Mysore: ಮೈಸೂರು(Mysore) ನಗರದ ಅಗ್ರಹಾರದ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಯೂಟಿಪಾರ್ಲರ್ವೊಂದಕ್ಕೆ ಪೊಲೀಸರು ದಾಳಿ ನಡೆಸಿ ಐವರು ಯುವತಿಯನ್ನು ರಕ್ಷಿಸಿದ ಬಗ್ಗೆ ವರದಿಯಾಗಿದೆ.
ಅಗ್ರಹಾರದ ಆದ್ಯಾ ಬ್ಯೂಟಿ ಪಾರ್ಲರ್ ಹಾಗೂ ಕ್ಯುಟೆಕ್ ಎಂಬ ಬ್ಯೂಟಿಪಾರ್ಲರ್ ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಮೈಸೂರಿನ ಒಡನಾಡಿ ಸಂಸ್ಥೆಗೆ ಲಭ್ಯವಾಗಿತ್ತು.
ಒಡನಾಡಿ ಸಂಸ್ಥೆಯು ಈ ಬಗ್ಗೆ ವಾಟ್ಸ್ ಆಪ್ ಸಂದೇಶಗಳು, ವಿಡಿಯೊ ದಾಖಲೆಗಳನ್ನು ಸಂಗ್ರಹಿಸಿಕೊಂಡು ಕೃಷ್ಣರಾಜ ಪೊಲೀಸರಿಗೆ ಮಾಹಿತಿ ನೀಡಿದ್ದರು.ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆ ದೊರೆತಿವೆ.
ಬ್ಯೂಟಿಪಾರ್ಲರ್ಗೆ ದಾಳಿ ನಡೆಸಿದ ಪೊಲೀಸರು ದೀಪು, ರಾಹುಲ್ ವಿಜಯ್, ಸ್ವಾಮಿ, ಗುರುಪ್ರಸಾದ್, ರಾಹುಲ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣರಾಜ ಪೊಲೀಸ್ ಇನ್ಸ್ಪೆಕ್ಟರ್ ನಾಗೇಗೌಡ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಯುವಕನಿಗೆ ಚೂರಿ ಇರಿತ!!
