Home » SBI: ಸಾಲ ಕಟ್ಟಲು ಡೆಡ್‌ಲೈನ್‌ ಬಂದ್ರೂ ಕಂತು ಕಟ್ಟದವರಿಗೆ ಚಾಕೋಲೇಟ್ ಕೊಡ್ತಿದೆ SBI ಬ್ಯಾಂಕ್ !! ಏನಿದು ಬ್ಯಾಂಕ್ ನ ಹೊಸ ನಡೆ?

SBI: ಸಾಲ ಕಟ್ಟಲು ಡೆಡ್‌ಲೈನ್‌ ಬಂದ್ರೂ ಕಂತು ಕಟ್ಟದವರಿಗೆ ಚಾಕೋಲೇಟ್ ಕೊಡ್ತಿದೆ SBI ಬ್ಯಾಂಕ್ !! ಏನಿದು ಬ್ಯಾಂಕ್ ನ ಹೊಸ ನಡೆ?

2 comments
SBI's Novel Method

SBI’s Novel Method: ರಾಷ್ಟ್ರೀಯ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೊಡ್ಡ ಸಾಲದಾತ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಕಾಲದಲ್ಲಿ ಸಾಲ ಮರುಪಾವತಿಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಕ್ರಮ(SBI’s Novel Method)ಕೈಗೊಳ್ಳಲು ಮುಂದಾಗಿದೆ.

ಸಾಲದ (Loan)ಕಂತು ಕಟ್ಟದೇ ಹೋಗುವ ಗ್ರಾಹಕರನ್ನು ಎಐ ಟೆಕ್ನಾಲಜಿಯ ಮೂಲಕ ಗುರುತಿಸಿ ಅವರ ಮನೆಗೆ ಅನಿರೀಕ್ಷಿತವಾಗಿ ಮತ್ತು ಖುದ್ದಾಗಿ ಭೇಟಿ ನೀಡಲು ಎಸ್ಬಿಐ ಯೋಜನೆ ಹಾಕಿದೆ. ಗ್ರಾಹಕರ ಮನೆಗೆ ಹೋಗುವಾಗ ಒಂದು ಪ್ಯಾಕ್ ಚಾಕೊಲೇಟ್(Chocolate)ತೆಗೆದುಕೊಂಡು ಹೋಗಿ ಕೊಟ್ಟು ಬರುವ ಯೋಜನೆ ಹಾಕಿಕೊಂಡಿದೆ.

ಎಸ್‌ಬಿಐನ ರೀಟೇಲ್‌ ಸಾಲ ಜೂನ್ 2023 ರ ತ್ರೈಮಾಸಿಕದಲ್ಲಿ 10,34,111 ಕೋಟಿ ರೂ.ಗಳಿಂದ ಒಂದು ವರ್ಷದಲ್ಲಿ 12,04,279 ಕೋಟಿಗೆ ಅಂದರೆ ಶೇಕಡ 16.46 ಏರಿಕೆ ಕಂಡಿದೆ. ವಾಸ್ತವವಾಗಿ ಸುಮಾರು 16 ಪ್ರತಿಶತದಷ್ಟು ಎರಡಂಕಿಯ ಸಾಲದ ಬೆಳವಣಿಗೆ ಚಿಲ್ಲರೆ ಸಾಲಗಳಿಂದಲೇ ಬಂದಿದೆ. SBI ಅತಿ ದೊಡ್ಡ ಅಡಮಾನ ಸಾಲದಾತನಾಗಿದ್ದು, ಎಸ್‌ಬಿಐನ 12 ಲಕ್ಷ ಕೋಟಿ ರೂಪಾಯಿಗಳ ಸಾಲದ ಪೈಕಿ ವೈಯಕ್ತಿಕ, ವಾಹನ, ಗೃಹ ಮತ್ತು ಶಿಕ್ಷಣ ಸಾಲಗಳನ್ನು ಒಳಗೊಂಡಿದೆ. ಈ ಪೈಕಿ 6.3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಗೃಹ ಸಾಲ ಹೊಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಗದಿತ ದಿನದೊಳಗೆ ಕಂತಿನ ಹಣ ಕಟ್ಟದೇ ಇರುವ ವ್ಯಕ್ತಿಗಳಿಗೆ ಒಂದು ಪ್ಯಾಕ್ ಚಾಕೊಲೇಟ್ಗಳನ್ನು ಕೊಟ್ಟು ನಯವಾಗಿ ಮುಖಭಂಗ ಮಾಡುವ ಕೆಲಸಕ್ಕೆ ಎಸ್ಬಿಐ ಯೋಜನೆ ಹಾಕಿಕೊಂಡಿದೆ. ಸಾಲ ಕಟ್ಟದೆ ಇರಲು ಯೋಜಿಸುತ್ತಿರುವ ಸಾಲಗಾರನು ಬ್ಯಾಂಕ್‌ನಿಂದ ರಿಮೈಂಡರ್ ಕರೆಗೆ ಉತ್ತರ ನೀಡುತ್ತಿಲ್ಲ ಎನ್ನಲಾಗಿದೆ. ಹೀಗಾಗಿ, ಅಂತಹವರ ಮನೆಗಳಿಗೆ ಸರ್‌ಪ್ರೈಸ್‌ ಭೇಟಿ ಕೊಡೋದು ಉತ್ತಮ ಮಾರ್ಗವಾಗಿದೆ ಎಂದು ಬ್ಯಾಂಕ್‌ ಹೇಳಿಕೊಂಡಿದೆ.

ಕೆಲವೆಡೆ ಈ ಪ್ರಯೋಗಗಳು ನಡೆದಿದ್ದು, ಅದರಲ್ಲಿ ಯಶಸ್ಸು ಕೂಡ ಸಿಕ್ಕಿದೆಯಂತೆ. ಹೀಗಾಗಿ, ಎಲ್ಲೆಡೆ ಈ ತಂತ್ರವನ್ನು ಅನುಸರಿಸಲು ಎಸ್ಬಿಐ ಮುಂದಾಗಿದೆ. ಈ ಕ್ರಮಕ್ಕೆ ಪೂರಕವಾಗಿ ಎಸ್ಬಿಐ ಎರಡು ರೀತಿಯ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಕೆ ಮಾಡಲಿದೆ. ಸಾಲ ಪಡೆದು ಕಂತುಗಳನ್ನು ಕಟ್ಟುವವರಿಗೆ ರಿಮೈಂಡರ್ ಕರೆ ಹೋಗಲಿದ್ದು, ಸಾಲಗಾರರು ಈ ತಿಂಗಳು ಕಂತು ಕಟ್ಟುವ ಸಂಭವ ವಿದೆಯೇ ಎಂಬುದನ್ನು ಎಐ ಟೆಕ್ನಾಲಜಿಯಿಂದ ಪತ್ತೆ ಮಾಡಲಿದೆಯಂತೆ. ಈ ಗ್ರಾಹಕರ ಮನೆಗಳಿಗೆ ಹೋಗಿ ಭೇಟಿಯಾಗಿ ಬರುವುದು ಎಸ್ಬಿಐ ಪ್ಲಾನ್ ಮಾಡಿಕೊಂಡಿದೆ. ಈ ರೀತಿ ಮಾಡಿದಲ್ಲಿ ಗ್ರಾಹಕರಿಗೆ ನೇರವಾಗಿ ಕಂತು ಕಟ್ಟಬೇಕು ಎನ್ನುವ ಮುಂಜಾಗ್ರತೆ ಬರಲಿದೆ ಎನ್ನುವುದು ಬ್ಯಾಂಕಿನ ಅನಿಸಿಕೆ ಎನ್ನಲಾಗಿದೆ.

ಇದನ್ನೂ ಓದಿ: Be Careful: ರುಚಿ ನೋಡಲು ನೀವು ಅರೆಬೆಂದ ಆಹಾರ ತಿಂತೀರಾ ?! ಹಾಗಿದ್ರೆ ಎಚ್ಚರ.. ದೇಹಕ್ಕೆ ಈ ಹಾನಿ ತರುತ್ತದೆ ಆ ತರದ ಅಭ್ಯಾಸ !!

You may also like

Leave a Comment