Home » C. T Ravi: BJP ಟಿಕೆಟ್ ಮಾರಾಟ ವಿಚಾರ- ಅಚ್ಚರಿಯ ಹೇಳಿಕೆ ನೀಡಿದ ಸಿ. ಟಿ ರವಿ !

C. T Ravi: BJP ಟಿಕೆಟ್ ಮಾರಾಟ ವಿಚಾರ- ಅಚ್ಚರಿಯ ಹೇಳಿಕೆ ನೀಡಿದ ಸಿ. ಟಿ ರವಿ !

0 comments
C T Ravi Admitted to Hospital

C.T Ravi: ಬಿಜೆಪಿ ಟಿಕೆಟ್ ಮಾರಾಟ ವಿಚಾರದ ಕುರಿತು ಸಿ. ಟಿ ರವಿ ಅಚ್ಚರಿಯ ಹೇಳಿಕೆ ನೀಡಿದ್ದು, ಸದ್ಯ ಭಾರೀ ವೈರಲ್ ಆಗಿದೆ. ನವದೆಹಲಿಯಲ್ಲಿ ಮಾತನಾಡಿದ ಸಿ. ಟಿ ರವಿ (C.T Ravi), ಬಿಜೆಪಿಯಲ್ಲಿ ಹಣ ಕೊಟ್ಟು ಟಿಕೆಟ್ ಖರೀದಿ ಸಾಧ್ಯವಿಲ್ಲ. ಹಣದ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮುಂದೆ ಯಾರು ಮಾಡಬಾರದು. ಒಂದು ವೇಳೆ ಮಾಡಿದರೆ ಮತ್ತೊಬ್ಬ ಗೋವಿಂದ ಪೂಜಾರಿ ಆಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಸಂಘಟನೆಯ ಕಾರ್ಯಕರ್ತೆ ಚೈತ್ರ ಕುಂದಾಪುರ ಅವರು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಕೋಟ್ಯಾಂತರ ರೂ. ವಂಚಿಸಿರುವ ಆರೋಪವಿದೆ. ಇದೀಗ ಬಿಜೆಪಿ (BJP) ಪಕ್ಷದಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಎನ್ನವುದು ಚೈತ್ರಾ ಕುಂದಾಪುರ (Chaitra Kundapur) ಪ್ರಕರಣದಲ್ಲಿ ಸಾಬೀತಾಗಿದೆ.

ಬಿಜೆಪಿ ದೊಡ್ಡ ಪಕ್ಷವಾಗಿದೆ. ಇಲ್ಲಿ ಎಲ್ಲ ತರದ ಜನರು ಇದ್ದಾರೆ. ಕೆಲವರು ಸಮಯದ ದುರ್ಬಳಕೆ ಮಾಡಿಕೊಳ್ಳಲು ಪಕ್ಷಕ್ಕೆ ಬರುತ್ತಾರೆ. ಬಿಜೆಪಿ ಚುನಾವಣಾ ಸಮಿತಿಯಲ್ಲಿದ್ದವರಿಗೆ ತಮಗೆ ಬೇಕಾದ ಅಭ್ಯರ್ಥಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಒಮ್ಮತ ನಿರ್ಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ , ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಹೀಗೆ ಎಲ್ಲ ಪ್ರಮುಖ ನಾಯಕರಿದ್ದಾರೆ. ಟಿಕೆಟ್‌ಗಾಗಿ ಅವರನ್ನು ಸಂಪರ್ಕಿಸಬೇಕು. ಹಣದ ಮೂಲಕ ಟಿಕೆಟ್ ಸಿಗುವ ಪ್ರಶ್ನೆಯೇ ಇಲ್ಲ. ಕನಿಷ್ಠ ದುಡ್ಡು ಕೊಡುವ ಮುನ್ನವಾದರೂ ಗಮನಕ್ಕೆ ತರಬಹುದಿತ್ತು. ಯಾರಿಗೂ ಹೇಳದೇ ಹಣ ನೀಡುವ ಕೆಲಸ ಮಾಡಿದ್ದಾರೆ. ಬಿಜೆಪಿ ಕಾಲಲ್ಲಿ ಚಪ್ಪಲಿ ಹಾಕದವರಿಗೆ ಟಿಕೆಟ್ ನೀಡಿದೆ ಎನ್ನುವುದು ಯಾರು ಮರೆಯಬಾರದು ಎಂದರು.

You may also like

Leave a Comment