Home » Lucky Painting: ನಿಮ್ಮ ಮನೆ ಗೋಡೆಯಲ್ಲಿ ಈ ಚಿತ್ರಗಳಿವೆಯೇ? ಹಾಗಿದ್ರೆ ನಿಮ್ಮ ಅದೃಷ್ಟವನ್ನೇ ಬಡಿದೆಬ್ಬಿಸುತ್ತವೆ ಈ ಪೇಂಟಿಂಗ್ಸ್

Lucky Painting: ನಿಮ್ಮ ಮನೆ ಗೋಡೆಯಲ್ಲಿ ಈ ಚಿತ್ರಗಳಿವೆಯೇ? ಹಾಗಿದ್ರೆ ನಿಮ್ಮ ಅದೃಷ್ಟವನ್ನೇ ಬಡಿದೆಬ್ಬಿಸುತ್ತವೆ ಈ ಪೇಂಟಿಂಗ್ಸ್

0 comments

Lucky Painting: ಜೀವನದಲ್ಲಿ ಕೆಲವೊಮ್ಮೆ ಎಷ್ಟೇ ಪೂಜೆ ಪುರಸ್ಕಾರ ಮಾಡಿದರು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತದೆ. ಯಾಕೆಂದರೆ ಅನೇಕ ಬಾರಿ ಜನರು ತಿಳಿದು, ತಿಳಿಯದೋ ಕೆಲವು ತಪ್ಪುಗಳನ್ನು ಮಾಡುತ್ತಾರೆ.

ಆದರೆ ಮನೆ, ಹಾಲ್ ಸೇರಿದಂತೆ ಅನೇಕ ಕಡೆ ಫೋಟೋಗಳನ್ನು, ಮೂರ್ತಿಗಳನ್ನು ಇರಿಸಲಾಗುತ್ತೆ. ಇದರಿಂದ ವಾಸ್ತು ದೋಷವನ್ನು ನಿವಾರಣೆ ಮಾಡುತ್ತೆ ಎಂಬ ನಂಬಿಕೆ ಇದೆ. ಹೌದು, ವಾಸ್ತು ಶಾಸ್ತ್ರದ ಪ್ರಕಾರ, ಮನಕ್ಕೆ ಮುದ ನೀಡುವ ಕೆಲವು ಚಿತ್ರಗಳು ಮನೆಯಲ್ಲಿದ್ದರೆ ಅವು ನಮ್ಮ ಅದೃಷ್ಟವನ್ನೂ ಜಾಗೃತ ಗೊಳಿಸುತ್ತದೆ.

ಕೆಲವರು ಮನೆಯ ಅಲಂಕಾರಕ್ಕಾಗಿ ಹಲವು ಬಗೆಯ ಚಿತ್ರಕಲೆಗಳನ್ನು ಎಂದರೆ ಪೇಂಟಿಂಗ್ ಹಾಕಲಾಗುತ್ತದೆ. ಆದರೆ, ಕೆಲವು ಚಿತ್ರಕಲೆಗಳು ಮನೆಗೆ ಧನಾತ್ಮಕ ಶಕ್ತಿಯನ್ನು ಪ್ರವಹಿಸುವಂತೆ ಮಾಡುತ್ತವೆ. ಇದರಿಂದ ನಿಮ್ಮ ಅದೃಷ್ಟವೇ ಬದಲಾಗಬಹುದು ಎಂದು ಹೇಳಲಾಗುತ್ತದೆ.

ವಾಸ್ತುವಿನ ಪ್ರಕಾರ, ಹಂಸವನ್ನು ಸಮೃದ್ಧಿಯ ಸಂಕೇತ ಎಂದು ನಂಬಲಾಗಿದೆ. ಲಿವಿಂಗ್ ರೂಂ, ಇಲ್ಲವೇ ಅತಿಥಿಗಳ ಕೋಣೆಯಲ್ಲಿ ಹಂಸದ ಚಿತ್ರವನ್ನು ಇಡುವುದನ್ನು ಮಂಗಳಕರ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಹನುಮಂತನೊಂದಿಗೆ ರಾಮ, ಲಕ್ಷ್ಮಣ, ಸೀತೆ ಇರುವ ಫೋಟೋ ಇಡುವುದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಫೋಟೋವನ್ನು ಮನೆಯ ಲಿವಿಂಗ್ ಏರಿಯಾದಲ್ಲಿ ಇಡುವುದರಿಂದ ಕುಟುಂಬಸ್ಥರಲ್ಲಿ ಪರಸ್ಪರರ ನಡುವೆ ಪ್ರೀತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಮನೆಯಲ್ಲಿ ಓಡುವ ಬಿಳಿ ಕುದುರೆಯ ಚಿತ್ರ ಇದ್ದರೆ ವ್ಯಾಪಾರ-ವ್ಯವಹಾರದಲ್ಲಿ ಲಾಭ ಗಳಿಸಬಹುದು ಎಂದು ಹೇಳಲಾಗುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಚಿತ್ರ ನಿಮ್ಮ ಕಚೇರಿಯಲ್ಲಿದ್ದರೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ತಾಯಿ ಅನ್ನಪೂರ್ಣೆಯ ಫೋಟೋ ಇಡುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಆಹಾರಕ್ಕೆ ಕೊರತೆ ಆಗುವುದಿಲ್ಲ ಎಂದು ನಂಬಲಾಗಿದೆ.

ಇನ್ನು ಪ್ರತಿ ಮನೆಯಲ್ಲೂ ಲಕ್ಷ್ಮಿ ದೇವಿಯ ಚಿತ್ರ ಇರುತ್ತದೆ. ಆದರೆ, ಮನೆಯ ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಇಡುವುದು ಇಡುವುದರಿಂದ ಮನೆಯಲ್ಲಿ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.

ಇನ್ನು ತಾಯಿ ಯಶೋಧೆಯೊಂದಿಗೆ ಬಾಲ ಕೃಷ್ಣನ ಫೋಟೋ ಮನೆಯಲ್ಲಿದ್ದರೆ ಅದರಲ್ಲೂ ಗರ್ಭಿಣಿ ಮಹಿಳೆಯರು ಮನೆಯಲ್ಲಿದ್ದರೆ ಅವರ ಕೋಣೆಯಲ್ಲಿ ಈ ಫೋಟೋ ಇದ್ದರೆ ತಾಯಿ ಮಗುವಿನ ನಡುವಿನ ಸಂಬಂಧ, ಅವರ ನಡುವಿನ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ರಾಧಾ ಕೃಷ್ಣರನ್ನು ನಿಜವಾದ ಪ್ರೀತಿಯ ಸಂಕೇತ ಎಂದು ನಂಬಲಾಗಿದೆ. ಹಾಗಾಗಿ, ಬೆಡ್ ರೂಂನಲ್ಲಿ ರಾಧಾ ಕೃಷ್ಣರ ಫೋಟೋ ಇಡುವುದರಿಂದ ದಂಪತಿಗಳ ಪ್ರೀತಿ, ಸಾಮರಸ್ಯ ಹೆಚ್ಚಾಗುತ್ತದೆ.

ಆದರೆ ನೆನಪಿರಲಿ ಯಾವುದೇ ಕಾರಣಕ್ಕೂ ಗೋಡೆಗಳ ಮೇಲೆ ಕಾಡು ಮೃಗಗಳ ಫೋಟೋಗಳನ್ನು ಹಾಕಬೇಡಿ. ಇದು ಮನುಷ್ಯನ ಕ್ರೋಧವನ್ನು ಹೆಚ್ಚು ಮಾಡುತ್ತದೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.

You may also like

Leave a Comment