IMD Weather Alert of 14 September 2023: ಮುಂದಿನ ನಾಲ್ಕು ದಿನಗಳ ಕಾಲ ಪಶ್ಚಿಮ ಬಂಗಾಳ, ಜಾರ್ಖಂಡ್, ದೆಹಲಿ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ವಿದರ್ಭದಲ್ಲಿ ಭೀಕರ ಮಳೆಯಾಗುವ ಮುನ್ಸೂಚನೆಯೊಂದನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಚಂಡಮಾರುತ ಜೊತೆಗೆ ಸಿಡಿಲು ಸಹಿತ ವಿವಿದೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ(IMD Weather Alert).
ಉತ್ತರಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಶನಿವಾರವದವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕಾರಣದಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೆ.16ರವರೆಗೆ ಮಧ್ಯಪ್ರದೇಶ, ವಿದರ್ಭ ಪ್ರದೇಶದಲ್ಲಿ ಮಳೆಯಾಗಲಿದೆ.
ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಘಟ್ಟ ಪ್ರದೇಶ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮರಾಠವಾಡದ ಘಾಟ್, ಗೋವಾ, ಮದ್ಯ ಮಹಾರಾಷ್ಟ್ರ ಇಲ್ಲೆಲ್ಲ ಶನಿವಾರದವರೆಗೆ ಭಾರೀ ಮಳೆಯಾಗುವ ಸಂಭವನೀಯತೆ ಇದೆ.
