Home » Vijay deverakonda – samanta : ಸಮಂತಾ-ವಿಜಯ್ ದೇವರಕೊಂಡ ಬೆಡ್ ರೂಮ್ ವಿಡಿಯೋ ಲೀಕ್ !! ಇಬ್ಬರ ರೊಮ್ಯಾನ್ಸ್ ನೋಡಿ ಹೌಹಾರಿದ ಫ್ಯಾನ್ಸ್

Vijay deverakonda – samanta : ಸಮಂತಾ-ವಿಜಯ್ ದೇವರಕೊಂಡ ಬೆಡ್ ರೂಮ್ ವಿಡಿಯೋ ಲೀಕ್ !! ಇಬ್ಬರ ರೊಮ್ಯಾನ್ಸ್ ನೋಡಿ ಹೌಹಾರಿದ ಫ್ಯಾನ್ಸ್

1 comment
Vijay deverakonda- Samanta

Vijay deverakonda- Samanta: ವಿಜಯ್ ದೇವರಕೊಂಡ ಹಾಗೂ ಸಮಂತಾ ಜೋಡಿಯ ಖುಷಿ ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಇಬ್ಬರ ಕೆಮಿಸ್ಟ್ರಿ ಬಗ್ಗೆ ಅನುಮಾನ ಹುಟ್ಟಿರುವ ನಡುವೆಯೇ ಇವರಿಬ್ಬರ (Vijay deverakonda- Samanta)ಬೆಡ್ ರೂಮ್ ರೊಮ್ಯಾನ್ಸ್ ವಿಡಿಯೋ ಲೀಕ್ ಆಗಿದೆ.

ಹೌದು, ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ (Vijay Deverakonda) ಹಾಗೂ ಬ್ಯೂಟಿ ಸಮಂತಾ ರುತ್​ ಪ್ರಭು ಅವರ ಬಹು ನಿರೀಕ್ಷಿತ ‘ಖುಷಿ’ ಸಿನಿಮಾದಲ್ಲಿ ಮೊನ್ನೆ ಸೆಪ್ಟೆಂಬರ್​ 1ರಂದು ಬಿಡುಗಡೆಯಾಗಿದೆ. ಇದೀಗ ಸಿನಿಮಾದ ಒಂದು ಸೀನ್ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಈ ವೈರಲ್​ ವಿಡಿಯೋದಲ್ಲಿ ಸಮಂತಾ(Sananta) ಹಾಗೂ ವಿಜಯ್ ದೇವರಕೊಂಡ ಅವರು ಮೈ ಚಳಿ ಬಿಟ್ಟು ರೊಮ್ಯಾನ್ಸ್​ನಲ್ಲಿ ತೊಡಗಿರುವುದನ್ನು ಕಾಣಬಹುದು. ಸದ್ಯ ವೈರಲ್​ ಆಗಿರುವ ಈ ದೃಶ್ಯದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಅವರು ಇಂಟಿಮೇಟ್​ ಆಗಿ ನಟಿಸಿದ್ದಾರೆ. ಈ ಬೆಡ್ ರೂಮ್ ದೃಶ್ಯದ ತುಣುಕು ಟ್ವಿಟರ್​ನಲ್ಲಿ ವೈರಲ್​ ಆಗಿದೆ.

ಬೆಡ್ ರೂಮ್ ಸೀನ್ ನೋಡಿ ಏನಂದ್ರು ಫ್ಯಾನ್ಸ್?
ನೋಡಿದ ಹಲವರು, ‘ಈ ಜೋಡಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದೆ’ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಅಕ್ಕಿನೇನಿ ಅಭಿಮಾನಿಗಳು ನಿದ್ದೆ ಕೆಡಿಸಿಕೊಂಡಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ “ನನ್ನ ಬಯಸುವಂತಹ ಪ್ರೀತಿ” ಎಂದು ಬರೆದುಕೊಂಡ ಒಂದು ಸಾಲು ನಾಗಚೈತನ್ಯ ಅಭಿಮಾನಿಗಳ ಕಿಚ್ಚಿಗೆ ಕಾರಣವಾಗಿದೆ. ಆದರೂ ಕೆಲವು ನೆಟ್ಟಿಗರು ಇಂಟ್ರೆಸ್ಟಿಂಗ್ ಆಗಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಖುಷಿ ಸಿನಿಮಾದ ಪ್ರಚಾರದ ಕಾರ್ಯಕ್ರಮವೊಂದರ ವಿಡಿಯೋ ನೋಡಿ ಫ್ಯಾನ್ಸ್​ ಉಸ್ಸಪ್ಪಾ ಉಸ್ಸೋ ಎಂದಿದ್ದರು. ಕಾರ್ಯಕ್ರಮದಲ್ಲಿ ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರು ಹಾಡೊಂದಕ್ಕೆ ನರ್ತಿಸಿದ್ದರು. ಇದರಲ್ಲಿ ಅವರು ಸಂಪೂರ್ಣ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಂಡಿದ್ದು, ಅದರ ವಿಡಿಯೋ ಸಕತ್​ ಸದ್ದು ಮಾಡಿತ್ತು. ಇದೀಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ ಚಿತ್ರದ ಈ ಇಂಟಿಮೇಟ್​ ಸೀನ್​.

ಏನು ಈ ಸಿನಿಮಾದ ಕಥಾ ಹಂದರ?
ಈ ಸಿನಿಮಾದಲ್ಲಿ ಒಂದು ಕ್ಯೂಟ್ ಲವ್​ಸ್ಟೋರಿ ಇದೆ. ಆದ್ದರಿಂದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ದೇವರಕೊಂಡ ಅವರು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಥೆಯ ನಾಯಕ-ನಾಯಕಿ ಪ್ರೀತಿಸಿ ಮದುವೆಯಾಗುತ್ತಾರೆ. ನಂತರ ಕೌಟುಂಬಿಕ ವೈರುಧ್ಯಗಳಿಂದ ಅವರು ಹೇಗೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಟಾಲಿವುಡ್​ನಲ್ಲಿ ಸಮಂತಾ ಮತ್ತು ವಿಜಯ್​ ಮೋಡಿ ಮಾಡಿದ್ದಾರೆ.

ಇದನ್ನೂ ಓದಿ: Adhar card update: ಈ ದಿನದೊಳಗೆ ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿದ್ರೆ ಉಚಿತ- ನಂತರ ಮಾಡೋದಾದರೆ ಫೈನ್ ಬೀಳೋದು ಖಚಿತ

You may also like

Leave a Comment