Bank Jobs 2023: ಚಿತ್ರದುರ್ಗ, ಸೆಪ್ಟೆಂಬರ್ 18; ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಚಿತ್ರದುರ್ಗ ವಿವಿಧ ವೃಂದದಲ್ಲಿ ಹುದ್ದೆಗಳ (Bank Jobs 2023)ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-10-2023
ಹುದ್ದೆಗಳ ಸಂಖ್ಯೆ: 68
ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕರು 6 ಹುದ್ದೆ
ಪ್ರಥಮ ದರ್ಜೆ ಗುಮಾಸ್ತರು 9
ದ್ವಿತೀಯ ದರ್ಜೆ ಗುಮಾಸ್ತರು 35
ಕಂಪ್ಯೂಟರ್ ಇಂಜಿನಿಯರ್ 2
ವಾಹನ ಚಾಲಕರು 2
ಅಟೆಂಡರ್ಸ್/ ಸಹಾಯಕರು 14 ಹುದ್ದೆ
ವೇತನ; ಸಹಾಯಕ ವ್ಯವಸ್ಥಾಪಕ ಹುದ್ದೆಗೆ 40,900-78,200 ರೂ.
ಪ್ರಥಮ ದರ್ಜೆ ಗುಮಾಸ್ತ 37,900-70,850 ರೂ.
ದ್ವಿತೀಯ ದರ್ಜೆ ಗುಮಾಸ್ತ 30,350-58,250 ರೂ.
ಕಂಪ್ಯೂಟರ್ ಇಂಜಿನಿಯರ್ 30,350-58,250 ರೂ.
ವಾಹನ ಚಾಲಕರು 27,650-52,650 ರೂ.
ಅಟೆಂಡರ್ಸ್/ ಸಹಾಯಕರು ಹುದ್ದೆಗೆ 23,500-47,650 ರೂ.
ವಯೋಮಿತಿ: ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35, 2ಎ/ 2ಬಿ/ 3ಎ/ 3ಬಿ 38 ವರ್ಷ, ಪ. ಜಾ/ ಪ.ಪಂ/ ಪ್ರವರ್ಗ-1 40 ವರ್ಷಗಳನ್ನು ಮೀರಿರಬಾರದು.
ಮಾಜಿ ಸೈನಿಕರಿಗೆ ಮಿಲಿಟರಿ ಸೇವೆಯಲ್ಲಿ ಸೇವೆ ಸಲ್ಲಿಸಿದ ಅವಧಿ, ವಿಧವೆಯರಿಗೆ 10 ವರ್ಷ, ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3 (ಎ), 3(ಬಿ)- 1500 ರೂ.ಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ, ಮಾಜಿ ಸೈನಿಕ ಹಾಗೂ ವಿಧವಾ ಅಭ್ಯರ್ಥಿಗಳಿಗೆ ರೂ. 750 ಶುಲ್ಕ
ಒಂದೇ ಹುದ್ದೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸತಕ್ಕದ್ದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಕೊರಿಯರ್, ಅಂಚೆ ಮೂಲಕ ಸಲ್ಲಿಸಬಾರದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿಯ ಡೈರೆಕ್ಟ್ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: KSRTC ನೌಕರರಿಗೆ ʼಗೌರಿ-ಗಣೇಶʼ ಹಬ್ಬದಂದೇ ಸಿಕ್ಕಿದೆ ಭರ್ಜರಿ ಗುಡ್‌ನ್ಯೂಸ್!! ಹೆಚ್ಚುವರಿ ವೇತನಕ್ಕೆ ಆದೇಶ!
