Bengaluru: ವ್ಯಕ್ತಿಯೊಬ್ಬ ವಿಮಾನದಲ್ಲಿ ಗಗನಸಖಿಗೆ (Air Hostess) ಮೈ ಮುಟ್ಟಿ ನಿನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತಿಯಾ ಎಂದು ಕೇಳಿದ್ದೂ ಮಾತ್ರವಲ್ಲದೆ ಗಗನಸಖಿಯ ಅಂಗಾಂಗ ಸ್ಪರ್ಶಿಸಿ ಅಸಭ್ಯವಾಗಿ (Sexual Harassment) ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿ ಮಾಲ್ಡೀವ್ಸ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಎನ್ನಲಾಗಿದೆ. ಅಷ್ಟಕ್ಕೂ ಈ ರೀತಿ ಕೇಳಿದವನಿಗೆ ಮುಂದೇನಾಯ್ತು ಗೊತ್ತಾ ?! ಇಲ್ಲಿದೆ ನೋಡಿ ಮಾಹಿತಿ.
ಈತ ವಿದೇಶಿ ಪ್ರಜೆಯಾಗಿದ್ದು, ಹೆಸರು ಅಕ್ರಂ ಅಹಮದ್ ಎಂದಾಗಿದೆ. ಅಕ್ರಂ ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ವಿಮಾನದಲ್ಲಿ ಗಗನ ಸಖಿಗೆ ನೀನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತಿಯಾ.? ಎಷ್ಟು ಡಾಲರ್ ಕೊಟ್ರೆ ಬರ್ತಿಯಾ? ಎಂದು ಕೇಳಿದ್ದಾನೆ. ಇಷ್ಟೇ ಅಲ್ಲದೆ, ಕ್ರೂ ಸರ್ವಿಸ್ ಗೆ 10 ಡಾಲರ್ ಬದಲಾಗಿ 100 ಡಾಲರ್ ನೀಡ್ತಿನಿ. ಅದನ್ನು ನೀನೆ ಇಟ್ಟುಕೋ ಎಂದು ಹೇಳಿದ್ದಾನೆ. 100 ಡಾಲರ್ ಕೊಟ್ರೆ ಸಾಕಾ? ಅಥವಾ ಇನ್ನೂ ಬೇಕೆ ಎಂದೆಲ್ಲಾ ಕೇಳಿ, ಅಸಭ್ಯವಾಗಿ ವರ್ತಿಸಿದ್ದಾನೆ.
ಗಗನಸಖಿ ತನ್ನ ಸೀಟಿನ ಬಳಿ ಹೋಗುವಾಗ ಆಕೆಯ ದೇಹದ ಅಂಗಾಂಗಗಳನ್ನು ಮುಟ್ಟಿ ಆಕೆಗೆ ತೀವ್ರ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ಕೊನೆಗೆ ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ಮೇಲೆ ಎದ್ದು ನಿಲ್ಲುತಿದ್ದನು. ಈ ವೇಳೆ ಕುಳಿತುಕೊಳ್ಳಿ ಎಂದು ತಿಳಿಸಿದಾಗ ಮತ್ತೊರ್ವ ಗಗನ ಸಖಿಗೂ ಮುಜುಗರ ಉಂಟು ಮಾಡುವ ರೀತಿ ಮಾತಾಡಿದ್ದನು ಎಂದು ಹೇಳಲಾಗಿದೆ.
ಈ ಬಗ್ಗೆ ಗಗನಸಖಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆಕೆಯ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಅಂದಹಾಗೆ ವಿದೇಶಿ ಪ್ರಜೆ ಬಂಧಿತ ಆರೋಪಿ ಅಕ್ರಂ ಅಹಮದ್ ಬಿಜಿನೆಸ್ ವೀಸಾದಲ್ಲಿ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Dress Code: ಉನ್ನತ ಶಿಕ್ಷಣ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಾವಳಿ ಬಿಡುಗಡೆ ಮಾಡಿದ ಸರಕಾರ!
