಈ ಬಗ್ಗೆ ಅಸ್ಸಾಂ ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, “ಉನ್ನತ ಶಿಕ್ಷಣ ಸಂಸ್ಥೆಗಳ ಕೆಲವು ಶಿಕ್ಷಕರು ತಮ್ಮ ಆಯ್ಕೆಯ ಉಡುಪನ್ನು ಧರಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ಉಡುಪುಗಳು ಸಾರ್ವಜನಿಕ ವಲಯ ಒಪ್ಪಿಕೊಳ್ಳುವಂತಿಲ್ಲ. ಹೀಗಾಗಿ ಅವರ ಹಳೆಯ ಡ್ರೆಸ್‌ಕೋಡ್‌ ಬದಲಾಗಬೇಕು” ಎಂದು ತಿಳಿಸಿದೆ.

ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಶಿಕ್ಷಕರು ಟೀ ಶರ್ಟ್ ಮತ್ತು ಜೀನ್ಸ್ ಮತ್ತು ಮಹಿಳಾ ಶಿಕ್ಷಕರು ಲೆಗ್ಗಿಂಗ್ಸ್ ಧರಿಸುವಂತಿಲ್ಲ. ಪುರುಷ ಶಿಕ್ಷಕರಿಗೆ ಸೂಕ್ತವಾದ ಔಪಚಾರಿಕ ಅಂಗಿ ಮತ್ತು ಪ್ಯಾಂಟ್, ಧೋತಿ-ಪೈಜಾಮ ಧರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಹೇಳಿದೆ. ಹಾಗೆಯೇ ಮಹಿಳಾ ಶಿಕ್ಷಕರು ಯೋಗ್ಯವಾದ ಸಲ್ವಾರ್ ಸೂಟ್, ಸೀರೆ, ಮೇಖೇಲಾ-ಚಾದರ್ ಮತ್ತು ಇತರ ಸಾಂಪ್ರದಾಯಿಕ ಉಡುಪುಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ತಿಳಿಸಿದೆ.

ಪುರುಷ ಮತ್ತು ಮಹಿಳಾ ಶಿಕ್ಷಕರು ಸ್ವಚ್ಛ, ಸಾಧಾರಣ ಮತ್ತು ಸಭ್ಯವಾದ ಬಟ್ಟೆಗಳನ್ನು ಸಮಚಿತ್ತದ ಬಣ್ಣಗಳಲ್ಲಿ ಧರಿಸಬೇಕು, ಬಣ್ಣೆಗಳು ಆಕರ್ಷಕ ಬಣ್ಣಗಳಲ್ಲಿ ಇರಬಾರದು. ಮುಖ್ಯವಾಗಿ ಕ್ಯಾಶುಯಲ್ ಮತ್ತು ಪಾರ್ಟಿ ಉಡುಪುಗಳನ್ನು ಕಡ್ಡಾಯವಾಗಿ ತಪ್ಪಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Viral News: ಟಾಪ್‌ ಮತ್ತು ಶಾರ್ಟ್ಸ್‌ ಧರಿಸಿದ ಲಲನೆಯಿಂದ ಗಾಳಿಯಲ್ಲಿ ಗನ್‌ ಬೀಸುತ್ತಾ ಪ್ರದರ್ಶನ! ವೈರಲ್‌ ಆಯ್ತು ವೀಡಿಯೋ!!

You may also like