5
America: ಅಮೆರಿಕಾದ( America) ಇಬ್ಬರು ಸೂಪರ್ ಮಾಡೆಲ್ಗಳು ತಮ್ಮ ಐಷರಾಮಿ ಅಪಾರ್ಟ್ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಮೆಲೀಸಾ ಮೂನಿ (31) ಇವರ ಶವ ಸೆ.12ರಂದು ಪತ್ತೆಯಾಗಿದ್ದು, ನಿಕೋಲೆ ಕೋಟ್ಸ್ (32)ಇವರ ಶವ ಸೆ.10 ರಂದು ಪತ್ತೆಯಾಗಿದೆ. ಇವರಿಬ್ಬರು ಅಪಾರ್ಟ್ಮೆಂಟ್ಗಳು ಒಂದು ಮೈಲು ದೂರದಲ್ಲಿದ್ದೆ ಎಂದು ತಿಳಿದು ಬಂದಿದೆ.
ಇವರಿಬ್ಬರ ಕುಟುಂಬದವರು ಇವರಿಬ್ಬರಿಗೆ ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದು, ಆದರೆ ವಿಫಲವಾದ ಹಿನ್ನೆಲೆ ಪೊಲೀಸರಿಗೆ ವಿಚಾರ ತಿಳಿಸಿದಾಗ, ಅವರು ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ನಿಕೋಲೆ ಕೋಟ್ಸ್ ಅವರ ಕುಟುಂಬದವರು ಇದೊಂದು ಕೊಲೆ ಎಂದು ಆರೋಪ ಮಾಡಿರುವ ಕಾರಣ ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಈ ಎರಡೂ ಪ್ರಕರಣಗಳು ಒಂದಕ್ಕೊಂದು ಸಂಬಂಧ ಹೊಂದಿದೆಯೇ ಎಂದು ಇನ್ನೂ ಖಚಿತವಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
