Mahila Samman Savings Certificate: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ‘ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ’ ಘೋಷಿಸಿದ್ದರು. ಮುಖ್ಯವಾಗಿ ಭಾರತದ ಪ್ರತಿ ಹೆಣ್ಣು ಮಗು ಮತ್ತು ಮಹಿಳೆಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (Mahila Samman Savings Certificate) ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಏಪ್ರಿಲ್ 1, 2023 ರಿಂದ ಅಂಚೆ ಇಲಾಖೆಯ ಮೂಲಕ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಕಾರ್ಯನಿರ್ವಹಿಸುತ್ತಿದೆ.
ಮುಖ್ಯವಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023
ಈ ಯೋಜನೆಯಡಿಯಲ್ಲಿ, ಒಬ್ಬ ಮಹಿಳೆ ತನ್ನ ಪರವಾಗಿ ಅಥವಾ ಅಪ್ರಾಪ್ತ ಬಾಲಕಿಯ ಪರವಾಗಿ ಗಾರ್ಡಿಯನ್ ಆಗಿ ಖಾತೆಯನ್ನು ತೆರೆಯಬಹುದು. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) 7.5% ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಹಾಗೂ, ಇದು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ಜಮೆಯಾಗುತ್ತದೆ ಮತ್ತು ಸಂಯೋಜನೆಗೊಳ್ಳುತ್ತದೆ.
ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಓಪನ್ ಮಾಡುವ ಕ್ರಮ :
ಮೊದಲು ಅಂಚೆ ಕಚೇರಿಗೆ ಭೇಟಿ ನೀಡಿ. ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.
KYC ಡಾಕ್ಯುಮೆಂಟ್ (ಆಧಾರ್ ಮತ್ತು PAN ಕಾರ್ಡ್), ಹೊಸ ಖಾತೆದಾರರಿಗೆ KYC ಫಾರ್ಮ್.
ನಂತರ ಅಂಚೆ ಕಛೇರಿಯಲ್ಲಿ ಠೇವಣಿ ಮೊತ್ತ/ಚೆಕ್ ಜೊತೆಗೆ ಪೇ-ಇನ್-ಸ್ಲಿಪ್ ಪಡೆದುಕೊಳ್ಳಿ.
ಶುಲ್ಕಗಳು:
ಅಂಚೆ ಕಛೇರಿಯು ಭೌತಿಕ ಕ್ರಮದಲ್ಲಿ ರಶೀದಿಗಾಗಿ 40 ರೂ. , ಇ-ಮೋಡ್‌ಗೆ 9 ರೂ. ಮತ್ತು 100 ರೂ. ವಹಿವಾಟಿಗೆ 6.5 ಪೈಸೆ ಶುಲ್ಕ ವಿಧಿಸುತ್ತದೆ.
ಇನ್ನು ನಾಮಿನೇಷನ್ ಖಾತೆದಾರರು ಯಾವುದೇ ಸದಸ್ಯರನ್ನು ನಾಮಿನೇಷನ್ ಮಾಡಬಹುದು. ಆ ಮಹಿಳೆಯ ಸಾವಿನ ನಂತರ ನಾಮಿನೇಷನ್ ಮಾಡಲಾದ ಸದಸ್ಯರಿಗೆ ಆ ಹಣ ಸಿಗುತ್ತದೆ.
ಮುಖ್ಯವಾಗಿ ಈ ಯೋಜನೆಯಡಿಯಲ್ಲಿ ಮಾಡಿದ ಠೇವಣಿಗಳಿಗೆ ವಾರ್ಷಿಕ ಶೇಕಡಾ 7.5 ದರದಲ್ಲಿ ಬಡ್ಡಿ ದೊರೆಯುತ್ತದೆ. ಬಡ್ಡಿಯನ್ನು ತ್ರೈಮಾಸಿಕವಾಗಿ ಒಟ್ಟುಗೂಡಿಸಿ ಖಾತೆಗೆ ಜಮಾ ಮಾಡಲಾಗುತ್ತದೆ.
ನೀವು ಈ ಹಣದ ಠೇವಣಿಯು ಡೆಪಾಸಿಟ್ ಮಾಡಿದ ದಿನಾಂಕದಿಂದ ಎರಡು ವರ್ಷಗಳ ನಂತರ ಮೆಚ್ಯೂರ್ ಆಗುತ್ತದೆ. ಮತ್ತು ಆ ಸಮಯದಲ್ಲಿ ಖಾತೆಗಳ ಕಛೇರಿಗೆ ನಮೂನೆ-2 ರಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಖಾತೆದಾರರು ಅರ್ಹವಾದ ಬಾಕಿಯನ್ನು ಸ್ವೀಕರಿಸಬಹುದು.
ಆದರೆ ಮೆಚ್ಯೂರಿಟಿ ಮೌಲ್ಯವನ್ನು ನಿರ್ಧರಿಸಲು ಬಳಸಲಾಗುವ ರೂಪಾಯಿಯ ಯಾವುದೇ ಭಾಗವನ್ನು ಹತ್ತಿರದ ರೂಪಾಯಿಗೆ ಪೂರ್ಣಾಂಕಗೊಳಿಸಬೇಕು ಎಂಬುದನ್ನು ಗಮನಿಸಿ. ಉದಾಹರಣೆಗೆ, ಐವತ್ತು ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದು ರೂಪಾಯಿ ಎಂದು ಪರಿಗಣಿಸಲಾಗುತ್ತದೆ ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಯಾವುದೇ ಮೊತ್ತವನ್ನು ನಿರ್ಲಕ್ಷಿಸಲಾಗುತ್ತದೆ.
ಇನ್ನು ಅಂಚೆ ಕಚೇರಿ ಹೊರತು, ಇತರ ಬ್ಯಾಂಕ್‌ಗಳು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ನೀಡುತ್ತವೆ. ಅವುಗಳು ಇಂತಿವೆ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್.
