Home » ಕಳೆಂಜ ಮಸೂದ್ ಕೊಲೆ ಪ್ರಕರಣ ಮೂವರು ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮಿನು ಮಂಜೂರು

ಕಳೆಂಜ ಮಸೂದ್ ಕೊಲೆ ಪ್ರಕರಣ ಮೂವರು ಆರೋಪಿಗಳಿಗೆ ಹೈಕೋರ್ಟ್ ನಿಂದ ಜಾಮಿನು ಮಂಜೂರು

by Praveen Chennavara
0 comments

 

 

ಬೆಳ್ಳಾರೆ : ಕಳೆದ ವರ್ಷ ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ನಡೆದಿದ್ದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಂಜಿತ್, ಸದಾಶಿವ, ಸುಧೀರ್ ಇವರುಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪರಿಗಣಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ ಜಾಮೀನು ಮಂಜೂರು ಮಾಡಿದರು‌.

ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಅರುಣ್ ಶಾಮ್ ರವರು ವಾದ ಮಂಡಿಸಿದ್ದರು.

ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿದ್ದರು. ಒಟ್ಟು ಎಂಟು ಆರೋಪಿಗಳ ಪೈಕಿ ಈ ಮೊದಲು ಮೂರು ಜನ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.

 

You may also like

Leave a Comment