Home » ಸುಳ್ಯ : ಅಕ್ರಮ ಜಾನುವಾರು ಸಾಗಾಟ ಶಂಕೆ ತಪಾಸಣೆ

ಸುಳ್ಯ : ಅಕ್ರಮ ಜಾನುವಾರು ಸಾಗಾಟ ಶಂಕೆ ತಪಾಸಣೆ

by Praveen Chennavara
2 comments
Sullia

Sullia : ವಿಟ್ಲದಿಂದ ಚಾಮರಾಜನಗರಕ್ಕೆ ಲಾರಿಯಲ್ಲಿ ಹತ್ತಕ್ಕೂ ಹೆಚ್ಚು ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಜಾಲ್ಸೂರು ಪೆಟ್ರೋಲ್ ಪಂಪ್ ಬಳಿ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ದನ ಸಾಗಾಟಕ್ಕೆ ಅಗತ್ಯ ದಾಖಲೆಪತ್ರ ಇದ್ದ ಕಾರಣದಿಂದ ಪೊಲೀಸರು ತಪಾಸಣೆ ನಡೆಸಿ ಬಿಟ್ಟು ಕಳಿಸಿದ ಘಟನೆ ಜಾಲ್ಸೂರಿನಲ್ಲಿ ಸೆ.11ರಂದು ರಾತ್ರಿ ಸಂಭವಿಸಿದೆ.

ವಿಟ್ಲದಿಂದ ಚಾಮರಾಜನಗರಕ್ಕೆ ಎರಡು ಲಾರಿಯಲ್ಲಿ ಹತ್ತಕ್ಕೂ ಅಧಿಕ ದನಗಳನ್ನು ಸಾಗಿಸುತ್ತಿದ್ದು, ದಾಖಲೆಪತ್ರಗಳಿದ್ದರೂ, ಚಾಲಕರು ತಡವಾಗಿ ರಾತ್ರಿಯ ವೇಳೆಯಲ್ಲಿ ಸಾಗಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ಷೇಪಿಸಿದ್ದು, ಸುಳ್ಯ(Sullia) ಪೊಲೀಸರು ತಪಾಸಣೆ ನಡೆಸಿದಾಗ ದಾಖಲೆಪತ್ರ ಇದ್ದ ಕಾರಣದಿಂದ ಎರಡೂ ಲಾರಿಯನ್ನು ಹೋಗಲು ಬಿಟ್ಟಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Congress: ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್ ಗೆ ಡಬಲ್ ಶಾಕ್ – ಚುನಾವಣೆ ಹೊತ್ತಲ್ಲೇ ಪಕ್ಷ ತೊರೆದ ಇಬ್ಬರು ಪ್ರಭಾವಿ ನಾಯಕರು !!

You may also like

Leave a Comment