Home » M P Renukacharya: ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ?!!

M P Renukacharya: ಬಿಜೆಪಿಯ ಮತ್ತೊಂದು ವಿಕೆಟ್ ಪತನ- ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ?!!

3 comments
M P Renukacharya

M P Renukacharya: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಬಿಜೆಪಿಯ ಪ್ರಬಲ ನಾಯಕನಾಗಿರುವಂತಹ ಎಂ ಪಿ ರೇಣುಕಾಚಾರ್ಯರವರು(M P Renukacharya) ನಿರಂತರವಾಗಿ ಬಿಜೆಪಿ(BJP) ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಅಲ್ಲದೇ ಇತ್ತೀಚಿಗೆ ಅವರು ಹೆಚ್ಚಾಗಿ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವುದು ಕಾಂಗ್ರೆಸ್(Congress) ಸೇರುವುದು ಪಕ್ಕಾ ಅನೋ ವಿಚಾರ ಮುನ್ನಲೆಗೆ ಬಂದಿದೆ.

ಹೌದು, ಬಿಜೆಪಿ ಪ್ರಬಲ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ ಪರಮಾಪ್ತರಲ್ಲಿ ಒಬ್ಬರಾದ ಎಂಪಿ ರೇಣುಕಾಚಾರ್ಯ (MP Renukacharya) ಅವರು ಸದ್ಯದಲ್ಲೇ ಭಾರತೀಯ ಜನತಾ ಪಾರ್ಟಿಗೆ (BJP) ಗುಡ್ ಬೈ ಹೇಳ್ತಾರಾ, ಕಾಂಗ್ರೆಸ್ ಸೇರ್ತಾರ ಅನ್ನೋ ಅನುಮಾನವೊಂದು ಇದೀಗ ಎದ್ದಿದೆ.

ಅಂದಹಾಗೆ ಇತ್ತೀಚೆಗೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಸೇರ್ಪಡೆಗೆ ಮುಕ್ತ ಆಹ್ವಾನ ನೀಡಿದ್ದರು. ಈ ಬೆನ್ನಲ್ಲೇ ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‍ಎಸ್ ಮಲ್ಲಿಕಾರ್ಜುನ್ (SS Mallikarjun) ಮನೆಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ. ಕಾಂಗ್ರೆಸ್ (Congress) ಸೇರ್ಪಡೆ ವದಂತಿ ಬೆನ್ನಲ್ಲೆ ಶಾಮನೂರು ಮನೆಗೆ ಕೂಡ ದಿಢೀರ್ ಭೇಟಿ ನೀಡಿ ಎಸ್ ಎಸ್ ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಕೊಂಚ ತಳಮಳ ಶುರುಮಾಡಿದೆ. ಅನ್ನೋ ಪ್ರಶ್ನೆ ಮೂಡಿದೆ.

ಅಲ್ಲದೆ ಇತ್ತೀಚೆಗೆ ರೇಣುಕಾಚಾರ್ಯ ಅವರು ನೀಡಿರುವ ಕೆಲವು ಹೇಳಿಕೆಗಳು, ಬಿಜೆಪಿ ವಿರುದ್ಧ ಗುಡುಗಿರುವುದು ಇದೆಲ್ಲದಕ್ಕೂ ಪುಷ್ಟಿ ನೀಡಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ. ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಇಂದು ನಮ್ಮ ಪಕ್ಷಕ್ಕೆ ಅದೇ ಪರಿಸ್ಥಿತಿ ಬಂದಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ಅವರು ಗುಡುಗಿದ್ದರು.

ಇಷ್ಟೇ ಅಲ್ಲದೆ ಸರ್ಕಾರ ರಚನೆಯಾಗಿ 100 ದಿನ ಪೂರೈಸಿದರೂ ಅಧಿಕೃತ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಈ ಬೆಳವಣಿಗೆ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಕಾಂಗ್ರೆಸ್ ಮಾಡುವ ಆರೋಪಗಳಿಗೆ ನಾವು ಉತ್ತರ ಕೊಡಲಾಗದ ಸ್ಥಿತಿಗೆ ಬಂದಿದ್ದೇವೆ ಎಂದು ಎಂಪಿ ರೇಣುಕಾಚಾರ್ಯ ವಿಷಾದಿಸಿದ್ದರು. ಇದೆಲ್ಲವೂ ಕೂಡ ಅವರ ಮುಂದಿನ ನಡೆ ಬಗ್ಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: D K Shivkumar: 3 ಡಿಸಿಎಂ ಹುದ್ದೆ ವಿಚಾರ – ಭಾರೀ ಕುತೂಹಲ ಕೆರಳಿಸಿದ ಡಿ ಕೆ ಶಿವಕುಮಾರ್ ಹೇಳಿಕೆ !!

You may also like

Leave a Comment