Karnataka rain alert: ಕರ್ನಾಟಕ ತಂಪಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಬಂದು ತಂಪಾಗಿದೆ. ಬರದ ಆತಂಕದ ನಡುವೆ ರಾಜ್ಯದಲ್ಲಿ ಮಳೆರಾಯ ತಂಪೆರೆಯುತ್ತಿದ್ದಾನೆ. ಅಷ್ಟೇ ಅಲ್ಲದೆ, ಮುಂದಿನ ಮೂರ್ನಾಲ್ಕು ದಿನಗಾಲ ರಾಜ್ಯದ ಹಲವಾರು ಕಡೆ ಬರಬಹುದಾದ ಮಳೆಯ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರಿನಲ್ಲಿ ಇಂದಿನಿಂದ ಸಂಜೆಯಾ ಹೊತ್ತು ಮಳೆ ಕಾಡಲಿದೆ. ಮಳೆ ಜೊತೆ ಶೀತಗಾಳಿ ಕೂಡಾ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನಇಲಾಖೆ ಸೂಚನೆ(Karnataka rain alert) ಕೊಟ್ಟಿದೆ.
ಕರಾವಳಿಯಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ ಇದೆ. ಉತ್ತರ ಒಳನಾಡು ಪ್ರದೇಶಗಳಲ್ಲೂ ಭಾರೀ ಮಳೆ ಆಗುವ ಸಂಭವ ಇದೆ. ಉತ್ತರ ಒಳನಾಡಿನ ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳು ಭಾರೀ ಮಳೆಯಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ತುಂತುರು ಮಳೆ ಆಗುತ್ತಿದೆ. ಕೆಲವು ಕಡೆ ಮಳೆ ಜೋರಾಗಿಯೇ ಬಿದ್ದಿದೆ.
ಅಲ್ಲದೆ ಕರಾವಳಿಯಲ್ಲಿ ಅಮ್ತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿ ಗುಡುಗು ಮಿಂಚಿನ ಎಚ್ಚರಿಕೆ ನೀಡಿದೆ. ಗಾಳಿಯ ವೇಗ 40-50 ಕಿ.ಮೀ ವೇಗದಲ್ಲಿ, ದಕ್ಷಿಣ ಒಳನಾಡು ಭಾಗದಲ್ಲಿ ಬೀಸುವ ಸಾಧ್ಯತೆ ಇದೆ ಎಂಬ ಸೂಚನೆಯನ್ನುಇಲಾಖೆ ನೀಡಿದೆ.
ಇದನ್ನೂ ಓದಿ: ಬೆಚ್ಚಿಬಿದ್ದ ಬೆಂಗಳೂರು: ಹಾಡು ಹಗಲೇ ಡಬ್ಬಲ್ ಮರ್ಡರ್, 11 ವರ್ಷದ ಮಗ ಮತ್ತು ತಾಯಿಯ ಕೊಲೆ !
