Home » Job Openings: ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅತಿಥಿ ಶಿಕ್ಷಕರ ನೇಮಕ! 2618 ಖಾಲಿ ಹುದ್ದೆ- ಶಾಲಾ ಶಿಕ್ಷಣ ಇಲಾಖೆಯ ಆದೇಶ!!!

Job Openings: ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅತಿಥಿ ಶಿಕ್ಷಕರ ನೇಮಕ! 2618 ಖಾಲಿ ಹುದ್ದೆ- ಶಾಲಾ ಶಿಕ್ಷಣ ಇಲಾಖೆಯ ಆದೇಶ!!!

1 comment
Guest teacher

Guest Teacher Vaccancy: ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಶಿಕ್ಷಕ ಹುದ್ದೆಯ ನೇಮಕಾತಿಗೆ ಎದುರು ನೋಡುತ್ತಿದ್ದ ಮಂದಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಶಿಕ್ಷಕ ಶಾಲಾ ಶಿಕ್ಷಣ ಇಲಾಖೆಯು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 2618 ಅತಿಥಿ ಶಿಕ್ಷಕರ(Guest Teacher)ನೇಮಕ ಮಾಡಿಕೊಳ್ಳಲು ಮಂಜೂರು ಮಾಡಲಾಗಿದೆ.

2023-24ನೇ ಸಾಲಿನ ಕಲ್ಯಾಣ ಕರ್ನಾಟಕ ವಿಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವರ್ಗಾವಣೆಯಾದ ಬಳಿಕ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗೆ ನಡೆಯಲಿದೆ. ಈ ಹಿನ್ನೆಲೆ ‘ಅಕ್ಷರ ಮಿತ್ರ’ ಅತಿಥಿ ಶಿಕ್ಷಕರ ನೇಮಕಾತಿಗೆ ಶಾಲಾ ಶಿಕ್ಷಣ ಇಲಾಖೆ ಮಂಜೂರು ಮಾಡಿದ್ದು, ಷರತ್ತುಬದ್ಧ ನಿಯಮಗಳಲ್ಲಿ ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ಸರ್ಕಾರಿ ಪ್ರಾಥಮಿಕ / ಪ್ರೌಢ ಶಾಲೆಗಳಲ್ಲಿ ಖಾಲಿ ಶಿಕ್ಷಕರ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ‘ಅಕ್ಷರ ಆವಿಷ್ಕಾರ’ ಯೋಜನೆಯಡಿ ‘ಅಕ್ಷರ ಮಿತ್ರ’ ಅತಿಥಿ ಶಿಕ್ಷಕರನ್ನು ಈ ಕೆಳಗಿನಂತೆ ಮಂಜೂರು ಮಾಡಲಾಗಿದೆ.ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ 2566 ಹುದ್ದೆಗಳಿಗೆ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಿರುವ 52 ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಸೆಪ್ಟೆಂಬರ್ 14, 2023 ರೊಳಗೆ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳಲು ಜಿಲ್ಲಾ ಉಪನಿರ್ದೇಶಕರು ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ. ಬಳ್ಳಾರಿ, ಬೀದರ, ಕಲಬುರಗಿ, ಕೊಪ್ಪಳ, ರಾಯಚೂರ, ವಿಜಯನಗರ, ಯಾದಗಿರಿ ಜಿಲ್ಲೆಗಳಿಗೆ ಈ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ಪ್ರಾಥಮಿಕ / ಪ್ರೌಢ ಶಾಲಾ ಮುಖ್ಯ ಶಿಕ್ಷಕರುಗಳನ್ನು ಅತಿಥಿ ಶಿಕ್ಷಕರ ಆಯ್ಕೆಯ ಹೊಣೆಯನ್ನು ನಿಭಾಯಿಸಲು ತಿಳಿಸಲಾಗಿದೆ. ಡಿ.ಇಡಿ ಶಿಕ್ಷಣ, ಬಿ.ಇಡಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಪ್ರಾಥಮಿಕ / ಪ್ರೌಢ ಶಾಲೆಗಳಲ್ಲಿ ಬೋಧನೆ ಮಾಡಲು ಇಚ್ಛಿಸಿದರೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ತಮ್ಮ ಹತ್ತಿರದ ಶಾಲೆಗಳಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

2566 ಪ್ರಾಥಮಿಕ ಶಾಲೆಗಳ ‘ಅಕ್ಷರ ಮಿತ್ರ’ ಅತಿಥಿ ಶಿಕ್ಷಕರಿಗೆ ತಲಾ ರೂ.10,000 ದಂತೆ ನೇಮಕಗೊಂಡ ದಿನದ ಅನುಸಾರ ಶೈಕ್ಷಣಿಕ ಸಾಲಿನ ಕೊನೆಯವರೆಗೆ ಮಾರ್ಚ್ 31, 2024 ರವರೆಗೆ ವೇತನ ನಿಗದಿ ಮಾಡಲಾಗಿದೆ. ಅದೇ ರೀತಿ, ಪ್ರೌಢ ಶಾಲೆಗಳ 52 ‘ಅಕ್ಷರ ಮಿತ್ರ’ ಅತಿಥಿ ಶಿಕ್ಷಕರಿಗೆ ತಲಾ ರೂ.10,500 ರಂತೆ ನೇಮಕಗೊಂಡ ದಿನದಿಂದ ಶೈಕ್ಷಣಿಕ ಸಾಲಿನ ಕೊನೆಯವರೆಗೆ ಸಂಭಾವನೆ ನಿಗದಿ ಮಾಡಲಾಗಿದ್ದು, ಈ ನೇಮಕಾತಿ ಪ್ರಕ್ರಿಯೆಗೆ ಹಲವು ಷರತ್ತಿನನ್ವಯ ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: Fake News: ಸ್ನಾನ ಮಾಡುವಾಗ ಇನ್ನು ‘ಹಸ್ತಮೈಥುನ’ ಮಾಡುವ ಹಾಗಿಲ್ಲ – ಹುಡುಗರ ತಲೆ ಕೆಡಿಸಿದ ಹಳೆ ನೋಟಿಸ್ !! ಏನಿದು ಶಾಕಿಂಗ್ ನ್ಯೂಸ್

You may also like

Leave a Comment