Hyderabad: ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಕೊರುಟ್ಲಾದಲ್ಲಿ ಹೈದರಾಬಾದ್ನ(Hyderabad) ಎಂಎನ್ಸಿ(NMC )ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ದೀಪ್ತಿ ಎಂಬಾಕೆ ಪೋಷಕರ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ (Deadbody)ಪತ್ತೆಯಾದ ಘಟನೆ ವರದಿಯಾಗಿದೆ.
ಟೆಕ್ಕಿಯಾಗಿದ್ದ ಬಿ. ದೀಪ್ತಿ ಮನೆಯಿಂದಲೆ ವರ್ಕ್ ಫ್ರಮ್ ಹೋಮ್ ಮಾಡುತ್ತಾ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯ ತಂಗಿ ಬಿ. ಚಂದನಾ (20) ಕೂಡ ಮನೆಯಲ್ಲಿದ್ದಳು ಎನ್ನಲಾಗಿದೆ. ಸೋಮವಾರ ದೀಪ್ತಿ ಪೋಷಕರು ಹೈದರಾಬಾದ್ನಲ್ಲಿ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ದರಂತೆ. ಸೋಮವಾರ ರಾತ್ರಿ ಪೋಷಕರು ಇಬ್ಬರೂ ಸಹೋದರಿಯರೊಂದಿಗೆ ದೂರವಾಣಿಯಲ್ಲಿ (Phone)ಕರೆ ಮಾಡಿ ಮಾತನಾಡಿದ್ದಾರೆ. ಆದರೆ, ಮರುದಿನ ಮಧಾಹ್ನದ ಹೊತ್ತಿಗೆ ಪೋಷಕರು ದೀಪ್ತಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿಲ್ಲ ಎನ್ನಲಾಗಿದೆ. ಮತ್ತೊಂದೆಡೆ ತಂಗಿ ಚಂದನಾ ಮೊಬೈಲ್ ಕೂಡ ಸ್ವಿಚ್ ಆಫ್(Mobile Switch Off)ಆಗಿದ್ದರಿಂದ ಪೋಷಕರು ಗಾಬರಿಗೊಂಡು ನೆರೆಹೊರೆಯವರಿಗೆ ಕರೆ ಮಾಡಿದ್ದಾರೆ.
ಹೀಗಾಗಿ, ಅಕ್ಕಪಕ್ಕದವರು ಮನೆಯ ಲಿವಿಂಗ್ ರೂಮ್ ಸೋಫಾ ಬಳಿ ದೀಪಾ ಶವ ಹಾಗೂ ಅಡುಗೆಮನೆಯಲ್ಲಿ ಕೆಲವು ಮದ್ಯದ ಬಾಟಲಿಗಳನ್ನು(Drinks Bottle)ಗಮನಿಸಿದ್ದಾರೆ. ಆ ಬಳಿಕ ನೆರೆ ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ, ದೀಪ್ತಿ ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಡಿಎಸ್ಪಿ ರವೀಂದರ್ ರೆಡ್ಡಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೇಡ್ಚಲ್ನಲ್ಲಿ ಬಿ. ಟೆಕ್ ಓದುತ್ತಿದ್ದ ಆಕೆಯ ತಂಗಿ ಚಂದನಾ ನಾಪತ್ತೆಯಾಗಿದ್ದು, 30 ತೊಲ ಚಿನ್ನ ಮತ್ತು 2 ಲಕ್ಷ ರೂ.ನಗದು ನಾಪತ್ತೆಯಾಗಿರುವ ಬಗ್ಗೆ ಕುಟುಂಬದವರು ದೂರು ನೀಡಿದ್ದಾರೆ.
ಪೊಲೀಸರ ಮಾಹಿತಿ ಅನುಸಾರ, ದೀಪ್ತಿ ಗೆ ವಿಷ ಹಾಕಿಸಿ ಸಾಯಿಸಿರುವ ಸಾಧ್ಯತೆಯಿದ್ದು ಇಲ್ಲವೇ ಉಸಿರುಗಟ್ಟಿ ಮೃತಪಟ್ಟಿರಬಹುದು. ಇದರಲ್ಲಿ ಚಂದನಾ ಮತ್ತು ಆಕೆಯ ಗೆಳೆಯ ಈ ಕೃತ್ಯ ಎಸಗಿರುವ ಅನುಮಾನ ಕಾಡುತ್ತಿದೆ. ಆಕೆಯ ಸಾವಿಗೆ ನೈಜ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೆ ತಿಳಿಯಬೇಕಾಗಿದೆ.
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿರುವ ತನ್ನ ಕಿರಿಯ ಸಹೋದರನಿಗೆ ಚಂದನಾ ಧ್ವನಿ ಸಂದೇಶ ಕಳುಹಿಸಿದ್ದು, ತನ್ನ ಸಹೋದರಿಗಾಗಿ ಸ್ನೇಹಿತನ ಸಹಾಯದಿಂದ ಮದ್ಯ ಖರೀದಿಗೆ ಒಪ್ಪಿಕೊಂಡಿರುವ ಕುರಿತು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. ಅರ್ಧ ಬಾಟಲಿ ಕುಡಿದ ಬಳಿಕ ಅಕ್ಕ ನಿದ್ದೆಗೆ ಜಾರಿದ್ದು, ಆಕೆಗೆ ವಿಷಯ ತಿಳಿಸಿದ ನಂತರವೇ ಹೊರಡುವ ಉದ್ದೇಶವಿತ್ತು, ಆದರೆ ದೀಪ್ತಿ ಏಳದ ಹಿನ್ನೆಲೆ ತಾನು ಹಾಗೆಯೇ ಹೋಗಿರುವುದಾಗಿ ಚಂದನಾ ಹೇಳಿದ್ದಾಳೆ ಎನ್ನಲಾಗಿದೆ. ತನ್ನ ಸಹೋದರಿಯ ಸಾವಿನಲ್ಲಿ ತನ್ನ ಪಾತ್ರವಿಲ್ಲವೆಂದು ಆಕೆ ಹೇಳಿದ್ದಾಳೆಂದೂ ತಿಳಿದುಬಂದಿದೆ. ಹೀಗಾಗಿ, ಪೊಲೀಸರು ಚಂದನಾ ಮತ್ತು ಆಕೆಯ ಬಾಯ್ ಫ್ರೆಂಡ್ಗಾಗಿ ಶೋಧ ಕಾರ್ಯ ನಡಸುತ್ತಿದ್ದಾರೆ ಎಂದು ತಿಳಿದುಬಂದಿದೆ.
