Ghaziabad Love Jihad: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಲವ್ ಜಿಹಾದ್(Love Jihad) ಪ್ರಕರಣಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಅದರಲ್ಲೂ ಪ್ರೀತಿ ಪ್ರೇಮ ಎಂದು ಈ ಬಲೆಗೆ ಬಿದ್ದ ಅದೆಷ್ಟೋ ಯುವತಿಯರು ಸಾವಿನ ಸುಳಿಗೆ ಸಿಲುಕಿದ್ದು ಕೂಡ ಇದೆ. ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ (Gaziabad) ನೆಲೆಸಿದ್ದ ಯುವತಿಯೊಬ್ಬಳು ಲವ್ ಜಿಹಾದ್(Ghaziabad Love Jihad ) ಬಲೆಗೆ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದೆ.
ಮೃತ ಯುವತಿಯನ್ನು ಪಿಂಕಿ ಗುಪ್ತಾ (23) ಎಂದು ಗುರುತಿಸಲಾಗಿದ್ದು, ಈಕೆ ತನ್ನ ಕೋಣೆಯಲ್ಲಿ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದಾಳೆ. ಪಿಂಕಿ ಗುಪ್ತಾ ವೈಶಾಲಿ ಪ್ರದೇಶದ ರಾಕ್ಸ್ ಫಿಟ್‌ನೆಸ್ ಎಂಬ ಜಿಮ್‌ನಲ್ಲಿ ರಿಸೆಪ್ಶನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭ ಇಸ್ಲಾಂ ಸಮುದಾಯದ ಯುವಕ ಸಾಕಿಬ್ (24) ಕೂಡ ಜಿಮ್‌ಗೆ ಬರುತ್ತಿದ್ದನಂತೆ. ಯುವತಿಯ ಕುಟುಂಬದ ಸದಸ್ಯರು ಪೊಲೀಸರಿಗೆ ನೀಡಿದ ಮಾಹಿತಿ ಅನುಸಾರ, ಸಾಕಿಬ್ ಗುಪ್ತಾಳನ್ನು ಮಾತಿನ ಮೂಲಕ ಮೋಡಿ ಮಾಡಿ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ(Live In Relationship)ಜೀವನ ಸಾಗಿಸಲು ಆರಂಭಿಸಿದ್ದನಂತೆ. ಈ ನಡುವೆ,ಆಕೆಗೆ ಕಿರುಕುಳ ನೀಡಲು ಸಾಕಿಬ್ ಆರಂಭಿಸಿದ್ದಾನೆ.
ಮೃತ(Death )ಯುವತಿ ಪಿಂಕಿ ಗುಪ್ತಾ, ವೈಶಾಲಿ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಳೆದ ಗುರುವಾರ ರಾತ್ರಿ ನಡೆದಿದೆ ಎನ್ನಲಾಗಿದ್ದು, ಈ ವಿಷಯ ತಿಳಿದ ಸಂಬಂಧಿಕರು ಆಕೆಯ ಗೆಳೆಯ ಹಾಗೂ ಆತನ ಕುಟುಂಬಸ್ಥರು ಯುವತಿಯನ್ನು ಕೊಲೆ (Murder)ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿ ಆರೋಪ ಮಾಡಿದ್ದಾರೆ.
ಪಿಂಕಿ ಗುಪ್ತ ಮತ್ತು ಸಾಕಿಬ್ ನಡುವೆ ಲವ್ವಾಗಿ ಇಬ್ಬರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವ ಸಂದರ್ಭ ಸಾಕಿಬ್ ಪಿಂಕಿಗೆ ಚಿತ್ರಹಿಂಸೆ ನೀಡುತ್ತಿದ್ದನಂತೆ. ‘ಸಾಕಿಬ್‌ನನ್ನು ಬಿಟ್ಟುಬಿಡು, ಇಲ್ಲವೇ ಆತ್ಮಹತ್ಯೆ ಮಾಡಿಕೋ’ ಎಂದು ಸಾಕಿಬ್‌ನ ತಂದೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಪಿಂಕಿ ಮನೆಯವರು ಸಾಕಿಬ್ ಮತ್ತು ಆತನ ಕುಟುಂಬಸ್ಥರು ಪಿಂಕಿ ಗುಪ್ತಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ನಡುವೆ, ಆತ್ಮಹತ್ಯೆಗೂ ಮುನ್ನ ಪಿಂಕಿ ಡೆತ್‌ನೋಟ್ ಬರೆದಿದ್ದು, ಆಕೆಯ ಕೋಣೆಯಲ್ಲಿ ಈ ಪತ್ರ ದೊರೆತಿದೆ ಎನ್ನಲಾಗಿದೆ. ಅದರಲ್ಲಿ ಆಕೆ, ‘ನನಗೇ ನಾಚಿಕೆಯಾಗುತ್ತಿದೆ’. ‘ನಿನ್ನ ಸಲುವಾಗಿ ನಾನು ಮನೆಯವರೊಂದಿಗೆ ಎಷ್ಟು ಬಾರಿ ಜಗಳವಾಡಿದೆ. ನಿನಗೋಸ್ಕರ ನಾನು ನನ್ನ ಧರ್ಮವನ್ನು ಬದಲಾಯಿಸಲು ಕೂಡ ನಿರ್ಧಾರ ಕೈಗೊಂಡಿದ್ದೆ. ನಿಮ್ಮ ಧರ್ಮಕ್ಕೆ ಅನುಸಾರವಾಗಿ ಜೀವಿಸಲು ನಿರ್ಧಾರ ಕೂಡ ಮಾಡಿದೆ. ಆದರೆ ಅಷ್ಟು ಮಾಡಿಯೂ ನಿನ್ನನ್ನು ಹೇಗೆ ನನ್ನವನಾಗಿಸೋದು ಎಂಬ ವಿಚಾರ ನನಗೆ ಇನ್ನೂ ಅರ್ಥವಾಗಿಲ್ಲ. ಇನ್ನು ನನ್ನ ಕೈಲಿ ಸಹಿಸೋಕೆ ಆಗೋದಿಲ್ಲ. ಗುಡ್ ಬೈ ಸಾಕಿಬ್… ಐ ಲವ್ ಯೂ’ ಎಂದು ಪತ್ರವನ್ನು ಬರೆದಿದ್ದಾಳೆ. ಸದ್ಯ ಈ ಪ್ರಕರಣದ ಕುರಿತಾಗಿ ಪೊಲೀಸರು ಆರೋಪಿ ಸಾಕಿಬ್ ಹಾಗೂ ಆತನ ತಂದೆಯನ್ನು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆಯ ಬಳಿಕವಷ್ಟೇ ನೈಜ ಸತ್ಯ ಹೊರ ಬೀಳಲಿದೆ.
