Moon soil: ಚಂದ್ರಯಾನ 3 ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಆಗಿ ಇವತ್ತು ಇಡೀ ಭಾರತ ಪ್ರಾರ್ಥಿಸುತ್ತಿದೆ. ಇನ್ನು ಗಗನ ನೌಕೆ ಚಂದ್ರನ ಅಡಿ ಇಡಲು ಸುಮಾರು 40 ನಿಮಿಷಗಳ ಕಾಲ ಕಾಯಬೇಕಿದೆ. ಅಷ್ಟರಲ್ಲಿ ಚಂದ್ರನ ಮೇಲಿನ ಮಣ್ಣಿನ (Moon soil) ಬಗ್ಗೆ ಚರ್ಚೆಯ ವ್ಯಾಪಕವಾಗುತ್ತಿದೆ. ಚಂದ್ರನ ಮಣ್ಣು ಅದೊಂದು ಊರಿನ ಮಣ್ಣಿನ ತರ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾದರೆ ಚಂದನ ಮೇಲ್ಮೈಯ ಮಣ್ಣು ಯಾವ ಊರಿನ ಮಣ್ಣಿನ ತರ ಇದೆ ಎಂದು ನೋಡೋಣ. ಹೌದು ಚಂದನ ಮೇಲಿನ ಮಣ್ಣು, ತಮಿಳುನಾಡಿನ ಒಂದು ಊರಿನ ಮಣ್ಣನ್ನು ಹೋಲುತ್ತದೆ ಎನ್ನಲಾಗುತ್ತಿದೆ.
ಎಲ್ಲರಿಗೂ ಗೊತ್ತಿರುವಂತೆ ತಮಿಳುನಾಡಿನ ಮಣ್ಣು ಮಾತ್ರವಲ್ಲ ತಮಿಳುನಾಡಿನ ಮಣ್ಣಿನ ಮಗನಿಗೂ ಚಂದ್ರಯಾನಕ್ಕೂ ಅವಿನಾಭಾವ ಸಂಬಂಧವಿದೆ. ಯೋಜನೆಗಳ ಮತ್ತು ಚಂದ್ರಯಾನಗಳ ಕ್ಷಿಪಣಿ ವಿಜ್ಞಾನಿ ಹುಟ್ಟಿರುವುದು ತಮಿಳುನಾಡಿನಲ್ಲಿ. ಅವರು ಬೇರಾರು ಅಲ್ಲ ನಮ್ಮ ಹೆಮ್ಮೆಯ ಡಾ. ಅಬ್ದುಲ್ ಕಲಾಂ. ಅಷ್ಟೇ ಅಲ್ಲದೆ ಚಂದ್ರಯಾನ 2ರ ಮಿಷನ್ ಡೈರೆಕ್ಟರ್ ಆಗಿರೋ ದವರು ನಾಯಿ ಸ್ವಾಮಿ ಅಂದರ ಮತ್ತು ಇದೀಗ ಚಂದ್ರಯಾನ್ ಮೂರರ ಪ್ರಾಜೆಕ್ಟ್ ಡೈರೆಕ್ಟರ್ ಆಗಿರುವುದು ವೀರಮುತ್ತುವೇಲು ಪಿ ಎನ್ನುವವರು. ಆದುದರಿಂದ, ತಮಿಳುನಾಡಿನ ಮಣ್ಣಿಗೂ ಚಂದ್ರನ ಮಣ್ಣಿಗೂ ಸಂಬಂಧವಿದೆ.
ನಿಜಕ್ಕೂ ತಮಿಳುನಾಡಿನಿಂದ ವಿಶೇಷವಾದ ಮಣ್ಣನ್ನು ಇಸ್ರೋ ಸಂಸ್ಥೆಗೆ ಸಾಗಿಸಲಾಗಿದೆ. ನಾಮಕಲ್ ಎನ್ನುವ ಊರಿನಿಂದ ಸಾಮರ್ಥ್ಯದ ಪ್ರದೇಶಗಾಗಿ ಇಸ್ರೋಗೆ ಮಂಟಕುಗಳು ಮಣ್ಣನ್ನು ಸಾಗಿಸಿವೆ ಯಾಕೆಂದರೆ ಈ ಮಣ್ಣು ಚಂದ್ರನ ಮೇಲ್ಮೈಯನ್ನು ಹೋಲುವ ಕಾರಣ ಪರೀಕ್ಷೆಗಾಗಿ ನಾಮಕ್ಕಲ್ಲಿಂದ ಮಣ್ಣನ್ನು ಬೆಂಗಳೂರಿಗೆ ತಂದಾಗಿದೆ. ತಮಿಳುನಾಡಿನ ನಾಮಕ್ಕಲ್ ನಿಂದ ಈ ವಿಶೇಷ ಮಣ್ಣನ್ನು ತಂದು ಸಾಫ್ಟ್ ಲ್ಯಾಂಡಿಂಗ್ ಮಾಡುವ ಲ್ಯಾಂಡರ್ ನ ಪಡೆದಿದೆ. ಒಂದು ವೇಳೆ ಯಾವುದೇ ಸಮಸ್ಯೆ ನಡೆಯದೆ ಸಾಫ್ಟ್ ಲ್ಯಾಂಡಿಂಗ್ ಆದರೆ ಆಗ ಅದರ ಯಶಸ್ಸು ತಮಿಳುನಾಡಿಗೆ ಸಿಕ್ಕಂತೆ, ತಮಿಳುನಾಡಿನ ಮಣ್ಣಿಗೂ ಕೂಡ ಸಿಗಬೇಕು.
ಚಂದ್ರನ ದಕ್ಷಿಣ ದ್ರುವದ ಮಣ್ಣನ್ನು ಹೋಲುತ್ತದೆ. ಈ ನಾಮಕಲ್ ಪ್ರದೇಶದ ಮಣ್ಣು ಕಳೆದ ಬಾರಿ ಕೂಡ ನಾಮ ಕಲ್ಲಿಂದ ಟ್ರಕ್ಕುಗಟ್ಟಲೆ ಮಣ್ಣನ್ನು ಇಸ್ರೋಗೆ ಸಾಗಿಸಲಾಗಿತ್ತು. ನಾಮಕಲ್ ಪ್ರದೇಶದಲ್ಲಿ ಈ ರೀತಿಯ ಮಣ್ಣು ಹೇರಳವಾಗಿದ್ದು ಇಸ್ರೋ ಕೇಳಿದಷ್ಟು ಮಣ್ಣನ್ನು ಆ ಊರಿನಿಂದ ಕಳಿಸಲಾಗಿತ್ತು.
ಚಂದ್ರನ ಮೇಲ್ಮೈಯಲ್ಲಿ ಅನರ್ಥೋಸೈಟ್ ಎಂಬ ರೀತಿಯ ಮಣ್ಣು ಇದೆ. ಇದು ನಾಮಕಲ್ ಊರಿನ ಮಣ್ಣನ್ನು ಹಲವು ರೀತಿಗಳಲ್ಲಿ ಹೋಲುತ್ತದೆ. ಚಂದ್ರಯಾನ್ 2 ಸಂದರ್ಭದಲ್ಲಿ ಕೂಡಾ 50 ಟನ್ ನಷ್ಟು ಮಣ್ಣನ್ನು ಇಸ್ರೋಗೆ ಕಳಿಸಲಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚಂದ್ರಯಾನ 3 ಅನ್ನು ಚಂದ್ರನಲ್ಲಿಗೆ ಕಳಿಸಿದ ಮೂಲ ಉದ್ದೇಶ ಮುಂದಿನ ಗಗನ ಲೋಕಗಳನ್ನು ಸುರಕ್ಷಿತವಾಗಿ ಹೇಗೆ ಚಂದ್ರನಲ್ಲಿ ಇಳಿಸಬಹುದು ಎನ್ನುವುದನ್ನು ತಿಳಿದುಕೊಳ್ಳಲು. ಮತ್ತು ಅದೇ ರೀತಿ ಚಂದ್ರನ ಮೇಲ್ಮೈನಲ್ಲಿ ಜೀವ ಪೋಷಕವಾದ ನೀರು ಅಥವಾ ನೀರಾವಿಯ ಲಭ್ಯತೆ ಇದೆಯೇ ಎನ್ನುವುದನ್ನು ಪತ್ತೆ ಹಚ್ಚಲು. ಇದೀಗ ಕ್ಷಣಗಳನ್ನು ಆರಂಭವಾಗಿದ್ದು ಇನ್ನೂ ಕೆಲವೇ ನಿಮಿಷಗಳಲ್ಲಿ ಚಂದ್ರಯಾನ ಮೂರ ರೋವರ್ ಚಂದ್ರನ ಭೂ ಮೇಲೆ ಇಳಿಯಲಿದೆ.
ಇದನ್ನೂ ಓದಿ: ಚಂದ್ರಯಾನದ ಯಶಸ್ಸಿಗೆ ಕ್ಷಣಗಣನೆ, ಚಂದ್ರನ ಸನ್ನಿಧಿಯ ನೇರ ಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
