Birth Certificate: ಅಕ್ಟೋಬರ್ ನಿಂದ ಈ ಎಲ್ಲ ಕೆಲಸಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯವಾಗಿದ್ದು ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟವಾಗಿದೆ. ಕಳೆದ ಸಂಸತ್ ಅಧಿವೇಶನದ ವೇಳೆ ಜನನ ಮತ್ತು ಮರಣ ನೋಂದಣಿ(Birth Certificate)(ತಿದ್ದುಪಡಿ) ಕಾಯ್ದೆ, 2023ಗೆ ತಿದ್ದುಪಡಿ ಮಾಡಲಾಗಿದ್ದು, ಇದಕ್ಕೆ ಅನುಮೋದನೆ ಕೂಡ ನೀಡಲಾಗಿದೆ. ಹೀಗಾಗಿ, ಅಕ್ಟೋಬರ್ 1 ರಿಂದ ಜನನ ಪ್ರಮಾಣ ಪತ್ರವೇ ಎಲ್ಲಾ ದಾಖಲೆಗಳಿಗೆ ಮೂಲ ದಾಖಲೆಯಾಗಿಸುವ ಕಾನೂನು ಜಾರಿಗೆ ಬರಲಿದೆ.
ಅಕ್ಟೋಬರ್ 1ರಿಂದ ನೀವು ಆಧಾರ್ ಕಾರ್ಡ್ ಮಾಡಿಸುವ ಇಲ್ಲವೇ ತಿದ್ದುಪಡಿ ಮಾಡಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ. ಡಿಎಲ್ ಪಡೆಯಬೇಕು. ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿವಾಹ ನೋಂದಣಿ, ಸರ್ಕಾರಿ ಉದ್ಯೋಗಕ್ಕೂ ಜನನ ಪ್ರಮಾಣ ಪತ್ರವನ್ನು ದಾಖಲೆಯಾಗಿ ನೀಡಬಹುದು. ಜನನ ಮತ್ತು ಮರಣ (ತಿದ್ದುಪಡಿ) ಮಸೂದೆಗೆ ಸಂಸತ್ತು ಕಳೆದ ತಿಂಗಳು ಅನನುಮೋದನೆ ನೀಡಿದ್ದು, ಈಗ ಇದರ ಜಾರಿ ದಿನಾಂಕ ನಿಗದಿಯಾಗಿದೆ.
ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023 ಅಕ್ಟೋಬರ್ 1 ರಿಂದ ಜಾರಿಗೆ ಬರಲಿದ್ದು,ಇದು ಶಿಕ್ಷಣ ಸಂಸ್ಥೆಗೆ ಪ್ರವೇಶ, ಚಾಲನಾ ಪರವಾನಗಿ ವಿತರಣೆ, ಮತದಾರರ ಪಟ್ಟಿ ತಯಾರಿಕೆ, ಆಧಾರ್ ಸಂಖ್ಯೆ, ವಿವಾಹ ನೋಂದಣಿ ಅಥವಾ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿಗಾಗಿ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಕೆ ಮಾಡಲು ಮಾಡಿಕೊಡುತ್ತದೆ. ಇದು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನೊಂದಾಯಿತ ಜನನ ಮತ್ತು ಮರಣ ದತ್ತಾಂಶ ಸಂಗ್ರಹಕ್ಕೆ ಅವಕಾಶ ನೀಡಲಿದ್ದು, ಸಾರ್ವಜನಿಕ ಸೇವೆ, ಸಾಮಾಜಿಕ ಲಾಭಗಳನ್ನು ಪಾರದರ್ಶಕ ಮತ್ತು ಕಾರ್ಯಕ್ಷಮತೆಯ ಮೂಲಕ ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ.ಜನನ ಪ್ರಮಾಣಪತ್ರ ನೀಡಿ ಯಾವುದೇ ಈ ಮೇಲ್ಕಂಡ ಯಾವುದೇ ದಾಖಲೆ ಪಡೆಯಬಹುದಾಗಿದೆ. ಹೊಸ ನಿಯಮದ ಅನುಸಾರ, ಡಿಜಿಟಲ್ ಸ್ವರೂಪದಲ್ಲಿ ಜನನ ಮತ್ತು ಮರಣ ನೋಂದಣಿ, ಡಿಜಿಟಲ್ ಸ್ವರೂಪದಲ್ಲೇ ಪ್ರಮಾಣ ಪತ್ರ ವಿತರಿಸುವ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಮಹಿಳಾ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ – ಇನ್ಮುಂದೆ ಫ್ರೀಯಾಗಿ ಓಡಾಡಲು ಆಧಾರ್ ಕಾರ್ಡ್ ಬೇಕಿಲ್ಲ!
