Delhi High Court: ಯಾವುದೇ ಕಾರಣವಿಲ್ಲದೆ ದೀರ್ಘಕಾಲದವರೆಗೆ ಲೈಂಗಿಕತೆಯನ್ನು ನಿರಾಕರಣೆ ಮಾಡುವುದು ಸಂಗಾತಿಗೆ ಕ್ರೂರಕ್ಕೆ ಸಮಾನ ಎಂದು ದೆಹಲಿ ಹೈಕೋರ್ಟ್(Delhi High Court )ಅಭಿಪ್ರಾಯ ವ್ಯಕ್ತಪಡಿಸಿದೆ.
2004 ರಲ್ಲಿ ವಿವಾಹವಾದ ಜೋಡಿಯ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆಯಾದ (Marraige)ಕೆಲವೇ ದಿನಗಳಲ್ಲಿ ಪತ್ನಿ(Wife )ತನ್ನ ತವರಿಗೆ ಹೋದವಳು ಮತ್ತೆ ಹಿಂತಿರುಗಲಿಲ್ಲ. ಹೀಗಾಗಿ, ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.ಮದುವೆಯಾದ ಕೇವಲ 35 ದಿನಗಳ ಕಾಲ ಒಟ್ಟಿಗೆ ಇದ್ದ ದಂಪತಿಗೆ ಮದುವೆ ಪೂರ್ಣಗೊಳ್ಳದ ಹಿನ್ನೆಲೆ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ನೀಡಿದೆ. ದೆಹಲಿ ಹೈಕೋರ್ಟ್ನಲ್ಲಿ ಈ ವಿಚ್ಛೇದನವನ್ನು ಪ್ರಶ್ನಿಸಿದ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದರು.ದೆಹಲಿ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.
ಯಾವುದೇ ಕಾರಣವಿಲ್ಲದೆ ಲೈಂಗಿಕ ಕ್ರಿಯೆ (Physical Relationship)ನಡೆಸಲು ನಿರಾಕರಿಸುವುದು ಸಂಗಾತಿಗೆ ಕ್ರೂರವಾಗಿ ಪರಿಣಮಿಸುತ್ತದೆ. ಈ ಆಧಾರದ ಮೇರೆಗೆ ವಿಚ್ಛೇದನ ನೀಡಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಈ ತೀರ್ಪಿನಲ್ಲಿ, ಲೈಂಗಿಕತೆ ಇಲ್ಲದ ವಿವಾಹವು ಶಾಪದಂತೆ.ದೈಹಿಕ ಬಂಧದಲ್ಲಿ ಖಿನ್ನತೆಗೆ ಒಳಗಾಗುವುದ ಹೊರತು ಬೇರೆ ಏನೂ ಕೆಟ್ಟ ಪರಿಣಾಮ ನೀಡುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಹಿನ್ನೆಲೆ ಅವರ ವೈವಾಹಿಕ ಸಂಬಂಧವು ಪರಿಪೂರ್ಣವಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಯಾವುದೇ ಪೂರಕ ಸಾಕ್ಷಿಯಿಲ್ಲದೆ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಾವುದೇ ಕಾರಣವಿಲ್ಲದೆ ಲೈಂಗಿಕ ಕ್ರಿಯೆ ನಡೆಸಲು ಉದ್ದೇಶಪೂರ್ವಕವಾಗಿ ನಿರಾಕರಿಸುವುದು ಪತಿಗೆ ಕ್ರೂರವಾಗಿರುತ್ತದೆ ಎಂದು ದೆಹಲಿ ಹೈಕೋರ್ಟ್ ಪೀಠ ತಿಳಿಸಿದ್ದು, ಹೀಗಾಗಿ, ದೆಹಲಿ ಹೈಕೋರ್ಟ್ ಈ ಆಧಾರದ ಮೇರೆಗೆ ವಿಚ್ಛೇದನ ನೀಡಬಹುದೆಂದು ತೀರ್ಪು ಪ್ರಕಟಿಸಿದೆ.ಈ ಮೂಲಕ ಕುಟುಂಬ ನ್ಯಾಯಾಲಯವು ಅನುಸರಿಸಿದ ಕಾರ್ಯವಿಧಾನವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
