Home » ನಿಗೂಢ ಮರಣ: ಬಾಗಿಲು ಮುಚ್ಚಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮಹಿಳೆಯರ ಸಾವು

ನಿಗೂಢ ಮರಣ: ಬಾಗಿಲು ಮುಚ್ಚಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮಹಿಳೆಯರ ಸಾವು

by ಹೊಸಕನ್ನಡ
1 comment

Doddaballapur :ಎಂದಿನಂತೆ ಉಂಡು ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಿಗ್ಗೆ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ದೊಡ್ಡಬಳ್ಳಾಪುರ (Doddaballapur)ತಾಲೂಕಿನ ಹೊಲೆಯರಹಳ್ಳಿಯಲ್ಲಿ ವರದಿಯಾಗಿದೆ.

 

ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಅವರೆಲ್ಲರೂ ರಾತ್ರಿ ಉಂಡು ಮಲಗಿದ್ದರು. ಬೆಳಿಗ್ಗೆ ಅವರ್ಯಾರು ಏಳಲೇ ಇಲ್ಲ. ಒಂದೇ ಕುಟುಂಬದ ನಾಲ್ವರು ಮರಣಿಸಿದ ಸುದ್ದಿ ಕೇಳಿದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಹೀಗೆ ಅನುಮಾನಾಸ್ಪದವಾಗಿ ಮರಣವನ್ನಪ್ಪಿದವರು ನೇಪಾಳ ಮೂಲದವರು ಎನ್ನಲಾಗಿದೆ. ಮಲಗಿದ್ದಲ್ಲಿ ಸತ್ತವರಲ್ಲಿ ಎಲ್ಲರೂ ಮಹಿಳೆಯರು ಎನ್ನುವುದು ವಿಶೇಷ. ಕಾಲೆ ಸರೇರಾ ಎಂಬ 60 ವರ್ಷದ ಹೆಂಗಸು, ಲಕ್ಷ್ಮಿ ಸರೆರಾ ಎನ್ನುವ 50 ವರ್ಷದ, ಉಷಾ ಸರೇರಾ ಎಂಬ 40 ವರ್ಷದ ಮತ್ತು ಪೋಲ್ ಸರೇರಾ ಎಂಬ 16 ವರ್ಷದ ಮಹಿಳೆಯರು ಮೃತ ದುರ್ದೈವಿಗಳು.

 

ಕೋಳಿ ಫಾರ್ಮಿನಲ್ಲಿ ಉದ್ಯೋಗ ಮಾಡುತ್ತಾ ಹೊಟ್ಟೆ ಹೊರೆಯಲು ಬಂದಿದ್ದ ಈ ಮಹಿಳೆಯರು ಎಂದಿನಂತೆ ಕೆಲಸ ಮುಗಿಸಿ ಊಟ ಮಾಡಿ ಕೋಳಿ ಶೆಡ್ಡಿನ ಪಕ್ಕದಲ್ಲಿರುವ ಶೆಡ್ ಒಂದರಲ್ಲಿ ಬಾಗಿಲು ಮುಚ್ಚಿ ಮಲಗಿದ್ದರು. ಬೆಳಿಗ್ಗೆ ಯಾರು ಕೂಡಾ ಎದ್ದಿಲ್ಲ. ತುಂಬಾ ಹೊತ್ತಾದರೂ ಕೆಲಸಕ್ಕೆ ಯಾರು ಹಾಜರಾಗದ ಕಾರಣ ಸ್ಥಳೀಯರು ಬಾಗಿಲು ತೆರೆದು ನೋಡಿದಾಗ ಒಳಗೆ ಮಲಗಿದ್ದ ಮಹಿಳೆಯರೆಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೋಳಿ ಫಾರ್ಮ್ ತ್ಯಾಜ್ಯಗಳು ಹುಟ್ಟು ಹಾಕಿದ ಅನಿಲಗಳು ಸೇವಿಸಿ ಇವರು ಸತ್ತಿದ್ದಾರಾ ಎನ್ನುವ ಬಗ್ಗೆ ಪೋಸ್ಟ್ ಮಾರ್ಟಂ ನಂತರ ಸ್ಪಷ್ಟವಾಗಬೇಕಿದೆ.

ಇದನ್ನೂ ಓದಿ : RSS ಶಾಖೆಗಳು ಒಂದೊಂದಾಗಿ ಬಂದ್ ಕೊನೆಗೂ RSS ಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್ ಸರ್ಕಾರ

You may also like

Leave a Comment