Home » Aadhaar: UIDAI ನಿಂದ ಬಿಗ್‌ ಮಾಹಿತಿ! ಮೋಸ ಹೋಗದಿರಿ ಸಾರ್ವಜನಿಕರೇ, ಆಧಾರ್‌ ಮಾಹಿತಿಯನ್ನು ಇಲ್ಲಿ ಶೇರ್‌ ಮಾಡಬೇಡಿ!

Aadhaar: UIDAI ನಿಂದ ಬಿಗ್‌ ಮಾಹಿತಿ! ಮೋಸ ಹೋಗದಿರಿ ಸಾರ್ವಜನಿಕರೇ, ಆಧಾರ್‌ ಮಾಹಿತಿಯನ್ನು ಇಲ್ಲಿ ಶೇರ್‌ ಮಾಡಬೇಡಿ!

2 comments
Aadhaar

Aadhaar: ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ (Aadhaar Card Update) ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ. ಆದರೆ, ಎಚ್ಚರ!! ಆಧಾರ್ ಮಾಹಿತಿ ಶೇರ್ ಮಾಡಿ ಮೋಸ ಹೋಗದಿರಿ. ಹೌದು, ಗ್ರಾಹಕರೇ, ಆಧಾರ್‌ (Aadhaar) ಮಾಹಿತಿಯನ್ನು ಇಲ್ಲಿ ಶೇರ್‌ ಮಾಡಬೇಡಿ. ಈ ಬಗ್ಗೆ UIDAI ಬಿಗ್‌ ಮಾಹಿತಿ ನೀಡಿದೆ.

ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರ ಟ್ವಿಟ್ಟರ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದು, ಎಕ್ಸ್‌ (ಟ್ವಿಟ್ಟರ್‌)ನಲ್ಲಿ ಯುಐಡಿಎಐ ಎಚ್ಚರಿಕೆಯನ್ನು ನೀಡಿದೆ. “ವಂಚಕರಿಂದ ಎಚ್ಚರವಾಗಿರಿ. ಯುಐಡಿಎಐ ಎಂದಿಗೂ ನಿಮ್ಮ ಆಧಾರ್‌ ಅನ್ನು ನವೀಕರಿಸಲು ಇಮೇಲ್ ಅಥವಾ ವಾಟ್ಸಾಪ್ ಮೂಲಕ ನಿಮ್ಮ ಪಿಒಐ/ಪಿಒಎ ದಾಖಲೆಗಳನ್ನು ಕೇಳುವುದಿಲ್ಲ. #myAadhaarPortal ಮೂಲಕ ಅಥವಾ ಹತ್ತಿರದ ಆಧಾರ್ ಕೇಂದ್ರಗಳಲ್ಲಿ ಮಾತ್ರ ನಿಮ್ಮ ಆಧಾರ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಿ. ಆಧಾರ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯುವುದಕ್ಕೆ UIDAIನ ಅಧಿಕೃತ ವೆಬ್‌ಸೈಟ್‌ http://uidai.gov.in ಗೆ ಭೇಟಿ ನೀಡಿ ” ಎಂದು ತಿಳಿಸಿದೆ.

ಇತ್ತೀಚಿಗೆ ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ಹಣವನ್ನು ಕಬಳಿಸುವವರ ಸಂಖ್ಯೆ ಹೆಚ್ಚಾಗಿದೆ. ನಕಲಿ ಸಂದೇಶವನ್ನು ಕಳಿಸಿ ಬ್ಯಾಂಕ್ ಖಾತೆಯಿಂದ ಹಣವನ್ನು ಎಗರಿಸುತ್ತಾರೆ. ನಿವೇನಾದರೂ ಆಧಾರ್, ಬ್ಯಾಂಕ್ ಖಾತೆ ವಿವರ ನೀಡಿದರೆ ನಿಮ್ಮ ಖಾತೆಯ ಹಣ ಖಾಲಿಯಾಗುತ್ತದೆ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳಲು ಯಾವಾಗಲೂ ಎಚ್ಚರದಿಂದಿರುವುದು ಒಳ್ಳೆಯದು.

ಇದನ್ನೂ ಓದಿ: Aziz Qureshi Controversy: ಒಂದೆರಡು ಕೋಟಿ ಮುಸ್ಲಿಮರು ಸತ್ತರೆ ತೊಂದರೆಯಿಲ್ಲ- ಕಾಂಗ್ರೆಸ್‌ ನಾಯಕನ ವಿವಾದಾತ್ಮಕ ಹೇಳಿಕೆ!!!

You may also like

Leave a Comment