Home » Mangalore: ಟಿಪ್ಪರ್ – ಸ್ಕೂಟರ್ ನಡುವೆ ಅಪಘಾತ, ವಿದ್ಯಾರ್ಥಿ ಸಾವು

Mangalore: ಟಿಪ್ಪರ್ – ಸ್ಕೂಟರ್ ನಡುವೆ ಅಪಘಾತ, ವಿದ್ಯಾರ್ಥಿ ಸಾವು

by Praveen Chennavara
0 comments
Mangalore

Mangalore : ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳೂರಿನ (Mangalore) ಹೊರವಲಯದ ಅಡ್ಯಾರ್‌ನಲ್ಲಿ ನಡೆದಿದೆ.

ಟಿಪ್ಪರ್- ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ಅಡ್ಯಾರ್ ಪದವು ನಿವಾಸಿ ಶರಫುದ್ದೀನ್ (16) ಎಂದು ಗುರುತಿಸಲಾಗಿದೆ. ಈತ ಮಿಲಾಗ್ರಿಸ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

ಶರಫುದ್ದೀನ್ ತನ್ನ ಗೆಳೆಯನೊಂದಿಗೆ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು ಢಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಸವಾರನಾಗಿದ್ದ ಶರಫುದ್ದೀನ್ ರಸ್ತೆಗೆಸೆಯಲ್ಪಟ್ಟು ತೀವ್ರ ರಕ್ತಸ್ರಾವವುಂಟಾಗಿತ್ತು ಕೂಡಲೇ ಸ್ಥಳೀಯರು ಶರಫುದ್ದೀನ್ ನನ್ನು ಸಮೀಪದ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪುತ್ತೂರು ನಗರ ಪೊಲೀಸ್ ಠಾಣೆಯ ಎಸೈ ಶ್ರೀಕಾಂತ್ ರಾಥೋಡ್ ಬಟ್ಕಳಕ್ಕೆ ವರ್ಗಾವಣೆ

You may also like

Leave a Comment