Home » ‘ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ’ – ಕಾಂಗ್ರೆಸ್ ನ 45 ಜನ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸಂತೋಷ್ ಹೇಳಿಕೆಗೆ ಶೆಟ್ಟರ್ ವ್ಯಂಗ್ಯ

‘ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ’ – ಕಾಂಗ್ರೆಸ್ ನ 45 ಜನ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸಂತೋಷ್ ಹೇಳಿಕೆಗೆ ಶೆಟ್ಟರ್ ವ್ಯಂಗ್ಯ

by ಹೊಸಕನ್ನಡ
1 comment
BL Santosh -jagadish shettar

BL Santosh -jagadish shettar: ಬಿ ಎಲ್ ಸಂತೋಷ್ ಮೊದಲು ತಮ್ಮ ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ. ಅವರ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಮೊದಲು ಉಳಿಸಿಕೊಂಡು ಪಕ್ಷದ ಅಸ್ತಿತ್ವ ಉಳಿಸಿಕೊಂಡರೆ ಸಾಕಾಗಿದೆ ಅವರಿಗೆ. ಅದರ ಮಧ್ಯದಲ್ಲಿ ನಮ್ಮ 45 ಜನ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುತ್ತಿದ್ದಾರೆ ಸಂತೋಷ್. ಒಂದು ವೇಳೆ ಅವರ ಸಂಪರ್ಕದಲ್ಲಿ ನಮ್ಮ ಶಾಸಕರು ಇದ್ದರೆ ನಾಳೆಯೆ ಆಪರೇಷನ್ ಕಮಲ ಸ್ಟಾರ್ಟ್ ಮಾಡಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (BL Santosh -jagadish shettar) ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ನ 45 ಜನ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿ ಎಲ್ ಸಂತೋಷ್ ನಿನ್ನೆ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾಜಿ ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಟಕಿಯಾಡಿದ್ದಾರೆ. ಮೊದಲು ಬೇರೆ ಪಕ್ಷದಿಂದ ಜನರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡುವುದನ್ನು ಬಿಜೆಪಿ ನಾಯಕರು ಬಿಟ್ಟು ಬಿಡಲಿ. ಬರಿ ಆಪರೇಷನ್ ಮಾಡಿ ಸರ್ಕಾರ ರಚನೆ ಮಾಡುವ ಇಡೀ ರಾಷ್ಟ್ರದಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಆಪರೇಷನ್ ಮಾಡೋದು, ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು, ಇದೇ ಬಿಜೆಪಿಯ ದಿನನಿತ್ಯದ ನಿಮ್ಮ ಕೆಲಸವಾಗಿದೆ. ಬಿಜೆಪಿ ಪಕ್ಷವು ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಬಿಜೆಪಿ ಇದೀಗ ಮುಳುಗುತ್ತಿರೋ ಹಡಗು ಎಂದು ಶೆಟ್ಟರ್ ಟಾಂಗ್ ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಕರ್ನಾಟಕದಲ್ಲಿ ಇದೀಗ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಆಗಿರೋದು ಇವತ್ತು ಕರ್ನಾಟಕದ ಬಿಜೆಪಿಯ ಕೆಲವೇ ದಿನದ ಕೈಯಲ್ಲಿದೆ. ನೀವು ಅದರಿಂದ ಹೊರ ಬಂದರೆ ಮಾತ್ರ ನಿಮಗೆ ಭವಿಷ್ಯ. ಅಲ್ಲಿಂದ ಹೊರಬರೋಕೆ ಆಗುತ್ತೋ ಇಲ್ವೋ, ಆದರೆ ನಾನೇ ಹೊರಗೆ ಬಂದು ಬಿಟ್ಟಿದ್ದೇನೆ. ರಾಜ್ಯ ಬಿಜೆಪಿಯ ನಾಯಕರ ಪರಿಸ್ಥಿತಿ ಇದೀಗ ಇಡೀ ಜಗತ್ತಿಗೆ ಜಾಹೀರಾಗಿದೆ. ಮೊದಲು ದೆಹಲಿಯಲ್ಲಿ ಕೂತ ನಾಯಕರು ಈ ಬಗ್ಗೆ ಯೋಚನೆ ಮಾಡಬೇಕು. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲ ಬಹುಮತ ಬರಲಿಲ್ಲ. ಆದರೆ ಕಾಂಗ್ರೆಸ್ಸಿಗೆ 136 ಸೀಟು ಬಂದಿದೆ. ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳ ಸ್ವಾತಂತ್ರ್ಯಹರಣಕ್ಕೆ ಚಾಟಿ ಬೀಸಿದ ಹೈಕೋರ್ಟ್ | ಸುಳ್ಯ ಪೊಲೀಸರ FIR ಗೆ ಹೈಕೋರ್ಟ್ ತಡೆ | ಪುತ್ತೂರು ಜರ್ನಲಿಸ್ಟ್ ಯೂನಿಯನ್ ಹೋರಾಟಕ್ಕೆ ಸಂದ ಭಾರೀ ಜಯ !

You may also like

Leave a Comment