Home » ChatGPT: 17 ವೈದ್ಯರಿಂದ ಪತ್ತೆ ಮಾಡಲಾಗದ ಮಗುವಿನ ನೋವನ್ನು ಕ್ಷಣಾರ್ಧದಲ್ಲಿ ಹುಡುಕಿದ Chat GPT! ಏನದು ಅಂತಾ ನೋವು?

ChatGPT: 17 ವೈದ್ಯರಿಂದ ಪತ್ತೆ ಮಾಡಲಾಗದ ಮಗುವಿನ ನೋವನ್ನು ಕ್ಷಣಾರ್ಧದಲ್ಲಿ ಹುಡುಕಿದ Chat GPT! ಏನದು ಅಂತಾ ನೋವು?

1 comment
ChatGPT

ChatGPT: ಇಂದು ನಾವು ಯಾವುದೇ ಕಾರ್ಯ ನಿರ್ವಹಿಸುವುದಾದರೂ ಕೂಡ ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಯಾಂತ್ರಿಕ ಸಾಧನಗಳಿಗೆ ಒಗ್ಗಿಕೊಂಡಿದ್ದೇವೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ. ಯಾವುದೇ ಸಾಧನವನ್ನು ಗಮನಿಸಿದರೂ ಕೂಡ, ಹೊಸ ಹೊಸ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದು ಸಾಮಾನ್ಯವಾಗಿದೆ.

ಅದೇ ರೀತಿ ವಿಜ್ಞಾನ ಕ್ಷೇತ್ರದಲ್ಲಿ (Science)ಕೂಡ ಮಹತ್ತರ ಬದಲಾವಣೆಯಾಗಿದ್ದು, ಅದೆಷ್ಟೋ ಮಾರಕ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. 3 ವರ್ಷಗಳ ಕಾಲ 17 ವೈದ್ಯರು ಪತ್ತೆಹಚ್ಚಲಾಗದೆ ಇದ್ದ ಸಮಸ್ಯೆಗೆ ಚಾಟ್‌ಜಿಪಿಟಿ ಪಟಾ-ಪಟ್ ಎಂದು ಕೆಲವೇ ಹೊತ್ತಲ್ಲಿ ಮೂಲ ಸಮಸ್ಯೆಯನ್ನ ಪತ್ತೆಹಚ್ಚಿದ ಅಪರೂಪದ ಘಟನೆ ವರದಿಯಾಗಿದೆ.

ಇತ್ತೀಚಿಗೆ ಎಐ ಅಥವಾ ಕೃತಕ ಬುದ್ಧಿಮತ್ತೆಯ ಚರ್ಚೆ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿ ವಿಶೇಷವಾಗಿ ಚಾಟ್‌ಜಿಪಿಟಿ (Chat GPT)ಹೆಚ್ಚು ಜನಪ್ರಿಯತೆ ಗಳಿಸಿದೆ. ಇಲ್ಲೊಂದು ಪ್ರಕರಣದಲ್ಲಿ 3 ವರ್ಷಗಳ ಕಾಲ 17 ವೈದ್ಯರು ಪತ್ತೆಹಚ್ಚಲಾಗದೆ ಇದ್ದದ್ದನ್ನು ಚಾಟ್‌ಜಿಪಿಟಿ ಪಟ್‌ ಅಂತ ಕೆಲ ಹೊತ್ತಲ್ಲೇ ಪತ್ತೆಹಚ್ಚಿದೆ. ಅಮೆರಿಕದಲ್ಲಿ ತನ್ನ ಮಗ 3 ವರ್ಷಗಳ ಕಾಲ ಅನುಭವಿಸಿದ ನೋವಿಗೆ ಕಾರಣವೇನು ಎಂದು ತಿಳಿದುಕೊಳ್ಳಲು ತಾಯಿಯೊಬ್ಬಳು ಬರೋಬ್ಬರಿ 17 ವೈದ್ಯರನ್ನು ಭೇಟಿಯಾದರು ಪ್ರಯೋಜನವಾಗಿಲ್ಲ.

COVID-19 ಲಾಕ್‌ಡೌನ್ ಸಮಯದಲ್ಲಿ, 4 ವರ್ಷದ ಮಗ ಅಲೆಕ್ಸ್‌ ನೋವಿನಿಂದ ಬಳಲುವುದ ಕಂಡು ಎರಡು ಮಕ್ಕಳ ತಾಯಿ ಕರ್ಟ್ನಿ ಆತ ಎದುರಿಸುತ್ತಿರುವ ಸಮಸ್ಯೆ ಏನು ಎಂದು ತಿಳಿಯಲು 3 ವರ್ಷಗಳ ಕಾಲ ತಾಯಿ ಏನೇನೋ ಹರಸಾಹಸ ಪಟ್ಟಿದ್ದಾರೆ. ಅಲೆಕ್ಸ್‌ ಅಗಿಯಲು ಪ್ರಾರಂಭಿಸಿದ ನಂತರ ಮೋಲಾರ್‌ ಹಲ್ಲುಗಳು ಬರುತ್ತಿವೆಯೇ ಅಥವಾ ಕುಳಿ ಆಗಿ ಸಮಸ್ಯೆ ಆಗುತ್ತಿದೆಯೇ ಎಂದು ಆತನನ್ನು ದಂತವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ,ಮಕ್ಕಳ ವೈದ್ಯರ ಬಳಿಗೆ ಕರದೊಯ್ದರು ಯಾವುದೇ ಪ್ರಯೋಜನವಾಗಿಲ್ಲ.

ಈ ನಡುವೆ, ಅಲೆಕ್ಸ್ ತೀವ್ರ ತೆರನಾದ ತಲೆನೋವು ಕೂಡ ಅನುಭವಿಸುತ್ತಿದ್ದ. ಹೀಗಾಗಿ,ಆತನ ತಾಯಿ ಬಾಲಕನನ್ನು ನ್ಯೂರಾಲಜಿಸ್ಟ್‌ ಬಳಿ ಕರೆದೊಯ್ದಾಗ ಅಲೆಕ್ಕ್ಸ್‌ಗೆ ಮೈಗ್ರೇನ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು, ಸೈನಸ್ ಕ್ಯಾವಿಟೀಸ್ ಅಥವಾ ಶ್ವಾಸನಾಳದ ಕಾರಣದಿಂದ ನಿದ್ರೆಯ ಸಮಸ್ಯೆ ಇದೆಯೇ ಎಂದು ಪರಿಶೀಲಿಸಲು ಕಿವಿ, ಮೂಗು ಮತ್ತು ಗಂಟಲಿನ ವೈದ್ಯರ ಬಳಿಗೂ ಕೂಡ ಕರೆದೊಯ್ಯಲಾಗಿತ್ತು. ಒಟ್ಟಾರೆಯಾಗಿ, ಅವರು ಮೂರು ವರ್ಷಗಳಲ್ಲಿ 17 ವಿವಿಧ ವೈದ್ಯರನ್ನು ಭೇಟಿ ಮಾಡಿದರೂ ಅವನ ರೋಗಲಕ್ಷಣಗಳನ್ನು ವಿವರಿಸುವ ಜೊತೆಗೆ ರೋಗವೇನು ಎಂಬುದನ್ನು ಪತ್ತೆ ಹಚ್ಚಲು ಆಗಿರಲಿಲ್ಲ.

ಕೊನೆಗೆ ಆತನ ತಾಯಿ ಕರ್ಟ್ನಿ ಚಾಟ್‌ಜಿಪಿಟಿಯಲ್ಲಿ ತನ್ನ ಮಗನ ವೈದ್ಯಕೀಯ ಮಾಹಿತಿಯನ್ನು ನಮೂದಿಸುವ ಮೂಲಕ ರೋಗನಿರ್ಣಯವನ್ನು ಪತ್ತೆಹಚ್ಚಲು AI ಉಪಕರಣವನ್ನು ಬಳಕೆ ಮಾಡಿದ್ದಾರೆ. ಇದರಿಂದಾಗಿ ಟೆಥರ್ಡ್ ಕಾರ್ಡ್ ಸಿಂಡ್ರೋಮ್ ಎಂಬ ಸಮಸ್ಯೆ ಗೊತ್ತಾಗಿ ನರಶಸ್ತ್ರಚಿಕಿತ್ಸರನ್ನು ಭೇಟಿ ಮಾಡಿ ಅಲೆಕ್ಸ್‌ಗೆ ಟೆಥರ್ಡ್ ಸಿಂಡ್ರೋಮ್ ಇರುವ ಅನುಮಾನದಿಂದ ವೈದ್ಯರನ್ನು ಭೇಟಿ ಮಾಡಿದ್ದಾರೆ. ವೈದ್ಯರು MRI ಸ್ಕ್ಯಾನಿಂಗ್ ಮಾಡಿದ ಬಳಿಕ ಅವರ ಅನುಮಾನ ನಿಜವೆಂದು ಗೊತ್ತಾಗಿ ಅಲೆಕ್ಸ್ ಶಸ್ತ್ರಚಿಕಿತ್ಸೆ ನೀಡಿ, ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: Dress Code: ಇನ್ಮುಂದೆ ಶಾಲಾ – ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಿಜಾಬ್ ನಿಷೇಧ !! ಕೊನೆಗೂ ಮಹತ್ವದ ಆದೇಶ ಹೊರಡಿಸಿದ ಸರ್ಕಾರ!!

You may also like

Leave a Comment