Shakti Yojana: ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉತ್ತಮ ಪ್ರಯೋಜನ ಆಗಿದೆ. ಈ ಯೋಜನೆ ಜಾರಿಯಾದ ಬಳಿಕ ಕೋಟ್ಯಾಂತರ ಜನ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಓಡಾಟ ನಡೆಸಿದ್ದಾರೆ. ಈಗಾಗಲೇ ಶಕ್ತಿ ಯೋಜನೆ ಆರಂಭವಾಗಿ ಮೂರು ತಿಂಗಳು ಕಳೆದಿದೆ.
ಆದರೆ ಮಹಿಳೆಯರು ಶಕ್ತಿ ಯೋಜನೆ (Shakti Yojana) ಅಡಿಯಲ್ಲಿ ಪ್ರಯಾಣ ಮಾಡಲು ಆಧಾರ್ ಕಾರ್ಡ್ ತೋರಿಸಿ ಬಸ್ ನಲ್ಲಿ ಉಚಿತ ಟಿಕೆಟ್ ಪಡೆಯಬೇಕಾಗಿತ್ತು. ಆದ್ರೆ ಈ ಕುರಿತು ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ಸಾರಿಗೆ ನಿಗಮ ಸಿದ್ಧತೆ ನಡೆಸಿದೆ.
ಹೌದು, ಇನ್ಮುಂದೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಬಸ್ ನಲ್ಲಿ ಪ್ರಯಾಣ ಮಾಡಲು ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ. ಇದರ ಬದಲಾಗಿ ಶೀಘ್ರದಲ್ಲೇ ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.
ಈಗಾಗಲೇ ಶಕ್ತಿ ಯೋಜನೆ ಆರಂಭಕ್ಕೂ ಮುನ್ನ ಮಹಿಳೆಯರ ಸಂಚಾರಕ್ಕೆ ಸಹಾಯವಾಗುವುದರ ಅಡಿ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಚಿಂತನೆ ನಿರ್ಧರಿಸಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಸ್ಮಾರ್ಟ್ ಕಾರ್ಡ್ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಕೆಲವೇ ದಿನದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯ ಆರಂಭವಾಗಲಿದೆ.
ಮಹಿಳೆಯರು ಸ್ಮಾರ್ಟ್ ಕಾರ್ಡ್ ಅರ್ಜಿ ಹಾಕಲು, ಸೇವಾಸಿಂಧು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಲ್ಲದೇ ಆಧಾರ್ ಕಾರ್ಡ್ ಆಧಾರದ ಮೇಲೆ ಪ್ರಿಂಟ್ ಆಗಲಿರುವ ಕಾರ್ಡ್
ಸೇವಾ ಕೇಂದ್ರದಲ್ಲಿಯೇ ಸ್ಮಾರ್ಟ್ ಕಾರ್ಡ್ ಪ್ರಿಂಟ್ ಔಟ್ ಲಭ್ಯವಾಗಲಿದೆ. ಬೆಂಗಳೂರು ಒನ್, ಗ್ರಾಮ್ ಒನ್ ,ಸೇವಾ ಸಿಂಧು ಕೇಂದ್ರಗಳಲ್ಲಿ ಕಾರ್ಡ್ ಪಡೆಯಲು ಅವಕಾಶ ನೀಡಲಾಗಿದೆ.
ಮುಖ್ಯವಾಗಿ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ನಮ್ಮ ರಾಜ್ಯದ ನಿವಾಸಿಗೆ ಮಾತ್ರ ದೊರೆಯಲಿದ್ದು, ಸ್ಮಾರ್ಟ್ ಕಾರ್ಡ್
ಆಧಾರ್ ಕಾರ್ಡ್ ನಲ್ಲಿ ಕೇವಲ ಕರ್ನಾಟಕದೊಳಗಿನ ಅಡ್ರೆಸ್ ಇದ್ದರೆ ಮಾತ್ರ ಸಿಗಲಿದೆ. ಅದಲ್ಲದೆ ಸ್ಮಾರ್ಟ್ ಕಾರ್ಡ್ ವಿತರಣೆ ವೇಳೆ ನಕಲಿ ಆಧಾರ್ ಕಾರ್ಡ್ ಬಳಸಿ ಸ್ಮಾರ್ಟ್ ಕಾರ್ಡ್ ಪಡೆಯುವವರ ಮೇಲೆಯೂ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಇದನ್ನೂ ಓದಿ: ಇಂದು ಈ ರಾಶಿಯವರಿಗೆ ಹಠಾತ್ ಪ್ರಯಾಣದ ಯೋಗ!! ಶುಭಸೂಚನೆಯ ಭಾಗ್ಯ!!!
