Home » Yummy Food: ಆಹಾರ ಪ್ರಿಯರಿಗೆ ಶಾಕ್ !! ಇನ್ಮುಂದೆ ಕಬಾಬ್, ಸಮೋಸ ಬ್ಯಾನ್ !! ಅರೇ ಏನಿದು ಶಾಕಿಂಗ್ ನ್ಯೂಸ್

Yummy Food: ಆಹಾರ ಪ್ರಿಯರಿಗೆ ಶಾಕ್ !! ಇನ್ಮುಂದೆ ಕಬಾಬ್, ಸಮೋಸ ಬ್ಯಾನ್ !! ಅರೇ ಏನಿದು ಶಾಕಿಂಗ್ ನ್ಯೂಸ್

1 comment
Yummy Food

Yummy Food: ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟಾನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ(Yummy Food) ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್ ಫುಡ್ ತಿನ್ನದೆ ಇದ್ದರೆ ಮನಸ್ಸಿಗೆ ಸಮಾಧಾನವೇ ಇರದು.

ಇಂದಿನ ಜೀವನಶೈಲಿಯಲ್ಲಿ ಹೆಚ್ಚಿನವರು ಫಾಸ್ಟ್ ಫುಡ್ ಗೆ ಒಗ್ಗಿಕೊಂಡಿದ್ದು ಆಹಾರಕ್ರಮ, ಕೆಲಸದ ಒತ್ತಡ, ನಿದ್ರಾ ಹೀನತೆ ಹೀಗೆ ನಾನಾ ಕಾರಣಗಳಿಂದ ಅನೇಕ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಹೀಗಿದ್ದರೂ ಫಾಸ್ಟ್ ಫುಡ್ ಮೇಲೆ ಜನರಿಗೆ ವ್ಯಾಮೋಹ ಕಮ್ಮಿ ಆಗುವಂತಹದಲ್ಲ.ಹೆಚ್ಚಿನವರಿಗೆ ತಿಳಿಯದ ವಿಚಾರವೊಂದಿದೆ. ನಾವು ನಿಯಮಿತವಾಗಿ ತಿನ್ನುವ ನಮ್ಮ ದೇಶದ ಅನೇಕ ಜನಪ್ರಿಯ ಭಕ್ಷ್ಯಗಳಿಗೆ ವಿದೇಶದಲ್ಲಿ ನಿಷೇಧ ಹೇರಲಾಗಿದೆ. ಅವು ಯಾವುದೆಲ್ಲ ಗೊತ್ತಾ?

ತುಪ್ಪ(Gee):
ಭಾರತದಲ್ಲಿ ತುಪ್ಪವನ್ನು ಇಷ್ಟಪಡದವರೆ ವಿರಳ.ದೇಶದಾದ್ಯಂತ ಜನರು ವಿವಿಧ ಆಹಾರದ ಜೊತೆ ತುಪ್ಪವನ್ನು ಸವಿಯುವುದನ್ನು ಇಚ್ಛಿಸುತ್ತಾರೆ. ಆದರೆ, ಅಮೆರಿಕದಲ್ಲಿ ತುಪ್ಪವನ್ನು ನಿಷೇಧ ಮಾಡಲಾಗಿದೆ. ತುಪ್ಪ ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಸ್ಥೂಲಕಾಯದಂತಹ ಕಾಯಿಲೆಗೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ನಿಷೇಧ ಮಾಡಲಾಗಿದೆ.

ಚವನ್‌ ಪ್ರಾಶ್ :
ಭಾರತದಲ್ಲಿ ಅದರಲ್ಲಿಯೂ ಇತ್ತೀಚಿಗೆ ಕೋರೋನಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚವನ್‌ಪ್ರಾಶ್ ಅನ್ನು ಬಳಕೆ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಶೀತ, ಕೆಮ್ಮು ಕಾಣಿಸಿಕೊಂಡ ಸಂದರ್ಭ ಕೂಡ ಹೆಚ್ಚಿನ ಮಂದಿ ಚವನ್‌ ಪ್ರಾಶ್ ಸೇವನೆ ಮಾಡುತ್ತಾರೆ. ಚವನ್‌ ಪ್ರಾಶ್ನಲ್ಲಿ ಹೆಚ್ಚಿನ ಪ್ರಮಾಣದ ಸೀಸ ಮತ್ತು ಪಾದರಸ ಇರುವ ಹಿನ್ನೆಲೆ ಕೆನಡಾದಲ್ಲಿ 2005 ರಲ್ಲಿ ಇದನ್ನು ನಿಷೇಧಿಸಲಾಗಿದೆ.

ಗಸಗಸೆ:
ಭಾರತದಲ್ಲಿ ವಿಶೇಷವಾಗಿ ಬಂಗಾಳದಲ್ಲಿ ಬಳಕೆ ಮಾಡುವ ಮಸಾಲೆಗಳಲ್ಲಿ ಗಸಗಸೆ ಕೂಡ ಒಂದು. ಆದರೆ ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಗಸಗಸೆಯನ್ನು ನಿಷೇಧಿಸಲಾಗಿದೆ. ರಷ್ಯಾದಲ್ಲಿ, ಗಸಗಸೆ ಕೃಷಿ ಮಾಡುವುದು ಕೂಡ ಕಾನೂನು ಪ್ರಕಾರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ರಷ್ಯಾದಲ್ಲಿ ಗಸಗಸೆ ಮಾರಾಟ ಮಾಡಲು ಕೂಡ ಅವಕಾಶವಿಲ್ಲ. ಗಸಗಸೆ ಬೀಜದ ಮಾರ್ಫಿನ್ ಅಂಶದ ಪರಿಣಾಮ ಸಿಂಗಾಪುರ ಮತ್ತು ತೈವಾನ್‌ನಲ್ಲಿ ಬೀಜವನ್ನು ನಿಷೇಧ ಹೇರಲಾಗಿದ್ದು, ಸಿಂಗಾಪುರದ ಸೆಂಟ್ರಲ್ ನಾರ್ಕೋಟಿಕ್ಸ್ ಬ್ಯೂರೋ ಇದನ್ನು ‘ನಿಷೇಧಿತ ಸರಕು’ ಎಂದು ಪರಿಗಣಿಸಿದೆ.

ಚೂಯಿಂಗ್ ಗಮ್ :
ಭಾರತದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚೂಯಿಂಗ್ ಗಮ್ ಇಷ್ಟ ಪಡುವುದು ಸಹಜ. ಆದರೆ ಸಿಂಗಪೋರಿಯನ್ನರು ದೇಶವನ್ನು ಸ್ವಚ್ಛವಾಗಿಡಲು ಬಯಸುವ ಹಿನ್ನೆಲೆ ಚೂಯಿಂಗ್ ಗಮ್ ಅನ್ನು ನಿಷೇಧಿಸಲಾಗಿದೆ. ದೇಶವನ್ನು ಸ್ವಚ್ಚವಾಗಿಡುವ ಸಲುವಾಗಿ ಕಟ್ಟುನಿಟ್ಟಿನ ನಿಯಮವನ್ನು ಈ ದೇಶದಲ್ಲಿ ಅನುಸರಿಸಲಾಗುತ್ತದೆ. ಅದಕ್ಕಾಗಿಯೇ ದೇಶವನ್ನು ಸ್ವಚ್ಛವಾಗಿಡಲು 1992 ರಲ್ಲಿ ಎಲ್ಲಾ ರೀತಿಯ ಚೂಯಿಂಗ್ ಗಮ್ ಅನ್ನು ನಿಷೇಧಿಸಲಾಯಿತು.

ಕೆಚಪ್ :
ಪಕೋಡಗಳಿಂದ ಸ್ಯಾಂಡ್‌ವಿಚ್‌ಗಳವರೆಗೆ, ಕೆಚಪ್ ಇಲ್ಲದೆ ಯಾವುದೇ ತಿಂಡಿ ತಿನಿಸು ಬಾಯಿಗೆ ಇಟ್ಟರು ಏನೋ ಕಳೆದುಕೊಂಡ ಭಾವ ಆವರಿಸುತ್ತದೆ. ಆದರೆ ಫ್ರಾನ್ಸ್‌ನಲ್ಲಿ ಹದಿಹರೆಯದ ಮಂದಿ ಅತಿಯಾಗಿ ಕೆಚಪ್ ಸೇವಿಸುವ ಪ್ರವೃತ್ತಿ ಫ್ರೆಂಚ್ ಸರ್ಕಾರವು ಕೆಚಪ್ ಅನ್ನು ನಿಷೇಧಿಸಿದೆ.

ಕಬಾಬ್:
ಭಾರತೀಯ ಜನರ ನೆಚ್ಚಿನ ಖಾದ್ಯಗಳಲ್ಲಿ ಕಬಾಬ್ ಕೂಡ ಒಂದಾಗಿದ್ದು, ಈ ಪದಾರ್ಥವನ್ನು ವೆನಿಸ್‌ನಲ್ಲಿ 2017 ರಲ್ಲಿ ‘ನಗರದ ಅಲಂಕಾರ ಮತ್ತು ಸಂಪ್ರದಾಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ‘ ಕಬಾಬ್ ಅಂಗಡಿಗಳಿಗೆ ನಿಷೇಧ ನಿಷೇಧ ಹೇರಲಾಗಿದೆ.

ಸಮೋಸ:
ಭಾರತದಲ್ಲಿ ಹೆಚ್ಚಿನ ಮಂದಿಯ ಫೇವರೇಟ್ ಸ್ನ್ಯಾಕ್ಸ್ ಆಗಿರುವ ಸಮೋಸಾವನ್ನು ಸೊಮಾಲಿಯಾ ದೇಶದಲ್ಲಿ ಧಾರ್ಮಿಕ ಕಾರಣದ ಹಿನ್ನೆಲೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: Pooja Bhatt: ತಂದೆಯೊಂದಿಗೇ ಲಿಪ್ ಲಾಕ್ ಮಾಡಿದ ಪೂಜಾ ಭಟ್- ವೈರಲ್ ಫೋಟೋ ಬಗ್ಗೆ ಕೊನೆಗೂ ತುಟಿಬಿಚ್ಚಿದ ನಟಿ

You may also like

Leave a Comment