Home » Property Purchase: ಆಸ್ತಿ ಖರೀದಿ, ಮಾರಾಟ ಮಾಡುವವರಿಗೆ ಬಿಗ್ ಶಾಕ್- ಸರ್ಕಾರದಿಂದ ಬಂತು ದರ ಹೆಚ್ಚಿಸೋ ಹೊಸ ಮಾರ್ಗಸೂಚಿ – ಈ ದಿನದಿಂದಲೇ ಜಾರಿ

Property Purchase: ಆಸ್ತಿ ಖರೀದಿ, ಮಾರಾಟ ಮಾಡುವವರಿಗೆ ಬಿಗ್ ಶಾಕ್- ಸರ್ಕಾರದಿಂದ ಬಂತು ದರ ಹೆಚ್ಚಿಸೋ ಹೊಸ ಮಾರ್ಗಸೂಚಿ – ಈ ದಿನದಿಂದಲೇ ಜಾರಿ

0 comments

Property Purchase: ಆಸ್ತಿಯ ಖರೀದಿ ಅಥವಾ ಮಾರಾಟಕ್ಕಾಗಿ ಹಲವಾರು ಕಾನೂನು ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಜೊತೆಗೆ ಆಸ್ತಿ ಖರೀದಿ ಮತ್ತು ಮಾರಾಟಗಾರರಿಗೆ ಸರ್ಕಾರದಿಂದ ದೊಡ್ಡ ಶಾಕ್ ಎದುರಾಗಿದೆ. ಹೌದು, ಆಸ್ತಿ ಖರೀದಿ ಮತ್ತು ಮಾರಾಟ ಬಗ್ಗೆ ಪ್ರಸ್ತಾಪ ಮಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಕಂದಾಯ ಇಲಾಖೆಯ ನಿಯಮಾವಳಿ ಪ್ರಕಾರ ಪ್ರತಿವರ್ಷ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು ಎಂಬ ನಿಯಮವಿದೆ. ಆದ್ದರಿಂದ ಅಕ್ಟೊಬರ್ 1 ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ರಷ್ಟು ಹೆಚ್ಚಳವಾಗಲಿದೆ ಎಂದಿದ್ದಾರೆ.

ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರಕಾರ, ಹಲವು ವರ್ಷಗಳಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿರಲಿಲ್ಲ. ಹಾಗಾಗಿ ಅಕ್ಟೊಬರ್ 1 ರಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಲಿದ್ದೇವೆ ಎಂದರು. ಇನ್ನು ರಾಜ್ಯದಲ್ಲಿ ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರುತ್ತೆ ಎಂದು ತಿಳಿಸಿದ್ದಾರೆ.

ಆದರೆ ರಾಜ್ಯದಲ್ಲಿ ಎಲ್ಲಾ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ, ಅಂತಹ ಪ್ರದೇಶಗಳಲ್ಲಿ ದರ ಹೆಚ್ಚಳವಾಗುವುದಿಲ್ಲ ಎಂದರು. ಈ ಬಗ್ಗೆ ಆಕ್ಷೇಪ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿದ ನಂತರ ಅಧಿಸೂಚನೆ ಪ್ರಕಟ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

You may also like

Leave a Comment