Home » ಚಂದ್ರನಿಂದ ಭಾರತಕ್ಕೆ ಬಂದ ಮೊದಲ ಗಿಫ್ಟ್ ಪ್ರಧಾನಿ ಮೋದಿ ಪಾಲಾಯ್ತು, ಅಷ್ಟಕ್ಕೂ ಆ ಉಡುಗೊರೆಯನ್ನು ಇಲ್ಲಿಗೆ ತಂದವರು ಯಾರು ?

ಚಂದ್ರನಿಂದ ಭಾರತಕ್ಕೆ ಬಂದ ಮೊದಲ ಗಿಫ್ಟ್ ಪ್ರಧಾನಿ ಮೋದಿ ಪಾಲಾಯ್ತು, ಅಷ್ಟಕ್ಕೂ ಆ ಉಡುಗೊರೆಯನ್ನು ಇಲ್ಲಿಗೆ ತಂದವರು ಯಾರು ?

by ಹೊಸಕನ್ನಡ
0 comments

ಚಂದ್ರಯಾನ 3 (Chandrayan 3) ನೌಕೆ ಚಂದ್ರನಲ್ಲಿ ಸುರಕ್ಷಿತವಾಗಿ ತಲುಪಿ ಇದೀಗ ತನ್ನ ಕೆಲಸ ಶುರು ಮಾಡಿರುವ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ ಚಂದ್ರನಲ್ಲಿಂದ ಒಂದು ವಿಶೇಷವಾದ ಗಿಫ್ಟ್ (Gift from Chandrayan 3 ) ಭಾರತಕ್ಕೆ ಬಂದಿದ್ದು ಅದು ಇದೀಗ ನರೇಂದ್ರ ಮೋದಿಯವರನ್ನು ತಲುಪಿದ ವಿಷಯ ನಿಮಗೆ ಗೊತ್ತಾ ?

ಹೌದು, ಚಂದ್ರಯಾನ 3 ನೋವಿಗೆ ಒಂದು ವಿಶೇಷವಾದ ಸ್ಯಾಂಪಲ್ ಅನ್ನು ಭಾರತಕ್ಕೆ ಕಳ್ಸಿದೆ ಇದೀಗ ಅದು ಮೋದಿಯ ಕೈ ಸೇರಿದ್ದು ಮೋದಿಯವರು ಅದನ್ನು ತಮ್ಮ ಬ್ಯಾಗಿಗೆ ಹಾಕಿಕೊಂಡಿದ್ದಾರೆ. ಮೊದಲಿಗೆ ಆ ಗಿಫ್ಟ್ ಇಸ್ರೋ ತಲುಪಿದ್ದು, ಇಸ್ರೋ ಅದನ್ನು ಚೆನ್ನಾಗಿ ಪ್ಯಾಕ್ ಮಾಡಿಸಿ ಮೋದಿಯವರಿಗೆ ಅದನ್ನು ವಿಶೇಷ ಉಡುಗೊರೆಯಾಗಿ ನೀಡಿದೆ.

ಏನಪ್ಪಾ ಈ ಗಿಫ್ಟ್ ?, ಚಂದ್ರನಲ್ಲಿಂದ ಈ ಗಿಫ್ಟ್ ಅನ್ನು ಭಾರತಕ್ಕೆ ತಂದವರಾರು ಎಂಬ ಅನುಮಾನ ಮೂಡಿರಬಹುದು. ಈಗಾಗಲೇ ಚಂದ್ರಲೋಕದಿಂದ ಈ ಉಡುಗೊರೆ ಬಂದದ್ದು ಸತ್ಯ. ಇಸ್ರೋ ಅದನ್ನು ಪ್ಯಾಕ್ ಮಾಡಿ ಮೋದಿ ಕೈಗೆ ಇಟ್ಟದ್ದು ಕೂಡ ಸತ್ಯ, ಅಷ್ಟೇ ಅಲ್ಲ ಮೋದಿಯವರು ಇಷ್ಟಪಟ್ಟು ಅದನ್ನು ತಮ್ಮೊಂದಿಗೆ ಒಯ್ದದ್ದು ಕೂಡ ಅಷ್ಟೇ ಸತ್ಯ. ಇಸ್ರೋ, ತನ್ನ ಗಗನ ನೌಕೆ ವಿಕ್ರಂ ಲ್ಯಾಂಡರ್ ಅಲ್ಲಿ ಇಳಿದ ನಂತರ ಭಾರತಕ್ಕೆ ಕಳಿಸಿದ ಮೊದಲ ಫೋಟೋಗ್ರಾಫ್ ಅನ್ನು ಇದೀಗ ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡಿದೆ. ಆ ಫೋಟೋಗೆ ವಿಶೇಷವಾಗಿ ಫ್ರೇಮ್ ಹಾಕಿಸಿ ಅದನ್ನು ಈ ದಿನ ಮೋದಿಯವರಿಗೆ ಉಡುಗೊರೆಯಾಗಿ ನೀಡಲಾಯಿತು.

You may also like

Leave a Comment