Home » ಕರೋಕೆ ಮೈಕ್‌ ಭಾರೀ ಶಬ್ದದೊಂದಿಗೆ ಸ್ಫೋಟ! ಕೂದಲೆಳೆಯ ಅಂತರದಿಂದ ಬಾಲಕಿ ಪಾರು!!!

ಕರೋಕೆ ಮೈಕ್‌ ಭಾರೀ ಶಬ್ದದೊಂದಿಗೆ ಸ್ಫೋಟ! ಕೂದಲೆಳೆಯ ಅಂತರದಿಂದ ಬಾಲಕಿ ಪಾರು!!!

0 comments

Palakkad: ಕೇರಳದ (Kerala) ಪಾಲಕ್ಕಾಡ್ (Palakkad)ಜಿಲ್ಲೆಯ ಕಲ್ಲಡಿಕೋಡ್ನಲ್ಲಿ ಮೈಕ್ ಅನ್ನು ಚಾರ್ಜ್ಗೆ ಹಾಕಿ, ಬಾಲಕಿ ಹಾಡು ಹೇಳುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿರುವ ಘಟನೆ ನಡೆದಿದೆ.

ಕೆಲವೊಮ್ಮೆ ನಮ್ಮ ಸಣ್ಣ ನಿರ್ಲಕ್ಷ್ಯ ದೊಡ್ಡ ಅವಾಂತರ ಸೃಷ್ಟಿ ಮಾಡಬಹುದು ಎಂದುದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಕಳೆದ ಭಾನುವಾರ ನಡೆದಿದೆ ಎನ್ನಲಾಗಿದ್ದು, ಭಾರೀ ಶಬ್ದದೊಂದಿಗೆ ಮೈಕ್ ಸ್ಫೋಟಗೊಂಡಿದೆ.ಕರೋಕೆ ಮೈಕ್ ಅನ್ನು ಚಾರ್ಜ್ಗೆ ಹಾಕಿ ಹಾಡುವ ವೇಳೆ ಅದು ಸ್ಫೋಟಗೊಂಡಿರುವ ಘಟನೆ ನಡೆದಿದ್ದು ಫಿನ್ಸಾ ಇರೇನ್ ಎಂಬ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಕರೋಕೆ ಮೈಕ್ ಅನ್ನು ಆನ್ಲೈನ್ ಸೈಟ್ ಒಂದರಲ್ಲಿ ಕೇವಲ 600 ರೂಪಾಯಿಗೆ ಖರೀದಿ ಮಾಡಲಾಗಿದೆ ಎನ್ನಲಾಗಿದೆ. ಇದು ಚೀನಾ ನಿರ್ಮಿತ ಮೈಕ್ ಎಂದು ಪಾಲಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಮೈಕ್‌ನಲ್ಲಿ ಕಂಪನಿಯ ಹೆಸರು ಸ್ಪಷ್ಟವಾಗಿರದ ಹಿನ್ನೆಲೆ ಕಂಪನಿಯ ವಿರುದ್ಧ ಯಾವುದೇ ದೂರು ನೀಡಲು ಕುಟುಂಬಕ್ಕೆ ಸಾಧ್ಯವಾಗಿಲ್ಲ.

You may also like

Leave a Comment