2000 note: 2000 ರೂಪಾಯಿ ನೋಟಿಗೆ (2000 note) ವಿದಾಯ ಹೇಳುವ ಸಮಯ ಹತ್ತಿರ ಬಂದಿದೆ. ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಮೆಜಾನ್ ರೂ.2000ಗೆ ಸಂಬಂಧಪಟ್ಟಂತೆ ಹೊಸ ನ್ಯೂಸ್ವೊಂದನ್ನು ನೀಡಿದ್ದು, ಜೊತೆಗೆ ಹೊಸ ನಿಯಮ ಕೂಡಾ ಮಾಡಿದೆ. ಕ್ಯಾಶ್ ಆನ್ ಡೆಲಿವರಿ ಸಮಯದಲ್ಲಿ 2000ರೂ. ನೋಟಿನ ಸ್ವೀಕಾರದ ಬಗ್ಗೆ ಇ-ಕಾಮರ್ಸ್ ದೈತ್ಯ ಹೊಸ ಸುದ್ದಿ ಹಂಚಿಕೊಂಡಿದೆ.
ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಪಾವತಿ ಮತ್ತು ಕ್ಯಾಶ್ಲೋಡ್ಗಾಗಿ ಸೆಪ್ಟೆಂಬರ್ 19 ರಿಂದ 2,000 ರೂಪಾಯಿ ನೋಟುಗಳನ್ನು ನಗದು ರೂಪದಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಇ-ಕಾಮರ್ಸ್ ಕಂಪನಿ ಹೇಳಿದೆ. ಅಮೆಜಾನ್ ತನ್ನ ಟಿಪ್ಪಣಿಯಲ್ಲಿ ಪ್ರಸ್ತುತ 2,000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ಸ್ವೀಕರಿಸುತ್ತಿದೆ ಎಂದು ಹೇಳಿದೆ. ಆದಾಗ್ಯೂ, ಸೆಪ್ಟೆಂಬರ್ 19, 2023 ರಿಂದ 2000 ರೂಪಾಯಿಯ ಕರೆನ್ಸಿ ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲ. ಥರ್ಡ್ ಪಾರ್ಟಿ ಕೊರಿಯರ್ ಪಾಲುದಾರರ ಮೂಲಕ ಉತ್ಪನ್ನವನ್ನು ತಲುಪಿಸಿದರೆ, 2000 ರೂ ನೋಟನ್ನು ಸ್ವೀಕರಿಸಲಾಗುವುದು ಎಂದು Amazon ಹೇಳಿದೆ.
ನಿಮ್ಮ ಬಳಿ ಇನ್ನೂ ರೂ 2000 ನೋಟು ಇದ್ದರೆ, ನೀವು ಅದನ್ನು ಹತ್ತಿರದ ಬ್ಯಾಂಕ್ ಶಾಖೆಯಿಂದ ಬದಲಾಯಿಸಲು ಅವಕಾಶವಿದೆ. ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್ (RBI) 2000 ರೂ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಿತು. ಅಲ್ಲದೆ, ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿ ಇಡಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿದೆ. ಅದರ ನಂತರ ನೋಟು ಕಾನೂನುಬದ್ಧ ಟೆಂಡರ್ ವರ್ಗದಿಂದ ತೆಗೆದುಹಾಕಲಾಗುತ್ತದೆ.
ಇದನ್ನೂ ಓದಿ: ಸಹೋದರಿ ಕುಟುಂಬದ ಸದಸ್ಯೆ ಅಲ್ಲ! ಹೈಕೋರ್ಟ್ ನಿಂದ ಮಹತ್ವದ ತೀರ್ಪು!! ಏನಿದು ಪ್ರಕರಣ?
