Home » Guest teacher recruitment: ಅತಿಥಿ ಉಪನ್ಯಾಸಕರ ನೇಮಕಕ್ಕೆ ತಾತ್ಕಾಲಿಕ ವೇಳಾಪಟ್ಟಿ

Guest teacher recruitment: ಅತಿಥಿ ಉಪನ್ಯಾಸಕರ ನೇಮಕಕ್ಕೆ ತಾತ್ಕಾಲಿಕ ವೇಳಾಪಟ್ಟಿ

0 comments

 

Guest teacher recruitment : ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರನ್ನು(Guest teacher recruitment) ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಲೈನ್ ಮೂಲಕ ಕೌನ್ಸೆಲಿಂಗ್‌ ನಡೆಸಿ ನೇಮಕ ಮಾಡಿಕೊಳ್ಳುವಂತೆ ತಿಳಿಸಿದೆ. ಆನ್‌ಲೈನ್‌ನಲ್ಲಿ ಸಲ್ಲಿಸಲು ಅರ್ಜಿ dce.karnataka.gov.in ಸೈಟ್ ಸಂಪರ್ಕಿಸಬಹುದು.

ತಾತ್ಕಾಲಿಕ ವೇಳಾಪಟ್ಟಿ: ಆಸಕ್ತರು ಆ.25 ರಿಂದ ಸೆ.2ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಸೆ.4-ರಾಜ್ಯ ವ್ಯಾಪ್ತಿ ಮೆರಿಟ್‌ ಪಟ್ಟಿ ಪ್ರಕಟಿಸುವುದು, ಸೆ.8- ತಾತ್ಕಾಲಿಕ ಕಾರ್ಯಭಾರ ಹಾಗೂ ಕೌನ್ಸೆಲಿಂಗ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಸೆ.11 ರಿಂದ 15- ಮೆರಿಟ್ ಪಟ್ಟಿ ಅನ್ವಯ ಕಾಲೇಜು ಆಯ್ಕೆಗೆ ಕೌನ್ಸೆಲಿಂಗ್, ಸೆ.16-ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ.

ವಿದ್ಯಾರ್ಹತೆ: 2 ವರ್ಷಗಳ ಸ್ನಾತಕೋತ್ತರ ಪದವಿ, ಪಿಎಚ್.ಡಿ., ನೆಟ್/ಸೆಟ್, ಹಿಂದಿನ ವರ್ಷಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಕಲಾ/ವಾಣಿಜ್ಯ/ಭಾಷಾ ವಿಷಯಗಳಿಗೆ ಗರಿಷ್ಠ 15 ಮತ್ತು ವಿಜ್ಞಾನ/ಪ್ರಾಯೋಗಿಕ ತರಗತಿಗಳನ್ನು ಒಳಗೊಂಡಿರುವ ತರಗ ತಿಗಳಿಗೆ 19 ತರಗತಿಗಳ ಕಾರ್ಯಭಾರ ಹಂಚಿಕೆ ಮಾಡಬೇಕು. ಕೌನ್ಸೆಲಿಂಗ್‌ ನಲ್ಲಿ ಭಾಗವಹಿಸದ ಅಭ್ಯರ್ಥಿಗಳಿಗೆ 2ನೇ ಬಾರಿಗೆ ಅವಕಾಶ ನೀಡುವುದು ಬೇಡವೆಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: Telangana : ಮದುವೆಗೆ ಹುಡುಗಿ ಹುಡುಕಿ ಕೊಟ್ಟಿಲ್ಲವೆಂದು ತಾಯಿಯ ಕೊಂದು ಕೈಕಾಲು ಕತ್ತರಿಸಿದ ಪಾಪಿ ಮಗ!

You may also like

Leave a Comment