Mangaluru new commissioner : ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಸುಮಾರು 36 ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಬಿಸಿ ತಟ್ಟಿದ್ದು, ಮಂಗಳೂರು ನಗರ ನೂತನ ಕಮಿಷನರ್( Mangaluru new commissioner) ಆಗಿ ಅನುಪಮ್ ಅಗರ್ವಾಲ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಹಾಲಿ ಪೊಲೀಸ್ ಆಯುಕ್ತರಾದ ಕುಲ್ ದೀಪ್ ಕುಮಾರ್ ಜೈನ್ ಅವರನ್ನು ವರ್ಗಾವಣೆ ಮಾಡಿ, ತೆರವಾದ ಸ್ಥಾನಕ್ಕೆ ನೂತನ ಅಧಿಕಾರಿಯನ್ನು ನೇಮಿಸಲಾಗಿದೆ. ಈ ಹಿಂದೆ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಒತ್ತು ನೀಡಿದ್ದ ಆಯುಕ್ತ ಶಶಿಕುಮಾರ್ ಅವರ ವರ್ಗಾವಣೆಯ ಬಳಿಕ ಕುಲ್ ದೀಪ್ ಕುಮಾರ್ ಜೈನ್ ರನ್ನು ನೇಮಿಸಲಾಗಿತ್ತು.
ಅಧಿಕಾರ ವಹಿಸಿಕೊಂಡ ಬಳಿಕ ನಗರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆ, ಖಾಸಗಿ ಬಸ್ಸುಗಳ ವೇಗಕ್ಕೆ ಹಾಗೂ ಗಾಂಜಾ ವಹಿವಾಟುಗಳನ್ನು ಮಟ್ಟ ಹಾಕಿದ್ದ ಕುಲ್ ದೀಪ್ ಕುಮಾರ್ ಅವರನ್ನು ಈ ಬಾರಿ ವರ್ಗಾಯಿಸಿ ನೂತನ ಅಧಿಕಾರಿಯನ್ನು ನೇಮಿಸಲಾಗಿದೆ.
