Home » Women Reservation Bill: ಮಹಿಳಾ ಮೀಸಲಾತಿ ನಮ್ಮದು – ಸೋನಿಯಾ !! ‘ ಅದು ‘ ಕೂಡ ನಿಮ್ಮದೇ ಅಲ್ಲವೇ ?- ಸಿ ಟಿ ರವಿ ಪ್ರಶ್ನೆ

Women Reservation Bill: ಮಹಿಳಾ ಮೀಸಲಾತಿ ನಮ್ಮದು – ಸೋನಿಯಾ !! ‘ ಅದು ‘ ಕೂಡ ನಿಮ್ಮದೇ ಅಲ್ಲವೇ ?- ಸಿ ಟಿ ರವಿ ಪ್ರಶ್ನೆ

0 comments

Women’s Reservation Bill: ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ಮಂಡಿಸಲು ಉದ್ದೇಶಿಸಿರುವ ಮಹಿಳಾ ಮೀಸಲಾತಿ ಮಸೂದೆ(Women’s Reservation Bill) ‘ನಮ್ಮದು’ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Soniya Gandhi)ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕ ಸಿ. ಟಿ. ರವಿ(C.T Ravi) ಟಾಂಗ್ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ(Social Media)ಭಾರೀ ವೈರಲ್ ಆಗಿದೆ.

ಸುದೀರ್ಘ ಸಮಯದಿಂದ ಕೇಂದ್ರಕ್ಕೆ ಬೇಡಿಕೆ ಇರಿಸಿದ್ದ ಮಹಿಳಾ ಮೀಸಲು ಮಸೂದೆಯ ಮಂಡನೆಯನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂಬ ಊಹಾಪೋಹದ ಬೆನ್ನಲ್ಲೇ ಸೋನಿಯ ಗಾಂಧಿ ಅವರು ಮಹಿಳಾ ಮೀಸಲಾತಿ ವಿಧೇಯಕ ‘ನಮ್ಮದು’ ಎಂದು ಹೇಳಿದ್ದಾರೆ.

ಸಂಸತ್ ಪ್ರಾತಿನಿಧ್ಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ವಿಶೇಷ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂಬ ವರದಿಯ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದಾಗ , “ಇದು ನಮ್ಮದು, ಅಪ್ನಾ ಹೈ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕ ಸಿಟಿ ರವಿ ಟ್ವಿಟ್ಟರ್‌ನಲ್ಲಿ ಇದಕ್ಕೆ ಟಾಂಗ್ ನೀಡಿದ್ದಾರೆ. ಇನ್ನೂ ‘ಮುಂದೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಕೂಡ ನಮ್ಮದೇ ಎನ್ನುತ್ತೀರಾ?’ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Death News: ಮಕ್ಕಳ ನೇಣು ಹಾಕಿಕೊಳ್ಳುವ ಆಟ – ಸ್ಟೂಲ್ ಜಾರಿತು, ಪ್ರಾಣ ಹಾರಿತು !!

You may also like

Leave a Comment