Viral Video: ದಿನಂಪ್ರತಿ ಒಂದಲ್ಲ ಒಂದು ವಿಡಿಯೋ(Video) ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video)ಆಗಿ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ಕೆಲವು ನಮ್ಮ ಮೊಗದಲ್ಲಿ ಹಾಸ್ಯ ತರಿಸಿದರೆ,ಮತ್ತೆ ಕೆಲವು ನಮ್ಮ ಕಣ್ಣ ಮುಂದೆ ಜೀವನದ ಸ್ವಾರಸ್ಯಕರ ಸಂಗತಿಯ ಕುರಿತ ವಿಚಾರಗಳನ್ನೂ ಅನಾವರಣ ಮಾಡಿ ನಮ್ಮನ್ನು ನಅಚ್ಚರಿಗೆ ತಳ್ಳುತ್ತವೆ. ಇದೇ ರೀತಿಯ ವೀಡಿಯೋ ವೊಂದು ವೈರಲ್ ಆಗಿದೆ.
ಸಾಮಾನ್ಯವಾಗಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳನ್ನು ಬೇರೆ ಕಡೆಗೆ ಪ್ರಯಾಣ ಬೆಳೆಸುವಾಗ ಬಸ್ಸಿನಲ್ಲಿ ವಾಹನಗಳಲ್ಲಿ ಕೊಂಡೊಯ್ಯುವುದನ್ನು ನೋಡಿರುತ್ತೀರಿ! ಆದ್ರೆ, ಇಲ್ಲೊಬ್ಬ ಮಹಿಳೆ ಸುಬ್ರಮಣ್ಯನ ವಾಹನವಾದ ಮಯೂರವನ್ನು ವಿಮಾನದಲ್ಲಿ ಮಡಿಲಲ್ಲಿ ಇಟ್ಟುಕೊಂಡು ಪ್ರಯಾಣ ಮಾಡಿದ್ದಾಳೆ. ಇದನ್ನು ನೋಡಿ ಸಹಜವಾಗಿಯೇ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಬೆಕ್ಕು, ನಾಯಿ, ಗಿಳಿ ಹೀಗೆ ಇನ್ನಿತರ ಸಾಕು ಪ್ರಾಣಿಗಳನ್ನು ಒಯ್ಯುವುದು ಕಂಡಾಗ ಹೆಚ್ಚೇನು ನಮಗೆ ಅಚ್ಚರಿ ಆಗದು. ಆದರೆ, ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋವನ್ನು ಹೆಚ್ಚಿನ ಮಂದಿ ವೀಕ್ಷಣೆ ಮಾಡಿದ್ದಾರೆ. ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವ ಈ ದೃಶ್ಯವನ್ನು ‘ವೈಲ್ಡ್ ಕಂಟೆಂಟ್’ ಎಂಬ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಮಹಿಳೆಯೊಬ್ಬರು ದೊಡ್ಡ ನವಿಲನ್ನು (Peacock)ಪ್ರೀತಿಯಿಂದ ಹಿಡಿದು ವಿಮಾನದೊಳಗೆ ಬರುತ್ತಿರುವ ದೃಶ್ಯ ಕಂಡು ನೆಟ್ಟಿಜನ್ಸ್ ಶಾಕ್ ಆಗಿದ್ದು, ಆ ಬಳಿಕ ಆ ಮಹಿಳೆ ಮಯೂರವನ್ನು ತನ್ನ ಮಡಿಲಿನಲ್ಲಿ ಕೂರಿಸುತ್ತಾರೆ. ಈ ದೃಶ್ಯವನ್ನು ವಿಮಾನದಲ್ಲಿದ್ದ ಸಹಪ್ರಯಾಣಿಕರು ಸೆರೆ ಹಿಡಿದಿದ್ದು, ಆ ನವಿಲು ಕೂಡಾ ಅಷ್ಟೇ ಪ್ರೀತಿಯಿಂದ ಮಗುವಿನಂತೆ ಮಡಿಲಿನಲ್ಲಿ ಕುಳಿತುಕೊಂಡಿದ್ದು ನೋಡುಗರಲ್ಲಿ ಅಚ್ಚರಿ ಮೂಡಿಸುತ್ತದೆ. ಈ ವಿಡಿಯೋ 2022ರಲ್ಲೇ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡ ಈ ವೀಡಿಯೋ, ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಈ ದೃಶ್ಯ ಕಂಡು ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
https://www.facebook.com/951thewowfactor/videos/471373307961447/?app=fbl
