Home » Mangalore: ಮಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ! ನಡೆಯಲಿದೆ ನೇರ ಸಂದರ್ಶನ, ಮಾಸಿಕ ರೂ.15 ಸಾವಿರ!!!

Mangalore: ಮಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ! ನಡೆಯಲಿದೆ ನೇರ ಸಂದರ್ಶನ, ಮಾಸಿಕ ರೂ.15 ಸಾವಿರ!!!

1 comment
Mangalore

Mangalore: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಮಂಗಳೂರಿನಲ್ಲಿ(Mangalore) ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದ್ದು, ಆಸಕ್ತರು ಭಾಗಿಯಾಗಿ ಉದ್ಯೋಗಾವಕಾವಕಾಶ ಪಡೆದುಕೊಳ್ಳಬಹುದು.

 

ಹುದ್ದೆಗಳ ಮತ್ತು ಕೆಲಸದ ಸ್ಥಳದ ವಿವರ ಹೀಗಿದೆ:

ಸೇಲ್ಸ್ ಎಕ್ಸಿಕ್ಯೂಟಿವ್ – ಸ್ಥಳ: ದಕ್ಷಿಣ ಕನ್ನಡ.

ಸೇಲ್ಸ್ ಕನ್ಸಲ್ಟಂಟ್- ಸ್ಥಳ: ದಕ್ಷಿಣ ಕನ್ನಡ.

ಸ್ಪೇರ್ ಪಾರ್ಟ್ಸ್ ಅಸಿಸ್ಟಂಟ್- ಸ್ಥಳ: ಹಾಸನ.

ಸರ್ವೀಸ್ ಅಡ್ವೆಸರ್ – ಸ್ಥಳ: ದಕ್ಷಿಣ ಕನ್ನಡ.

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಂಚನಾ ಗ್ರೂಪ್, ಮಂಗಳೂರು, ಇವರ ಸಂಯುಕ್ತಾಶ್ರಯದಲ್ಲಿ ಕಾಂಚನಾ ಗ್ರೂಪ್ ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ 31-08-2023ರ ಗುರುವಾರದಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‌ಭಾಗ್, ಮಂಗಳೂರಿನಲ್ಲಿ ಸಂದರ್ಶನ ಆಯೋಜಿಸಲಾಗಿದೆ.

ಪಿ.ಯು.ಸಿ, ಪದವಿ, ಐ.ಟಿ.ಐ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಮೇಲೆ ತಿಳಿಸಿದ ಹುದ್ದೆಗಳಿಗೆ ಮಾಸಿಕ ವೇತನ: 11,000 ದಿಂದ 15,000 ಇರಲಿದೆ.

ಇದನ್ನೂ ಓದಿ : KPSC Recruitment 2023: ಕಮರ್ಷಿಯಲ್ ಟ್ಯಾಕ್ಸ್ ಇನ್ಸ್‌ಪೆಕ್ಟರ್‌ 230 ಹುದ್ದೆಗೆ ಅರ್ಜಿ ಆಹ್ವಾನ!

You may also like

Leave a Comment