Ration Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಭಾರತದಲ್ಲಿ (India) ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ ಸರ್ಕಾರ (Government) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ.
ಆದರೆ, ಇದೀಗ ರಾಜ್ಯ ಸರ್ಕಾರ ( Karnataka Government) ಬಿಪಿಎಲ್ ಕಾರ್ಡ್ (BPL) ಮಾಡಲು ಮುಂದಾದವರಿಗೆ ಹಾಗೂ ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್ ನೀಡಿದೆ. ಹೌದು, ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡೋದಕ್ಕೂ ಮುಂದಾಗಿದೆ. ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ? ಪ್ರಸ್ತುತ ಚಾಲ್ತಿಯಲ್ಲಿದೆಯೇ ಚೆಕ್ ಮಾಡೋದು ಹೇಗೆ ? ಈ ಮಾಹಿತಿ ಓದಿ!!.
ನಿಮ್ಮ ರೇಶನ್ ಕಾರ್ಡ್ ರದ್ದು ಆಗಿದ್ಯೋ ಅಥವಾ ಚಾಲ್ತಿಯಲ್ಲಿ ಇದೆಯಾ? ಎಂಬುದನ್ನು ಈ ರೀತಿ ಚೆಕ್ ಮಾಡಿ :-
• ಆಹಾರ ಇಲಾಖೆಯ https://ahara.kar.nic.in/Home/EServices ಗೆ ಭೇಟಿ ನೀಡಿ.
• ನಿಮ್ಮ ಜಿಲ್ಲೆ ತಾಲೂಕು ಆಯ್ಕೆ ಮಾಡಿಕೊಳ್ಳಿ
• ನಿಮ್ಮ ಕಾರ್ಡ್ ರದ್ದು ಆಗಿರುವ ಬಗ್ಗೆ ತಿಂಗಳವಾರು, ವರ್ಷವಾರು
ಲೀಸ್ಟ್ ಓಪನ್ ಮಾಡಿ.
• ಲೀಸ್ಟ್ ನಲ್ಲಿ ನಿಮ್ಮ ಕಾರ್ಡ್ ನಂಬರ್ ಇದೆಯಾ ಎಂದು ಚೆಕ್ ಮಾಡಿ.
• ನಿಮ್ಮ ಪಡಿತರ ಚೀಟಿಯ ಸಂಖ್ಯೆ ಇಲ್ಲದಿದ್ದರೇ ನಿಮ್ಮ ಕಾರ್ಡ್ ರದ್ದುಗೊಂಡಿಲ್ಲ. ಚಾಲ್ತಿಯಲ್ಲಿ ಇದೆ ಎಂದರ್ಥ.
• ರೇಷನ್ ಕಾರ್ಡ್ ಸಂಖ್ಯೆ ಲೀಸ್ಟ್ ನಲ್ಲಿ ಇದ್ದರೇ, ರದ್ದಾಗಿದೆ ಎಂದರ್ಥ.
• ಆಗ ನೀವು ಮತ್ತೆ ಹೊಸ ರೇಷನ್ ಕಾರ್ಡ್ ಗಾಗಿ https://ahara.kar.nic.in ಮೂಲಕ ಅರ್ಜಿ ಸಲ್ಲಿಸಬಹುದು.
ಆಹಾರ ಇಲಾಖೆ (Food Department ) 6 ಮಾನದಂಡಗಳನ್ನು ಫಿಕ್ಸ್ ಮಾಡಿದ್ದು ಆ ಮಾನದಂಡ ಮೀರಿದಂತ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಲ್ಲದೇ, ಅಂತಹ ಬಳಕೆದಾರರಿಗೆ ಭಾರೀ ದಂಡವನ್ನು ವಿಧಿಸುವ ಚಿಂತನೆ ನಡೆಸಿದೆ.
ಬಿಪಿಎಲ್ ಕಾರ್ಡ್ ರದ್ದು, ದಂಡಕ್ಕೆ 6 ಹೊಸ ಮಾನದಂಡಗಳು
ಏನು?
• ವಾರ್ಷಿಕ 1.2 ಲಕ್ಷ ಆದಾಯವನ್ನು ಮೀರುವಂತಿಲ್ಲ.
• 3 ಹೆಕ್ಟೇರ್ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬಾರದು.
• ನಗರ ಪ್ರದೇಶದಲ್ಲಿ 1000 ಸ್ಟಯರ್ ಪೀಟ್ ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆ ಹೊಂದಿರುವಂತಿಲ್ಲ.
• ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಯಾರೂ ಸರ್ಕಾರಿ
ನೌಕರರ ಆಗಿರುವಂತಿಲ್ಲ.
• ಬಿಪಿಎಲ್ ಕಾರ್ಡ್ ಹೊಂದಿರೋರು ಆದಾಯ ತೆರಿಗೆ, ಐಟಿ ರಿಟರ್ನ್, ವಾಣಿಜ್ಯ ತೆರಿಗೆ ಪಾವತಿದಾರರು ಆಗಿರುವಂತಿಲ್ಲ.
• ಬಿಪಿಎಲ್ ಕಾರ್ಡ್ ಹೊಂದಿರುವವರು ವೈಟ್ ಬೋರ್ಟ್ ಕಾರು
ಹೊಂದಿರುವಂತಿಲ್ಲ.
• ಈ ಮಧ್ಯೆ ವೈಟ್ ಬೋರ್ಡ್ ಕಾರ್ಡ್ ಹೊಂದಿರುವಂತೆ ಬಿಪಿಎಲ್ ಕಾರ್ಡ್ ದಾರರ ಕಾರ್ಡುಗಳನ್ನು ಸದ್ಯಕ್ಕೆ ರದ್ದುಪಡಿಸೋದಿಲ್ಲ ಎಂದು ತಿಳಿಸಿದ್ದು, ಕಾರು ಹೊಂದಿದ್ದಂತ ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ರಿಲೀಫ್ ನೀಡಲಾಗಿತ್ತು.
ಇದನ್ನೂ ಓದಿ: ಶಿವಮೊಗ್ಗಕ್ಕೆ ಬಂದೇ ಬಿಟ್ಟ ಮೊದಲ ವಿಮಾನ: ಅರೇ, ಮೊದಲ ಪ್ರಯಾಣಿಕ ಇವರೇನಾ ?!
