Home » Nari shakti vandan: ‘ಮಹಿಳಾ ಮೀಸಲಾತಿ’ ಜಾರಿ ಬೆನ್ನಲ್ಲೇ ದೇಶದ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ – ಅರೆ ಹೀಗೇಕೆ ಮಾಡಿತು ಮೋದಿ ಸರ್ಕಾರ ?!

Nari shakti vandan: ‘ಮಹಿಳಾ ಮೀಸಲಾತಿ’ ಜಾರಿ ಬೆನ್ನಲ್ಲೇ ದೇಶದ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ – ಅರೆ ಹೀಗೇಕೆ ಮಾಡಿತು ಮೋದಿ ಸರ್ಕಾರ ?!

1 comment
Nari shakti vandan adhiniyam

Nari shakti vandan adhiniyam: ದೇಶದ ಹೊಸ ಸಂಸತ್ತು ಮೊದಲ ಅಧಿವೇಶನದಲ್ಲಿಯೇ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು, ಮಹಿಳೆಯರ ಬಹು ನಿರೀಕ್ಷಿತ ಮಸೂದೆಯಾದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ‘ನಾರಿ ಶಕ್ತಿ ವಂದನ್’ ವಿಧೇಯಕ(ಮಹಿಳಾ ಮೀಸಲಾತಿ ಮಸೂದೆ)ವನ್ನು ಬುಧವಾರ(ಸೆ.20) ಲೋಕಸಭೆಯಲ್ಲಿ ಅಧಿಕ ಬಹುಮತಗಳೊಂದಿಗೆ ಅಂಗೀಕರಿಸಲಾಗಿದೆ. ಆದರೆ ಈ ಬೆನ್ನಲ್ಲೇ ಮಹಿಳೆಯರಿಗೆ ಕೇಂದ್ರ ಬಿಗ್ ಶಾಕ್ ನೀಡಿದೆ.

ಹೌದು, ಕೇಂದ್ರ ಸರ್ಕಾರ ಮಂಡಿಸಿದ್ದ ನಾರಿಶಕ್ತಿ ವಂದನ್‌ ಅಧಿನಿಯಮಕ್ಕೆ (Nari Shakti Vandan Adhiniyam) ಲೋಕಸಭೆ (Lok Sabaha) ಅನುಮೋದನೆ ನೀಡಿದೆ. ದಿನವಿಡಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದ ಬಳಿಕ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (33% women reservation) ನೀಡುವ ಮಸೂದೆ ಪರ 454 ಮಂದಿ ಸದಸ್ಯರ ಸಂಪೂರ್ಣ ಬೆಂಬಲದೊಂದಿಗೆ ಇದು ಮಂಡನೆಯಾಯಿತು. ಆದರೆ ಇದಾದ ಬಳಿಕ ಮಾತನಾಡಿದ ಅಮಿತ್ ಶಾ ಅವರು ಈ ಯೋಜನೆಯು ಮುಂಬರುವ ಲೋಕಸಭಾ ಚುನಾವಣೆಗೆ ಅನ್ವಯವಾಗುವುದಿಲ್ಲ ಎಂದು ಎಲ್ಲಾ ಮಹಿಳೆಯರಿಗೆ ಬಿಗ್ ಶಾಕ್ ನೀಡಿದ್ದಾರೆ. ಆದರೆ ಇದಕ್ಕೆ ಕೆಲವು ಕಾರಣಗಳೂ ಇವೆ.

ಜಾರಿಗೆ ಬರಲು ಎಷ್ಟು ವರ್ಷ ಬೇಕಾಗಬಹುದು?
• ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ಕೈಗೊಂಡ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಇದಕ್ಕೆ ಸುಮಾರು 15 ವರ್ಷ ಬೇಕಾಗಬಹುದು ಅಂದಾಜಿಸಲಾಗಿದೆ. ಅಥವಾ
• ತಿದ್ದುಪಡಿ ಪ್ರಕಾರ, ನೂತನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಬಳಿಕವಷ್ಟೇ ಮಹಿಳಾ ಮೀಸಲು ಜಾರಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ 2026ಕ್ಕೆ ನೂತನ ಜನಗಣತಿ ಆಧರಿಸಿ ಕ್ಷೇತ್ರ ಮರುವಿಂಗಡಣೆ ನಡೆಯಲಿದ್ದು, 2029ರ ಚುನಾವಣೆಗೆ ಇದರ ಅನುಷ್ಠಾನ ಸಾಧ್ಯವಾಗಲಿದೆ ಎಂದು ಸರಕಾರ ಹೇಳಿದೆ.
• ಪ್ರತಿ ಕ್ಷೇತ್ರ ವಿಂಗಡಣೆ ಕಸರತ್ತು ಮುಗಿದ ಬಳಿಕ ಮಹಿಳೆಯರ ಕ್ಷೇತ್ರವನ್ನು ನಿರ್ಣಯಿಸಲಾಗುವುದು ಎಂದು ಮಸೂದೆ ವಿವರಿಸಿದೆ.

ಅಲ್ಲದೆ ಮಹಿಳಾ ಮೀಸಲಾತಿ ಮಸೂದೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀತಿ ನಿರೂಪಣೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಅದೇ ರೀತಿ, 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯನ್ನು ಸಾಧಿಸಲು ಮಹಿಳೆಯರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಮಸೂದೆಯ ಉದ್ದೇಶವನ್ನು ವಿವರಿಸುತ್ತ ಸರ್ಕಾರ ಹೇಳಿದೆ.

ಇದನ್ನೂ ಓದಿ:Gift politics: ಸಿದ್ದರಾಮಯ್ಯ ಗಿಫ್ಟ್ ಪ್ರಕರಣ- ಕಾಂಗ್ರೆಸ್ ನ 135 ಶಾಸಕರು ಅನರ್ಹ ?! ಅರೆ ಏನಿದು ಶಾಕಿಂಗ್ ನ್ಯೂಸ್ ?! 

You may also like

Leave a Comment