Home » Actress Ramya: ಮೋಹಕತಾರೆ ನಟಿ ರಮ್ಯಾಗೆ ಹೃದಯಾಘಾತ ?!! ಏನಿದು ಶಾಕಿಂಗ್ ನ್ಯೂಸ್?

Actress Ramya: ಮೋಹಕತಾರೆ ನಟಿ ರಮ್ಯಾಗೆ ಹೃದಯಾಘಾತ ?!! ಏನಿದು ಶಾಕಿಂಗ್ ನ್ಯೂಸ್?

2 comments
Actress Ramya

Actress Ramya: ಸ್ಯಾಂಡಲ್ ವುಡ್ ಕ್ವೀನ್ ಮೋಹಕ ನಟಿಯಾಗಿ ಬಣ್ಣದ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದ ನಟಿ ರಮ್ಯಾ(actress Ramya) ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ಸಾಕಷ್ಟು ಮಂದಿ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ(Social Media)ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿ, ಎಲ್ಲರನ್ನು ಗೊಂದಲ ಉಂಟು ಮಾಡಿತ್ತು. ಸದ್ಯ, ಈ ಕುರಿತು ಸ್ಪಷ್ಟನೆ ನೀಡಿದೆ.

ತಮಿಳಿನ ಕೆಲ ವೆಬ್‌ಸೈಟ್‌ಗಳು ಮತ್ತು ತಮಿಳು ಮೂಲದ ಸೋಷಿಯಲ್‌ ಮೀಡಿಯಾ ಬಳಕೆದಾರರು ರಮ್ಯಾ ಅವರು ಸಾವಾಗಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಡಿಯಾಕ್‌ ಅರೆಸ್ಟ್‌ ಆಗಿದೆ ಎಂಬೆಲ್ಲ ವದಂತಿಗಳು ಹಬ್ಬಿದೆ. ಇದನ್ನೇ ಆಧರಿಸಿ ಕೆಲ ಡಿಜಿಟಲ್ ಸುದ್ದಿ ಮಾಧ್ಯಮಗಳು ಇದರ ಸತ್ಯಾಸತ್ಯತೆ ಗಮನಿಸದೇ ವರದಿ ಬಿತ್ತರಿಸಿದೆ.

ರಮ್ಯಾ ಅವರ ಸಾವಿನ ಕುರಿತ ವಾಟ್ಸಾಪ್‌ ಸ್ಕ್ರೀನ್‌ ಶಾಟ್‌ಗಳೂ ಹರಿದಾಡಿ ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಸದ್ಯ, ಸ್ಯಾಂಡಲ್ ವುಡ್(Sandalwood)ಮೋಹಕ ತಾರೆ ರಮ್ಯಾ ಯೂರೋಪ್‌ ಪ್ರವಾಸದಲ್ಲಿದ್ದಾರೆ. ಪೆರುಗ್ವೆಯಲ್ಲಿರುವ ರಮ್ಯಾ, ಹಾಯಾಗಿ ಜಾಲಿ ಮೂಡ್ ನಲ್ಲಿದ್ದಾರೆ. ರಮ್ಯಾ ಅವರ ಸಾವಿನ ಕುರಿತ ಸುಳ್ಳು ಸುದ್ದಿ ಹರಿದಾಡುತ್ತಿದ್ದಂತೆ, ರಮ್ಯಾ ಅವರ ಆಪ್ತ ವಲಯದವರನ್ನು ಸಂಪರ್ಕಿಸಿ ಮಾತನಾಡಿದ್ದು, ರಮ್ಯಾ ಅವರು ಚೆನ್ನಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿ ಹರಡಬೇಡಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾದ ಶಾಕ್ ನಿಂದ ರಾಜ್ಯದ ಜನತೆ ಹೊರ ಬರುತ್ತಿರುವ ಬೆನ್ನಲ್ಲೇ ಮತ್ತೊಂದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲವು ತಮಿಳು ಡಿಜಿಟಲ್‌ ಮಾಧ್ಯಮಗಳು ದಿವ್ಯ ಸ್ಪಂದನಾ ಅವರನ್ನು ಸ್ಪಂದನ ಎಂದು ಭಾವಿಸಿ ಹೃದಯಾಘಾತದಿಂದ(Heartattack)ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಿದ ಘಟನೆ ವರದಿಯಾಗಿದೆ. ಈ ನಡುವೆ, ರಮ್ಯಾ ಅವರು ಚೆನ್ನಾಗಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಅವರ ಸ್ನೇಹಿತೆ ಸುನಯನಾ ಟ್ವಿಟ್‌ ಮೂಲಕ ಖಾತ್ರಿ ಪಡಿಸಿದ್ದಾರೆ.

ಇದನ್ನೂ ಓದಿ: Realme C51 Phone: ಕೈಗೆಟಕುವ ದರದಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ಫೋನ್ ರಿಯಲ್ ಮಿ C 51 !! ಏನಿದರ ವಿಶೇಷತೆ ? ಇಲ್ಲಿದೆ ಡೀಟೈಲ್ಸ್!

You may also like

Leave a Comment