Home » ಬೀದಿಗೆ ಬಿದ್ದ ಬಿಜೆಪಿ, ISRO ಗೆ ಬಂದಾಗ ಬಿಜೆಪಿ ನಾಯಕರನ್ನು ಗೇಟ್ ಹೊರಗೆ ನಿಲ್ಲಿಸಿ ಹಾಗೇ ಹೋದ ಪ್ರಧಾನಿ ಮೋದಿ ! ಅಸಲಿ ಕಾರಣ ಬಹಿರಂಗ !

ಬೀದಿಗೆ ಬಿದ್ದ ಬಿಜೆಪಿ, ISRO ಗೆ ಬಂದಾಗ ಬಿಜೆಪಿ ನಾಯಕರನ್ನು ಗೇಟ್ ಹೊರಗೆ ನಿಲ್ಲಿಸಿ ಹಾಗೇ ಹೋದ ಪ್ರಧಾನಿ ಮೋದಿ ! ಅಸಲಿ ಕಾರಣ ಬಹಿರಂಗ !

by ಹೊಸಕನ್ನಡ
0 comments

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ( Narendra Modi) ಬೆಂಗಳೂರಿಗೆ (Bangalore Visit) ಆಗಮಿಸಿದ್ದಾರೆ. ಕೇವಲ ಇಸ್ರೋ ವಿಜ್ಞಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಪ್ರಧಾನಮಂತ್ರಿಯವರು ನೇರ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಹುರುದುಂಬಿಸಿ ಹೊರಟ ಅವರು ರಾಜ್ಯದ ಯಾವುದೇ ಬಿಜೆಪಿ ನಾಯಕರುಗಳನ್ನು ಭೇಟಿ ಮಾಡಿಲ್ಲ. ಅದಕ್ಕೀಗ ಈ ವಿಚಾರವನ್ನು ಎತ್ತಿಕೊಂಡು ಬಿಜೆಪಿ ನಾಯಕರಗಳನ್ನು ಕಾಂಗ್ರೆಸ್ ಗೇಲಿ ಮಾಡಿ ನಕ್ಕಿದೆ.

ಬಿಜೆಪಿಯವರನ್ನು ಮಾತನಾಡಿಸದೆ ಹೋದ ವಿಷಯವನ್ನು ಎತ್ತಿಕೊಂಡು ಕಾಂಗ್ರೆಸ್ ಟ್ವೀಟ್ ಮಾಡಿದೆ. ರಾಜ್ಯದ ಬಿಜೆಪಿ ನಾಯಕರುಗಳಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಕೂಡ ಆಗುವುದಿಲ್ಲ. ಮೋದಿ ಕೋಪ ತಣ್ಣಗಾಗುವುದೂ ಇಲ್ಲ. ಬಿಜೆಪಿಗೆ ಹೊಸ ರಾಜ್ಯಧ್ಯಕ್ಷ ನೇಮಕ ಆಗುವುದು ಅನುಮಾನ. ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ ಎಂದು ಹೇಳಿ, ಮೋದಿ ಬರುವಾಗ ಬಿಜೆಪಿ ರಾಜ್ಯಾಧ್ಯಕ್ಷ ರಸ್ತೆಯಲ್ಲಿ ಇಸ್ರೋಗೆಟಿನ ಹೊರಗೆ ಬೀದಿಯಲ್ಲಿ ನಿಂತ ಫೋಟೋ ಶೇರ್ ಮಾಡಿ ನಕ್ಕಿದೆ. ರಾಜ್ಯ ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ಮಾಡಿರುವ ಈ ಟ್ವೀಟ್ ಇದೀಗ ವೈರಲ್ ಆಗಿದೆ.

 

ಪ್ರಧಾನಮಂತ್ರಿಯವರು ಚಂದ್ರಯಾನ 3 ಪ್ರಾಜೆಕ್ಟ್ ಅನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದು ಇದೀಗ ಅದರ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳಿಗೆ ಖುದ್ದು ಬಂದು ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ವೇಳೆ ರಾಜ್ಯ ಬಿಜೆಪಿ ನಾಯಕರುಗಳು ಪ್ರಧಾನಮಂತ್ರಿಯ ಭೇಟಿಯ ನಿರೀಕ್ಷೆಯಲ್ಲಿದ್ದರು. ಆದರೆ ಪ್ರಧಾನಿ ಮೋದಿ ಅವರು ಯಾವುದೇ ನಾಯಕರುಗಳನ್ನು ಭೇಟಿಯಾಗದೇ ನೇರವಾಗಿ ಇಸ್ರೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೆಹಲಿಗೆ ತೆರಳಿದ್ದಾರೆ. ಈ ಹಿಂದೆ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಮೋದಿ ಅವರು ಆಗಮಿಸಿದ್ದರು. ಚುನಾವಣಾ ಫಲಿತಾಂಶದ ನಂತರ ಮೋದಿ ರಾಜ್ಯಕ್ಕೆ ಬರುವುದು ಇದೇ ಮೊದಲ ಬಾರಿಗೆ. ಚಂದ್ರಯಾನ ಮಿಷನ್ ನ ಯಶಸ್ಸು ಕೊಟ್ಟ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಮೋದಿ ವಾಪಸ್ ಆಗಿದ್ದಾರೆ. ಆದರೆ ಈ ವಿಷಯವನ್ನು ಕಾಂಗ್ರೆಸ್ಸ ಎತ್ತಿಕೊಂಡು ಬಿಜೆಪಿಯನ್ನು ಬೀದಿಯಲ್ಲಿ ನಿಲ್ಲಿಸಿ ಕೀಟಲೆ ಮಾಡಿ ನಗುತ್ತಿದೆ.

ಈ ಸಂದರ್ಭ ಕಾಂಗ್ರೆಸ್ ಷೇರು ಮಾಡಿರುವ ಫೋಟೋದಲ್ಲಿ ಇಸ್ರೋ ಗೇಟಿನ ಹೊರಗೆ ಒಂದು ಮೂಲೆಯಲ್ಲಿ ಬಿಜೆಪಿ ನಾಯಕರಗಳು ಕಂಡು ಬರುತ್ತಿದ್ದಾರೆ ಅದನ್ನೇ ಇಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬೀದಿ ಪಾಲಾಗಿದ್ದಾರೆ ಎಂದು ಕಾಂಗ್ರೆಸ್ ನಗುತ್ತಿದೆ.

You may also like

Leave a Comment