Home » Kodi Mutt Swamiji: ಕೋಡಿಶ್ರೀ ನುಡಿದ್ರು ಮತ್ತೊಂದು ಭವಿಷ್ಯವಾಣಿ!!! ಸಂಕ್ರಾಂತಿಗೆ ಈ ಅವಘಡ ಸಂಭವ!!!

Kodi Mutt Swamiji: ಕೋಡಿಶ್ರೀ ನುಡಿದ್ರು ಮತ್ತೊಂದು ಭವಿಷ್ಯವಾಣಿ!!! ಸಂಕ್ರಾಂತಿಗೆ ಈ ಅವಘಡ ಸಂಭವ!!!

2 comments
Kodi Mutt Swamiji

Kodi Mutt Swamiji: ಲೋಕಸಭಾ ಚುನಾವಣೆಯ(Election)ಕಾವು ಗರಿಗೆದರುವ ಮೊದಲೇ ಕೋಡಿ ಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ರಾಜಕೀಯದ ಕುರಿತಂತೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಬಾಗಲಕೋಟೆಯಲ್ಲಿ ರಾಜಕೀಯ(Politics)ಅಸ್ಥಿರತೆ ಇರುವ ಬಗ್ಗೆ ಮಾತನಾಡಿದ್ದು, ಚುನಾವಣೆವರೆಗೂ ಏನನ್ನು ಹೇಳಲು ಸಾಧ್ಯವಾಗದು. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದರು. ಇದೀಗ, ರಾಜಕೀಯ ಹಣಾಹಣಿಯ ಬಗ್ಗೆ ಜನರಿಗಿದ್ದ ಕೌತುಕಕ್ಕೆ ತೆರೆ ಎಳೆಯಲು ಮುಂದಾಗಿರುವ ಶ್ರೀಗಳು ರೋಚಕ ಮಾಹಿತಿಯನ್ನು ನೀಡಿದ್ದಾರೆ. ಕೋಡಿಮಠ ಶ್ರೀ(Kodi Mutt Shree)ಭವಿಷ್ಯ ನುಡಿದಂತೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ಭವಿಷ್ಯ ನುಡಿದಿದ್ದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಭಕ್ತರೊಬ್ಬರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳು(Kodi Mutt Swamiji) ಭವಿಷ್ಯ ನುಡಿದಿದ್ದಾರೆ. ಕಾರ್ತಿಕ, ಸಂಕ್ರಾಂತಿ ವೇಳೆಗೆ‌ ರಾಜ್ಯದಲ್ಲಿ ಕೆಲ ಅವಘಢಗಳು ನಡೆಯುವ ಸಂಭವಿದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಮನುಷ್ಯ ಮಾಡಿದ ತಪ್ಪುಗಳನ್ನ ಭಗವಂತ ಮನ್ನಿಸಿ ಕ್ಷಮೆ ನೀಡುತ್ತಾನೆ. ಎಲ್ಲ ತಿಳಿದು ತಪ್ಪು ಮಾಡಿದಾಗ ಮಾತ್ರ ದೇವರು ಕ್ಷಮೆ ನೀಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ತಿಳಿದುಕೊಂಡು ಮನುಷ್ಯ ಪ್ರಕೃತಿ, ನೆಲ, ಜಲ ಇವುಗಳ ನಿರಂತರವಾಗಿ ದುರುಪಯೋಗ ಮಾಡಲಾಗುತ್ತಿದೆ. ಇದರಿಂದ ನಾವು ಬರ, ಪ್ರವಾಹ ಸೇರಿ ಅನೇಕ ರೀತಿಯ ಪ್ರಕೃತಿ ವಿಕೋಪದಂತಹ ಸಮಸ್ಯೆ ಎದುರಿಸುವಂತಾಗಿದೆ.

ಲೋಕಸಭಾ ಚುನಾವಣೆ ಬಗ್ಗೆ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಮುಖ ಭವಿಷ್ಯವೊಂದನ್ನು ನುಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಅಮಾವಾಸ್ಯೆಯ ಬಳಿಕ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದ್ದು, ರಾಜ್ಯದಲ್ಲಿ ಕೆಲ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರಲಿದೆ ಆತಂಕಪಡಬೇಕಾಗಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: Hubballi:ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಮಹಾನಗರಪಾಲಿಕೆ! ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಸಮ್ಮತಿ!!!

You may also like

Leave a Comment