Home » LPG Price: ಜನರೇ ನಿಮಗೆ ಬಂಪರ್ ಗುಡ್ ನ್ಯೂಸ್! ಇನ್ನು ಕೇವಲ 450 ರೂ.ಗೆ ಗ್ಯಾಸ್ ಸಿಲಿಂಡರ್ !! ಪಡೆಯೋದು ಹೇಗೆ ಗೊತ್ತಾ ?

LPG Price: ಜನರೇ ನಿಮಗೆ ಬಂಪರ್ ಗುಡ್ ನ್ಯೂಸ್! ಇನ್ನು ಕೇವಲ 450 ರೂ.ಗೆ ಗ್ಯಾಸ್ ಸಿಲಿಂಡರ್ !! ಪಡೆಯೋದು ಹೇಗೆ ಗೊತ್ತಾ ?

0 comments

LPG Price: ದೇಶದಲ್ಲಿ ಹಣದುಬ್ಬರ ತಾಂಡವವಾಡುತ್ತಿದೆ. ಕೇಂದ್ರ ಬ್ಯಾಂಕ್‌ಗಳು ಬಡ್ಡಿ ದರವನ್ನು ನಿರಂತರವಾಗಿ ಹೆಚ್ಚಿಸಲು ಸಾಗಿವೆ. ಹೀಗಿರುವಾಗ ವಸ್ತುಗಳ ಬೆಲೆ, ಸೇವೆಗಳ ದರ ಸಾಕಷ್ಟು ಪಟ್ಟು ಹೆಚ್ಚಾಗಿರುವುದನ್ನು ಕಾಣಬಹುದು. ಜೀವನ ವೆಚ್ಚ ಸಾಕಷ್ಟು ಮಟ್ಟಿಗೆ ಹೆಚ್ಚಾಗುತ್ತಿದೆ. ಇದರಿಂದ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಸದ್ಯ ಬೆಲೆ ಏರಿಕೆ ಮಧ್ಯೆ ಮಧ್ಯಪ್ರದೇಶ ಸರ್ಕಾರವು ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಿದೆ.

ಹೌದು, ಮಧ್ಯಪ್ರದೇಶ ಸರ್ಕಾರವು ಸೆಪ್ಟೆಂಬರ್ 01, 2023ರಂದು ರಾಜ್ಯ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಸದ್ಯ ಉಜ್ವಲಾ ಯೋಜನೆಯ ಫಲಾನುಭವಿಗಳು, ಎಲ್‌ಪಿಜಿ ಸಂಪರ್ಕ ಹೊಂದಿರುವ ಮಹಿಳೆಯರು ಮತ್ತು ಲಾಡ್ಲಿ ಬೆಹ್ನಾ ಯೋಜನೆಯ ಫಲಾನುಭವಿಗಳು ಕೇವಲ 450 ರೂ.ಗಳಿಗೆ ಸಿಲಿಂಡರ್ ಬುಕ್ ಮಾಡಲು ಅವಕಾಶ ಕಲ್ಪಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟವು, ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು (LPG Price) 200 ರೂ.ಗಳಷ್ಟು ಕಡಿಮೆ ಮಾಡುವುದಾಗಿ ಘೋಷಿಸಿದ ಎರಡೇ ದಿನಗಳಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸಚಿವ ಸಂಪುಟವು ಸಹ ಎಲ್‌ಪಿ‌ಜಿ ಸಿಲಿಂಡರ್ ಬೆಲೆ ಇಳಿಕೆ ಪ್ರಸ್ತಾವನೆಗೆ ಅನುಮೋದನೆ ನೀಡದೆ.

ಕೇವಲ 450 ರೂಪಾಯಿಗಳಿಗೆ ಎಲ್‌ಪಿಜಿ ಸಿಲಿಂಡರ್ ಪಡೆಯಲು, ಅರ್ಜಿದಾರರು ಲಾಡ್ಲಿ ಬಹನ ಯೋಜನೆಯಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮತ್ತು ಮುಖ್ಯವಾಗಿ ಗ್ರಾಮ ಪಂಚಾಯಿತಿ ಕಚೇರಿ, ಅಂಗನವಾಡಿ ಕಚೇರಿ ಅಥವಾ ಕ್ಯಾಂಪ್ ಆಫೀಸ್‌ನಲ್ಲಿ ಲಾಡ್ಲಿ ಬಹನ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಮಧ್ಯಪ್ರದೇಶ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ: Cleaning Tips: ಬಟ್ಟೆಯಲ್ಲಿ ಆದ ಕಲೆ ಹೋಗ್ತಾ ಇಲ್ವಾ?! ತಿಕ್ಕಿ ತಿಕ್ಕಿ ಸಾಕಾಯ್ತಾ? ಹಾಗಿದ್ರೆ ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ!

You may also like

Leave a Comment