Home » Gruhalakshmi: ಈ 25 ಸಾವಿರ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ ದುಡ್ಡು ಸಿಗೋದು ಬಹುತೇಕ ಡೌಟ್- ಲಿಸ್ಟ್ ನಲ್ಲಿ ನೀವೂ ಇದ್ದೀರಾ?

Gruhalakshmi: ಈ 25 ಸಾವಿರ ಯಜಮಾನಿಯರಿಗೆ ‘ಗೃಹಲಕ್ಷ್ಮೀ’ ದುಡ್ಡು ಸಿಗೋದು ಬಹುತೇಕ ಡೌಟ್- ಲಿಸ್ಟ್ ನಲ್ಲಿ ನೀವೂ ಇದ್ದೀರಾ?

by ಹೊಸಕನ್ನಡ
1 comment
Gruhalakshmi

Gruhalakshmi : ರಾಜ್ಯ ಸರ್ಕಾರದ ಗೃಹಲಕ್ಷ್ಮಿ (gruhalakshmi) ಯೋಜನೆ ಈಗಾಗಲೇ ಜಾರಿಯಾಗಿದೆ. ಮನೆ ಯಜಮಾನಿ ಖಾತೆಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಜಮೆಯೂ ಆಗಿದೆ. ಆದರೆ ಅದೆಷ್ಟೋ ಗೃಹಲಕ್ಷ್ಮಿಯರಿಗೆ ಇನ್ನೂ ಹಣ ಬಂದಿಲ್ಲ. ಹೀಗಾಗಿ ಮಹಿಳೆಯರು ಬ್ಯಾಂಕ್ ಮುಂದೆ ಸಾಲುಗಟ್ಟಿದ್ದಾರೆ. ಆದರೆ ಈ ನಡುವೆ ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು, ಗೃಹಲಕ್ಷ್ಮೀಗೆ ಅರ್ಜಿ ಹಾಕಿರುವ ಯಜಮಾನಿಯರ ಪೈಕಿ 25 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಸಿಗೋದು ಬಹುತೇಕ ಡೌಟ್ ಆಗಿದೆ.

ಹೌದು, ಗೃಹಲಕ್ಷ್ಮೀ ಯೋಜನೆ ಜಾರಿಯಾದ ಬಳಿಕ ಈಗಾಗಲೇ ಕೆಲವರ ಖಾತೆಗಳಿಗೆ ಹಣ ಜಮೆಯಾಗಿದ್ದರೂ ಇನ್ನು 69 ಲಕ್ಷ ಪಾಲಾನುಭವಿಗಳಿಗೆ ಹಣ ಬರಬೇಕಿದೆ. ಈ ಹಣ ಬರದವರ ಪೈಕಿ 25 ಸಾವಿರಕ್ಕೂ ಹೆಚ್ಚು ಲಕ್ಷ್ಮೀಯರಿಗೆ ಹಣ ಬರೋದು ಡೌಟಾಗಿದೆ. ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಯಾಕೆ 25 ಸಾವಿರ ಮಹಿಳೆಯರಿಗೆ ಹಣ ಸಿಗುವುದಿಲ್ಲ?
ಯೋಜನೆಗೆ ಅರ್ಜಿ ಹಾಕುವ ಪ್ರಕ್ರಿಯೆ ಶುರುಮಾಡಿದಾಗ ಸರ್ಕಾರ ಕೆಲವು ನಿಯಮಗಳನ್ನು ವಿಧಿಸಿತ್ತು. ಇದನ್ನು ಫಾಲೋ ಮಾಡಿದರೆ ಮಾತ್ರ ಗೃಹಲಕ್ಷ್ಮೀ ಯೋಜನೆ ದುಡ್ಡು ಸಿಗುತ್ತದೆ ಎಂದಿತ್ತು. ಇದರಲ್ಲಿ ಅರ್ಜಿ ಹಾಕಿದವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್(Adhar card) ನೋಂದಣಿ ಮಾಡಲೇ ಬೇಕಿತ್ತು. ಆದರೆ ಹಲವರು ಇದನ್ನು ಮಾಡಿಲ್ಲ. ಇದರ ಜೊತೆಗೆ ಅರ್ಜಿ ಸಲ್ಲಿಸಿರುವ ಮನೆಯೋಡತಿಯರ ಮಾಹಿತಿ ಅಪೂರ್ಣವಾಗಿರುವ ಕಾರಣ ಸಾವಿರಾರು ಮಹಿಳೆಯರು ಗೃಹ ಲಕ್ಷ್ಮೀ ಯೋಜನೆಯ ಪಾಲಾನುಭವಿಗಳಾಗಲು ಅಡ್ಡಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಹೀಗಾಗಿ ಮಾಹಿತಿ ಅಪೂರ್ಣವಾಗಿರುವ 25412 ಪಾಲಾನುಭವಿಗಳ ಖಾತೆಗೆ ಈ ತಿಂಗಳು ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆಯಾಗೋದು ಡೌಟಾಗಿದೆ. ಆಧಾರ್, ಬ್ಯಾಂಕ್ ಕೆವೈಸಿ, ಲಿಂಕ್ ಮಾಡದೇ ಇರೊದ್ರಿಂದ ಡಿಬಿಡಿ ವರ್ಗಾವಣೆ ಇಲ್ಲ ಹೀಗಾಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಂಗನವಾಡಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

ಗೃಹಲಕ್ಷ್ಮಿ ಸ್ಕೀಮ್‌ ಸ್ಟೇಟಸ್‌ ಪರಿಶೀಲನೆ ಹೇಗೆ?
• ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಿದವರು ತಮ್ಮ ಹೆಸರು ನೋಂದಣಿಯಾಗಿದೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು Gruha Lakshmi Scheme beneficiary status ಪರಿಶೀಲನೆ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಮುಂದಿನ ಹಂತಗಳನ್ನು ಅನುಸರಿಸಿ.
• ಮೊದಲಿಗೆ ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿ: sevasindhuservices.karnataka.gov.in
• ವೆಬ್‌ಸೈಟ್‌ನ ಮೊದಲ ಪುಟದಲ್ಲಿಯೇ Check Your Application Status ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ.
• ನಿಮ್ಮ ಅರ್ಜಿ ಸಂಖ್ಯೆ ನಮೂದಿಸಿ. ನೆನಪಿಡಿ, ನೀವು ಅರ್ಜಿ ಸಲ್ಲಿಸಿದಾಗ ದೊರಕುವ ಅಪ್ಲಿಕೇಷನ್‌ ಸಂಖ್ಯೆಯೂ ಅರ್ಜಿ ಸ್ಥಿತಿ ಪರಿಶೀಲನೆಗೆ ಅಗತ್ಯವಾಗಿದೆ.
• ಚೆಕ್‌ ಸ್ಟೇಟಸ್‌ ನೌ ಎನ್ನುವ ಆಯ್ಕೆಯನ್ನು ಕ್ಲಿಕ್‌ ಮಾಡಿ.
ಗೃಹಲಕ್ಷ್ಮಿ ಸ್ಕೀಮ್‌ಗೆ ನೋಂದಣಿ ಯಶಸ್ವಿಯಾಗಿದೆಯೇ ಇಲ್ಲವೇ ಎಂಬ ಮಾಹಿತಿ ದೊರಕುತ್ತದೆ. ಯಶಸ್ವಿಯಾದರೆ ಇಂದಿನಿಂದ ನಿಮಗೆ 2 ಸಾವಿರ ರೂಪಾಯಿ ದೊರಕುತ್ತದೆ. ಇನ್ನೂ ಪ್ರೊಸೆಸಿಂಗ್‌ ಹಂತದಲ್ಲಿದ್ದರೆ ಈ ತಿಂಗಳು ನಿಮಗೆ ಈ ಹಣ ದೊರಕದು.

ಇದನ್ನೂ ಓದಿ: Koppa: ಕೊಪ್ಪ ಕಾಡಿನಲ್ಲಿ ಮೂವರು ಮುಸ್ಲಿಂ ಯುವಕರ ಜೊತೆ ಹಿಂದೂ ವಿದ್ಯಾರ್ಥಿನಿ – ಘಟನೆಗೆ ಸಿಕ್ತು ಬಿಗ್ ಟ್ವಿಸ್ಟ್- SP ಹೇಳಿದ್ದೇನು?

You may also like

Leave a Comment