Home » ಸ್ನಿಗ್ಧ ಸುಂದರಿ ಮಲಯಾಳಂ ನಟಿ ಅಪರ್ಣಾ ನಿಗೂಢ ಸಾವಿನ ರಹಸ್ಯ ಬಯಲು!!!

ಸ್ನಿಗ್ಧ ಸುಂದರಿ ಮಲಯಾಳಂ ನಟಿ ಅಪರ್ಣಾ ನಿಗೂಢ ಸಾವಿನ ರಹಸ್ಯ ಬಯಲು!!!

by Mallika
0 comments

ಕಳೆದ 31ರಂದು ತಿರುವನಂತಪುರಂನ ಕರಮಾನದಲ್ಲಿ ತಮ್ಮ ಮನೆಯಲ್ಲಿ ಮಲಯಾಳಂನ ಖ್ಯಾತ ನಟಿ ಅಪರ್ಣಾ ಪಿ ನಾಯರ್‌ ಅವರು ಶವವಾಗಿ ಪತ್ತೆಯಾಗಿದ್ದರು. ಇವರ ಸಾವಿನ ರಹಸ್ಯ ನಿಗೂಢವಾಗಿದ್ದು, ಇದರ ರಹಸ್ಯವನ್ನು ಪೊಲೀಸರು ಈಗ ಭೇದಿಸಿದ್ದಾರೆ. ಪೊಲೀಸರು ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಸಾವಿಗೆ ಮೊದಲು ಅಪರ್ಣ ತನ್ನ ತಾಯಿ ಜೊತೆ ವೀಡಿಯೋ ಕಾಲ್‌ ಮಾಡಿ ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು, ಗಂಡನ ಕುಡಿತದ ಚಟದಿಂದ ಮಗಳು ಮಾನಸಿಕವಾಗಿ ತೊಂದರೆಗೊಳಗಾಗಿದ್ದಳು. ಆದಷ್ಟು ಬೇಗ ಈ ಜಾಗ ಬಿಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹಾಗೆನೇ ಈ ವಿಷಯಗಳನ್ನು ಮಾತನಾಡುವಾಗ ಆಕೆ ತುಂಬಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದಾರೆ. ಕರಮಾನ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ನಟಿಯ ಸಾವಿಗೆ ಕಾರಣ ಹುಡುಕುವಾಗ ಇಷ್ಟೊಂದು ಮಾಹಿತಿ ತಾಯಿಯಿಂದ ತಿಳಿದು ಬಂದಿದೆ.

ಅಪರ್ಣ ಅವರಿಗೆ 31 ವರ್ಷ ವಯಸ್ಸಾಗಿತ್ತು. ನಟಿಯ ಸಾವು ಸಿನಿ ಇಂಡಸ್ಟ್ರಿಗೆ ಬಹಳ ಆಘಾತವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಟಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದರು. ಅಪರ್ಣ ವಾರದ ಹಿಂದೆ ತಮ್ಮ ʼಇವರು ನನ್ನ ಶಕ್ತಿʼ ಎಂದು ಬರೆದುಕೊಂಡಿದ್ದು, ಈ ರೀತಿ ಯಾಕೆ ಬರೆದರು ಎಂಬ ಅನುಮಾನ ಎಲ್ಲರನ್ನೂ ಕಾಡಿದೆ.

 

You may also like

Leave a Comment