Belthangady: ನಾನು ನಾಳೆ ಮತ್ತೆ ಧರ್ಮಸ್ಥಳಕ್ಕೆ ದೇವಸ್ಥಾನಕ್ಕೆ ಹೋಗ್ತೇನೆ ,ನಾನ್ ಗುರುತಿಸಿದ ಆರೋಪಿಗಳನ್ನು ವಿಡಿಯೋ ಮೂಲಕ, ಮಾಧ್ಯಮಗಳ ಸಮ್ಮುಖದಲ್ಲಿ ಮಂಪರು, ಪರೀಕ್ಷೆ ನಡೆಸಬೇಕು ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿದ್ದಾರೆ.
ನಾನ್ ಗುರುತಿಸಿದ ಆರೋಪಿಗಳನ್ನು ವಿಡಿಯೋ ಮೂಲಕ, ಮಾಧ್ಯಮಗಳ ಸಮ್ಮುಖದಲ್ಲಿ ಮಂಪರು ಪರೀಕ್ಷೆ ನಡೆಸಬೇಕು
ಅವರು ಬೆಳ್ತಂಗಡಿಯಲ್ಲಿ (Belthangady) ನಡೆದ ಸೌಜನ್ಯ ಹತ್ಯೆ ಪ್ರಕರಣದ ಕುರಿತಾಗಿ ಮರು ತನಿಖೆ ಹಾಗೂ ಎಸ್.ಐ.ಟಿ.ತನಿಖೆಗೆ ಒತ್ತಾಯಿಸಿ ನಡೆದ ಬೆಳ್ತಂಗಡಿ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ನನ್ನ ಮಗಳಿಗೆ ನ್ಯಾಯ ಸಿಗಬೇಕೆಂದು ಹೋರಾಟ ನಡೆಸುತ್ತಿದ್ದೇನೆ.ನನ್ನ ಮಗಳಿಗೆ ಆದ ಅನ್ಯಾಯ ಯಾವ ಹೆಣ್ಣಿಗೂ ಆಗಬಾರದು.ಅದಕ್ಕಾಗಿ ಈ ಹೋರಾಟ ಎಂದರು.
ಕಮ್ಯುನಿಸ್ಟ್ ನಾಯಕಿ ಕಾಮ್ರೇಡ್ ನೀಲಾ ಮಾತನಾಡಿ, ಕಡಕೊಳು ಮಡಿವಾಳಪ್ಪ ಹೇಳಿದ, ‘ಬಡವನ ಹೆಂಡತಿ ಚಲುವಿ ಕಂಡ್ರೆ ಬಡ್ಡಿ ಕೊಡ್ತಾರೋ ‘ ಹೋತಿನಂತೆ ಜೋತು ಕೊಂಡು ಅಲ್ಲೇ ಕುಂತಾರೋ ‘ ಎಂದು ಹಾಡು ಹಾಡಿ ಕಮ್ಯುನಿಸ್ಟ್ ಜನರು ಧರ್ಮವನ್ನು ಮುಂದೆ ಇಟ್ಟು ಹಿಂದೆ ಗುಪ್ತವಾಗಿ ನಾವು ಮಾತಾಡೊಲ್ಲ. ಕಮ್ಯುನಿಸ್ಟ್ ರು ಮುಂದೆ ಇದ್ದು ಮಾಡ್ತಾರೆ. ಕರಬುರುಗಿಯಿಂದ ಇಲ್ಲಿಗೆ ಬಂದಿದ್ದೇನೆ ಎಂದಿದ್ದೀರಿ. ಕರಬುರುಗಿಯಲ್ಲಿ ತಪ್ಪಾದರೆ ತನಿಖೆ ಆಗುತ್ತೆ. ಇಲ್ಲಿ ತಮ್ಮ ಸುಂದರ ಊರಿನಲ್ಲಿ ಯಾಕೆ ಆಗಲ್ಲ.
ಯಾರೂ ಹೆದರದೆ ಮುಚ್ಚುಮರೆಯಿಲ್ಲದೆ ಪ್ರತಿಭಟನೆ ಮಾಡಬೇಕು. ಧರ್ಮಸ್ಥಳ ದ ಕೇಂದ್ರ ಬಿಂದುವಲ್ಲಿ ಒಂದು ಜಾದೂ ಇದೆ. ಅಲ್ಲಿ ಎಲ್ಲವೂ ಸಡನ್ನಾಗಿ ಜಾದೂ ಇದೆ. ಇಲ್ಲಿ ಧರ್ಮದ ಹೆಸರಿನಲ್ಲಿ ತಪ್ಪಿತಸ್ಥರು ತಪ್ಪಿ ಕೊಳ್ಳಲು ಬಿಡಲ್ಲ ಎಂದು ಹೇಳಿದರು.
ಮೀನಾಕ್ಷಿ ಬಾಲ್ಯಾ ಮಾತನಾಡಿ, ಎದ್ದೇಳು ಮಂಜುನಾಥ? ಇನ್ನು ಎದ್ದಿಳುವಲ್ಲೋ ? ಎಲ್ಲಿದ್ದಿಯೋ, ಇನ್ನೂ ನಿನ್ ಏನು ಹಾಕಿ ಮಲಗಿಸಿಯಾರೋ?400 ಕೊಲೆ ಮಾಡಿದವರಿಗೂ ಇಲ್ಲಿ ಏನೂ ಆಗಿಲ್ಲ. ದೇವರ ಮೇಲೆ ತಕರಾರಿಲ್ಲ. ದೇವರನ್ನು ಗುತ್ತಿಗೆ ಹಿಡಿದವರ ಮೇಲೆ ನಮ್ಮ ತಕರಾರು. ನಾವು ಕಮ್ಯುನಿಸ್ಟರೇ ಆದರೆ ನಾ ರೇಪಿಸ್ಟ್ ಅಲ್ಲ.ಇಲಿ ಸಾವಿರಾರು ಇರುತ್ತೆ. ಆದ್ರೆ ಬೆಕ್ಕುಗಳು ಕೆಲವೇ ಇರುತ್ತೆ. ನಾವು ಕಮ್ಯುನಿಸ್ಟ್ ಗಳು ನಾವು. ಬೆಕ್ಕು ಥರ ನಾಲ್ಕೇ ಜನ ಆದರೂ ಹೋರಾಟ ಬಿಡಲ್ಲ ಎಂದರು.
ಇದನ್ನೂ ಓದಿ: ಸೌಜನ್ಯ ಪ್ರಕರಣ : ನ್ಯಾಯಾಲಯದ ನಿರ್ದೇಶನ ಆಧರಿಸಿ ಸರಕಾರದಿಂದ ಕ್ರಮ- ಪರಮೇಶ್ವರ್
